ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಇವರ 11 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವ ಅಗಸ್ಟ್ 31 ರಂದು ನಡೆಯಲಿರುವುದು.ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು

ಆಮಂತ್ರಣ ಪತ್ರಿಕೆಯನ್ನು ಪುರೋಹಿತರಾದ ರಾಜೇಶ್ ಅಡಿಗ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ ಮತ್ತು ರಾಮ ಕ್ಷತ್ರಿಯ ಸಂಘದ ಉಪಾಧ್ಯಕ್ಷರಾದ ಉದಯ ಹೆಗ್ಡೆಯವರು ಬಿಡುಗಡೆಗೊಳಿಸಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ ಮತ್ತು ಸಂಚಾಲಕರಾದ ಸುಂದರರಾಜ್ ಬೇಕಲ್ ಗಣೇಶೋತ್ಸವ ಕಾರ್ಯಕ್ರಮದ ವಿವರ ನೀಡುತ್ತಾ ಅಗಸ್ಟ್ 31ರಂದು ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ಬೆಳಿಗ್ಗೆ 7 ಘಂಟೆಗೆ ಗಣಹೋಮ,9 ಗಂಟೆಗೆ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ ನಂತರ ಭಜನೆ ಕಾರ್ಯಕ್ರಮದೊಂದಿಗೆ ಮಧ್ಯಾಹ್ನ ಮಹಾಪೂಜೆ ಜರಗಲಿದೆ.ಕರುನಾಡಿನ ಹಲವಾರು ಅತಿಥಿಗಳು ಮತ್ತು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಊರಿನ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ ಎಂದು ಮಾಹಿತಿ ನೀಡಿದರು.



ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನೀಲ್ ರಾವ್, ಕೋಶಾಧಿಕಾರಿ ರಾಜೇಶ್ ರಾವ್, ಕ್ರೀಡಾ ಕಾರ್ಯದರ್ಶಿ ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್,ಅಜೀತ್ ಕೊರಕೋಡು,ಅಜೀತ್ ಬೇಕಲ್, ಸಂದೀಪ್ ರಾವ್, ಸತೀಶ್ ಹಂಗ್ಳೂರು, ರಘುನಾಥ್ ಎಂ, ದಾಮೋದರ ರಾವ್,ಧನಂಜಯ ಸಿ.ಎಚ್,ದಿನೇಶ್ ಬೇಕಲ್,ಅಶೋಕ್ ಬಾರಿಕಡ್,ಮಹೇಶ್ ಹವಾಲ್ದಾರ್,ನಾಗೇಶ್ ರಾವ್,ರತ್ನಾಕರ ಶೇರಿಗಾರ್ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಅರುಂಧತಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನೂತನ ಉತ್ಸವ ಸಮಿತಿಯನ್ನು ರೂಪಿಸಲಾಯಿತು.


