ಮುಂಬೈ :ಭಾರತದ ಖ್ಯಾತ ಕೈಗಾರಿಕೋದ್ಯಮಿ ಮತ್ತು ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರು 53 ನೇ ವಯಸ್ಸಿನಲ್ಲಿ ಯುಕೆಯಲ್ಲಿ ನಿಧನರಾದರು. ಪೋಲೊ ಆಡುವಾಗ ಹಠಾತ್ ಹೃದಯಾಘಾತಕ್ಕೊಳಗಾದ ನಂತರ ಈ ದುರಂತ ಸುದ್ದಿ ಹೊರಬಿದ್ದಿದೆ.

ಯುನೈಟೆಡ್ ಕಿಂಗ್ಡಂನಲ್ಲಿ ಕುದುರೆ ಸವಾರಿ ಮಾಡುತ್ತಾ ಪೋಲೊ ಆಟವಾಡುತ್ತಿದ್ದಾಗ ತೀವ್ರ ತರದ ಎದೆನೋವು ಕಾಣಿಸಿ ಕೊಂಡಿದ್ದು ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.ಆದರೆ ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಸಂಜಯ್ ಕಪೂರ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಕುಟುಂಬ ವ್ಯವಹಾರದ ಚುಕ್ಕಾಣಿ ಹಿಡಿದರು ಎಂದು ಹೇಳಲಾಗುತ್ತದೆ. 2003 ರಲ್ಲಿ ಸಂಜಯ್ ತನ್ನ ತಂದೆಯ ಕಂಪನಿಯನ್ನು ಸೇರಿಕೊಂಡರು ಮತ್ತು ಆಟೋಮೋಟಿವ್ ಜಗತ್ತಿನಲ್ಲಿ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಅವರ ನಾಯಕತ್ವದಲ್ಲಿ, ಕಂಪನಿಯು ಭಾರತ ಮತ್ತು ವಿದೇಶಗಳಲ್ಲಿ ಮಿಂಚಲು ಅವಕಾಶವನ್ನು ಪಡೆಯಿತು

ಸಂಜಯ್ ಕಪೂರ್ 2003 ರಿಂದ 2014 ರವರೆಗೆ ನಟಿ ಕರಿಷ್ಮಾ ಕಪೂರ್ ಅವರನ್ನು ವಿವಾಹವಾಗಿದ್ದರು. 2016 ರಲ್ಲಿ ವಿಚ್ಛೇದನ ಪಡೆದ ಈ ದಂಪತಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಈ ಹಿಂದೆ ಡಿಸೈನರ್ ನಂದಿತಾ ಮಹ್ತಾನಿ ಅವರನ್ನು ವಿವಾಹವಾಗಿದ್ದರು.

ಮತ್ತು 2017 ರಲ್ಲಿ ಅವರು ಮಾಡೆಲ್ ಪ್ರಿಯಾ ಸಚ್ದೇವ್ ಅವರನ್ನು ವಿವಾಹವಾದರು.ಈ ದಂಪತಿಗೆ ಅಜಾರಿಯಾಸ್ ಎಂಬ ಮಗನಿದ್ದಾನೆ ಮತ್ತು ಪ್ರಿಯಾ ಸಚ್ದೇವ್ ಅವರ ಹಿಂದಿನ ಮದುವೆಯ ಮಗಳು ಸಫೀರಾಳ ಸಹ-ಪೋಷಕರಾಗಿದ್ದರು.


