ಕಾಂತಾರ ಚಾಪ್ಟರ್-1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದ್ದು ರಿಷಭ್ ಶೆಟ್ಟಿ ಸೇರಿ ಚಿತ್ರತಂಡ ಎಲ್ಲಾ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಸ್ತಿಕಟ್ಟೆಯ ಮಾಣಿ ಹಿನ್ನೀರಿನ ಜಲಾಶಯದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ದೋಣಿ ಮಗುಚಿ ಬಿದ್ದಿದ್ದು ಈ ಸಂದರ್ಭದಲ್ಲಿ ಕ್ಯಾಮೆರಾಮೆನ್, ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ನದಿ ಪಾಲಾಗುತ್ತಿದ್ದರು.ಕೂಡಲೇ ಎಲ್ಲರೂ ಈಜಿ ದಡ ಸೇರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಸಿನಿಮಾದ ಕೊನೆಯ ಹಂತದ ಶೂಟಿಂಗ್ ಮುಂದುವರಿಯುತ್ತಿದ್ದು ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು.ಇದೀಗ ಶೂಟಿಂಗ್ ನಡೆಯುತ್ತಿದ್ದ ವೇಳೆ ಹಠಾತ್ತನೆ ದೋಣಿ ಮಗುಚಿ ದುರಂತ ಸಂಭವಿಸಿದ್ದು ಕಲಾವಿದರು ಹಾಗೂ ತಂತ್ರಜ್ಞರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಆದರೆ ಕ್ಯಾಮೆರಾ ಸೇರಿದಂತೆ ಬೋಟ್ ನಲ್ಲಿದ್ದ ಎಲ್ಲಾ ಪ್ರಾಪರ್ಟೀಗಳು ನೀರು ಪಾಲಾಗಿದೆ

ಕಾಂತಾರ 1 ರ ಶೂಟಿಂಗ್ ವೇಳೆ ಹಲವಾರು ದುರಂತಗಳು ಸಂಭವಿಸುತ್ತಲೇ ಇದೆ ಇತ್ತೀಚೆಗೆ ಹಾಸ್ಯನಟ ರಾಕೇಶ್ ಪೂಜಾರಿ 33 ನೇ ವಯಸ್ಸಿನಲ್ಲಿ ಸ್ನೇಹಿತನ ಮದುವೆಯಲ್ಲಿ ಹೃದಯಾಘಾತದಿಂದ ನಿಧನರಾದರು.ಅದೇ ತಿಂಗಳಲ್ಲಿ ಕೇರಳದ 32 ವರ್ಷದ ಜೂನಿಯರ್ ಕಲಾವಿದ ಎಂಎಫ್ ಕಪಿಲ್ ಸೌಪರ್ಣಿಕಾ ನದಿಯಲ್ಲಿ ಅಡ್ಡ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದರು.

ಕಳೆದ ವರ್ಷ ನವೆಂಬರ್ನಲ್ಲಿ, 20 ಜೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಮುದೂರಿನಲ್ಲಿ ಅಪಘಾತಕ್ಕೀಡಾಯಿತು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಅದಕ್ಕೂ ಮೊದಲ ಕಾಂತಾರ ಅಧ್ಯಾಯ1ಕ್ಕಾಗಿ ವಿನ್ಯಾಸಗೊಳಿಸಲಾದ ದುಬಾರಿ ಸೆಟ್ ಭಾರೀ ಮಳೆಯಿಂದ ನಾಶವಾಯಿತು.


