ಮಂಗಳೂರು : ಚಾಲಿ ಪೋಲಿಲು ಹಿಟ್ ಸಿನೆಮಾ ನೀಡಿರುವ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ ಎಕ್ಕಸಕ ಖ್ಯಾತಿಯ ಕೆ ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಜಯಕಿರಣ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ “ನಾನ್ವೆಜ್” ಕನ್ನಡ- ತುಳು ಭಾಷೆಯ ಸಿನಿಮಾ ಆಗೋಸ್ಟ್ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದು ಯುವ ಸಮುದಾಯವನ್ನು ಸೆಳೆದು ಹಿಟ್ ಆಗುವುದು ಖಚಿತ.ಒಂದು ಆಕರ್ಷಕ ವಿಷಯವನ್ನು ಕುತೂಹಲಕಾರಿಯಾಗಿ ಬೆಳೆಸುತ್ತಾ ಎಲ್ಲರ ಗಮನ ಸೆಳೆಯುತ್ತಾ ಸಾಗುವ ಈ ಸಿನಿಮಾದಲ್ಲಿ ಕುಸೆಲ್ದರಸೆ ನವೀನ್ ಡಿ. ಪಡೀಲ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ನಾಯಕ ನಟನಾಗಿ ಅಥರ್ವ ಪ್ರಕಾಶ್, ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಟಿಸಿದ್ದಾರೆ. ದೀಪಕ್ ಶೆಟ್ಟಿ ಸುರತ್ಕಲ್, ರೂಪ ವರ್ಕಾಡಿ ಮುಂತಾದ ಪ್ರಮುಖ ಕಲಾವಿದರು ತಾರಾಗಣದಲ್ಲಿದ್ದಾರೆ. ಹಿರಿಯ ಕಲಾವಿದರ ಜತೆಯಲ್ಲಿ ಕಿರಿಯರೂ ಸೇರಿಕೊಂಡು ಹಳೆ ಬೇರು ಹೊಸ ಚಿಗುರಿನೊಂದಿಗೆ ಮೂಡಿ ಬಂದಿರುವ ಈ ಸಿನಿಮಾವು ಹಾಸ್ಯಮಿಶ್ರಿತವಾಗಿ ಸಾಗುತ್ತಾ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಲಿದೆ.

ಒಂದು ಶಬ್ದವನ್ನು ನಾವು ಹೇಗೆ ಅಪಥ್ಯವಾಗಿ ನೋಡುತ್ತೇವೆ ಹಾಗೂ ನಮ್ಮ ಚಿಂತನೆ ಗುಣಾತ್ಮಕತೆಯಿಂದ ಹೆಚ್ಚಾಗಿ ಋಣಾತ್ಮಕತೆಗೆ ಹೇಗೆ ಬೇಗನೆ ಹೊರಳುತ್ತದೆ ಎಂಬುದಕ್ಕೆ ಈ ಸಿನಿಮಾವನ್ನು ನೋಡಲೇಬೇಕು. ಪ್ರತಿಯೊಂದು ದೃಶ್ಯವೂ ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡು ಸಾಗುತ್ತದೆ. ಇದೊಂದು ಹಿಟ್ ಸಿನಿಮಾ ಆಗುವ ಸಾಧ್ಯತೆ ಹೆಚ್ಚಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸುತ್ತಿದೆ.
ಸಿನಿಮಾಕ್ಕೆ ಒಂದೇ ಹಂತದಲ್ಲಿ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿದೆ.

ಸಿನಿಮಾದಲ್ಲಿ ಚಂದುಮೇ ಪೈಯೂರು ಕ್ಯಾಮರಾದಲ್ಲಿ ಕೆಲಸ ಮಾಡಿದ್ದಾರೆ.ಯುವ ಸಮುದಾಯವನ್ನು ಅಸಕರ್ಷಿಸುವ ಕತೆ ಚಿತ್ರದಲ್ಲಿದೆ. ಹಾಸ್ಯ, ಸೆಂಟಿಮೆಂಟ್, ಗಂಭೀರ ಎಲ್ಲವೂ ಇದೆ. ಹದಿಹರೆಯದ ಯುವ ಪ್ರೇಮಿಗಳ ಪ್ರೇಮ ಸಲ್ಲಾಪವೂ ಸಿನಿಮಾದಲ್ಲಿ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯುವುದರಲ್ಲಿ ಯಾವುದೇ ಸಂಶಯ ಇಲ್ಲ.

ಎಕ್ಕ ಸಕ, ಪಿಲಿಬೈಲ್ ಯಮುನಕ್ಕ ಸಿನಿಮಾದ ನಿರ್ದೇಶಕ ಕೆ ಸೂರಜ್ ಶೆಟ್ಟಿ ಒಂದು ಒಳ್ಳೆಯ ಸಮಾಜಕ್ಕೆ ಸಂದೇಶಭರಿತ ಚಿತ್ರವನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ಹಲವು ದಿನಗಳಿಂದ ಸಿನಿಮಾ ಬಿಡುಗಡೆಗೆ ಕಾತರಗೊಂಡಿದ್ದ ಪ್ರೇಕ್ಷಕರಿಗೆ ಆಗೋಸ್ಟ್ 1 ರಂದು ರಾಜ್ಯಾದ್ಯಂತ ನಾನ್ ವೆಜ್ ಸಿನಿಮಾ ಬಿಡುಗಡೆಗೊಳ್ಳಲಿದೆ.
ಅಥರ್ವ ಪ್ರಕಾಶ್ ಗೆ ಡಬಲ್ ಧಮಾಕ

ಅಥರ್ವ ಪ್ರಕಾಶ್ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ನಟ ಅಥರ್ವ್ ಗೆ ಹೊಸ ಹುಮ್ಮಸ್ಸು ಇಮ್ಮಡಿಸಿದೆ. ಜೂನ್ 26 ಕ್ಕೆ ಸತ್ಯ ಪ್ರಕಾಶ್ ನಿರ್ದೇಶನದ ಎಕ್ಸ್ ಆ್ಯಂಡ್ ವೈ ಸಿನಿಮಾದಲ್ಲಿ ಅಥರ್ವನಿಗೆ ಪ್ರಮುಖ ಪಾತ್ರವಿದೆ. ಅದೇ ರೀತಿ ಆಗೋಸ್ಟ್ 1 ರಂದು ತೆರೆಕಾಣುತ್ತಿರುವ ಕೆ ಸೂರಜ್ ಶೆಟ್ಟಿ ನಿರ್ದೇಶನದ ನಾನ್ ವೆಜ್ ಸಿನಿಮಾದಲ್ಲೂ ಅಥರ್ವನದ್ದು ವಿಭಿನ್ನ ಪಾತ್ರ. ಎರಡೂ ಸಿನಿಮಾಗಳಲ್ಲಿ ಚಾಲೆಂಜಿಂಗ್ ಪಾತ್ರವನ್ನು ಸ್ವೀಕರಿಸಿರುವ ಅರ್ಥವ ಪ್ರಕಾಶ್ ಕನ್ನಡ ಸಿನಿಮಾರಂಗದಲ್ಲಿ ಭವಿಷ್ಯವನ್ನು ಕಂಡುಕೊಳ್ಳುವ ಅವಕಾಶ ಪಡೆದಿದ್ದಾನೆ. ಕೆಲಸ ಬಗ್ಗೆ ಅವನಿಗಿರುವ ಶ್ರದ್ದೆ, ಪ್ರೀತಿಯಿಂದ ಎರಡೂ ಸಿನಿಮಾಗಳಲ್ಲೂ ಪ್ರಬುದ್ದನಾಗಿ ನಟಿಸಿದ್ದಾನೆ. ಹೀಗಾಗಿ ಅಥರ್ವಪ್ರಕಾಶ್ ಗೆ ಡಬಲ್ ಧಮಾಕ. ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಮನಸೆಳೆಯಲಿದೆ.


