ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಅಕ್ಷಯ ಪಾತ್ರೆ ಯೋಜನೆಯನ್ನು ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷರಾದ ಪರಮ ಪೂಜ್ಯ ಸನಾಂದನದಾಸ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವದಿಸಿದರು.

ಶಾಲಾ ಆರೋಗ್ಯ ಮತ್ತು ಸ್ವಾಸ್ಥ್ಯ ಮಂಡಳಿಯ ಅಧ್ಯಕ್ಷರಾದ ಡಾ.ಆಶಾಜ್ಯೋತಿ ರೈ, ಸಂಚಾಲಕರಾದ ಡಾ.ಸಂಜೀವ ರೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗಣೇಶ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಸದಸ್ಯೆ ಕೀರ್ತಿರೈ, ಪ್ರಾಂಶುಪಾಲೆ ಡಾ ಪೆಸ್ಲಿಲ ಡಿ.ಸೋಜ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಯಶೋದ ಶೆಟ್ಟಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲೆ ರೂಪ ಕಾರ್ಯಕ್ರಮ ನಿರೂಪಿಸಿದರು ಸಹ ಶಿಕ್ಷಕಿ ಸುಜಾತ ಸ್ವಾಮೀಜಿಯ ವರನ್ನು ಸಭೆಗೆ ಪರಿಚಯಿಸಿದರು. ಶಶಿಕಲ ಶೆಟ್ಟಿ ವಂದಿಸಿದರು.

ಶಿಕ್ಷಕ ರಕ್ಷಕ ಸಂಘದ ಸಭೆ
ಬಂಟರ ಯಾನೆ ಮಾತೃ ಸಂಘದ ನೇತೃತ್ವದಲ್ಲಿ ನಡೆಯುವ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಸಭೆಯು ಗೀತಾ ಎಸ್. ಎಮ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಮನೋರೋಗ ತಜ್ಞೆ ಡಾ.ರಮೀಲ ಶೇಖರ್ ಉದ್ಘಾಟಿಸಿ “ಆಧುನಿಕ ತಂತ್ರಜ್ಞಾನದ ಜೊತೆ ನಮ್ಮ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಉಪ ಪ್ರಾಂಶುಪಾಲೆ ರೂಪ ನಿರೂಪಿಸಿ, ಶಿಕ್ಷಕಿ ಸುಮ ಸ್ವಾಗತಿಸಿದರು. ಶಿಕ್ಷಕಿ ಸುಜಾತ ಅತಿಥಿಗಳ ಪರಿಚಯ ನಡೆಸಿಕೊಟ್ಟರು.

