ಬೆಂಗಳೂರಿನ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಕೇರಳದ ತ್ರಿಶೂರ್ ನ ಪ್ರಸಿದ್ಧ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಮುಖ್ಯ ಅರ್ಚಕ ಪರಾರಿಯಾಗಿದ್ದಾನೆ.

ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಳಲುತ್ತಿದ್ದ ಬೆಂಗಳೂರಿನ ಮಹಿಳೆಗೆ ಯಾರೋ ಮಾಟ ಮಂತ್ರ ಮಾಡಿರಬಹುದೆಂದು, ಇದಕ್ಕೆ ಪರಿಹಾರ ಹುಡುಕುತ್ತಿದ್ದಾಗ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಬಗ್ಗೆ ಸ್ನೇಹಿತರೊಬ್ಬರು ಇನ್ಸ್ಟಾಗ್ರಾಮ್ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಿಂದ ಮಾಹಿತಿ ತಿಳಿದು ಅಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಂಡರೆ ಪರಿಹಾರ ದೊರೆಯುತ್ತದೆ ಎಂಬ ಭರವಸೆ ಮಹಿಳೆಗೆ ಬಂದಿತ್ತು. ಹಾಗೇ ಸಮಸ್ಯೆ ಪರಿಹಾರಕ್ಕಾಗಿ ತ್ರಿಶೂರ್ ನ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಅರ್ಚಕರ ಜತೆ ಮಲಯಾಳಂ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ತಮಿಳು ಮತ್ತು ಕನ್ನಡವಷ್ಟೇ ಬರುತ್ತಿದ್ದ ಮಹಿಳೆಗೆ ಅರ್ಚಕ ಅರುಣ್ ಎಂಬಾತ ಪರಿಚಯವಾಗುತ್ತಾನೆ.ಆತ ತಮಿಳಿನಲ್ಲಿ ಮಾತನಾಡಿ ಸಮಸ್ಯೆಯ ಬಗ್ಗೆ ಅದನ್ನು ಪ್ರಧಾನ ಅರ್ಚಕರಾದ ಉನ್ನಿ ದಾಮೋದರನ್ ಗೆ ತಿಳಿಸುತ್ತಾನೆ ನಂತರ 24 ಸಾವಿರ ರೂ. ಕೊಟ್ಟರೆ ಪೂಜೆ ಮಾಡಿಸಿಕೊಡುವುದಾಗಿ ಅರುಣ್ ಭರವಸೆ ನೀಡಿದ್ದಾನೆ.

ಆಕೆಗೆ ಗಂಡ ಇಲ್ಲ ಅನ್ನೋದನ್ನು ಅರಿತ ಅರ್ಚಕರಿಬ್ಬರು ತಮ್ಮ ಕಳ್ಳಾಟ ಶುರು ಮಾಡಿದ್ದಾರೆ ಮಹಿಳೆಯ ನಂಬರ್ ಪಡೆದು ಪರಿಹಾರಕ್ಕಾಗಿ ಹೇಳಿದ ದಿನ ಬರುವಂತೆ ಸೂಚನೆ ನೀಡಿದ್ದ ಅರ್ಚಕ ಅರುಣ್ ಮಹಿಳೆಗೆ ತಡರಾತ್ರಿಯಲ್ಲಿ ನಿರಂತರ ವಾಟ್ಸಾಪ್ ಕರೆ ಮಾಡುತ್ತಿದ್ದ ಒಂದು ದಿನ ಸಂತ್ರಸ್ತೆಗೆ ಕರೆ ಮಾಡಿದ ಅರುಣ್, ‘ನಿಮ್ಮ ಮೇಲೆ ಮಾಟ-ಮಂತ್ರ ಆಗಿದೆ. ಅದನ್ನು ಹೋಗಲಾಡಿಸಲು ಪೂಜೆ ಮಾಡುತ್ತೇನೆ. ಹೇಳಿದಂತೆ ನೀವು ಮಾಡಬೇಕು’ ಎಂದಿದ್ದ, ಅಲ್ಲದೆ ವಿಡಿಯೋ ಕಾಲಿನಲ್ಲಿ ತಾನು ಬೆತ್ತಲಾಗಿ, ಮಹಿಳೆಯನ್ನು ಬೆತ್ತಲಾಗುವಂತೆ ಬಲವಂತ ಮಾಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಆದರೆ ಮಹಿಳೆ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಅರ್ಚಕ ಅರುಣ್ ಒಂದು ವೇಳೆ ನೀನು ಒಪ್ಪದಿದ್ದರೆ ನಿನ್ನ ಮಕ್ಕಳ ಮೇಲೆ ಮಾಟ ಮಂತ್ರ ಮಾಡಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ,ಅರ್ಚಕನ ಬೆದರಿಕೆಗೆ ಹೆದರಿ ಮಹಿಳೆ ಬೆತ್ತಲಾಗಿದ್ದಳಂತೆ. ಬಳಿಕ ಬೆತ್ತಲೆ ಆಗೋದನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಅರ್ಚಕ ಅರುಣ್ ಅದೇ ವಿಡಿಯೋ ತೋರಿಸಿ ಕರೆದಾಗಲೆಲ್ಲಾ ಕೇರಳಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದ ಅದಾದ ನಂತರ ಮತ್ತೆ ವಿಶೇಷ ಪೊಜೆಗೆಂದು ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ದ. ಬ್ಲ್ಯಾಕ್ ಮೇಲ್ ಗೆ ಹೆದರಿ ಮಹಿಳೆ ದೇಗುಲಕ್ಕೆ ತೆರಳಿದ್ದರು. ಆಕೆಗೆ ಮಾಟ ಮಂತ್ರದ ಉಚ್ಚಾಟನೆಯ ಪೂಜೆ ಮಾಡಿಸಿದ್ದ ಅರುಣ್ ಹಾಗೂ ಮುಖ್ಯ ಅರ್ಚಕ ದಾಮೋದರ ಧಾರ್ಮಿಕ ಕ್ರಿಯೆ ಇದೆ ಎಂದು ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಅಲ್ಲದೆ ನೀನು ಬರುವಾಗ ಹೇಳು ರೂಂ ಬುಕ್ ಮಾಡ್ತೀನಿ ಅಂತ ಆಕೆಗೆ ಹಿಂಸೆ ಕೊಟ್ಟಿದ್ದಾರೆ.ಇವರ ಹಿಂಸೆ ತಾಳಲಾರದೆ ಮಹಿಳೆ ಪದೇ ಪದೇ ಕೇರಳಕ್ಕೂ ಹೋಗಿ ಬಂದಿದ್ದಳಂತೆ, ಈ ಇಬ್ಬರು ಅರ್ಚಕರ ಕಿರುಕುಳದಿಂದ ಅಘಾತಕ್ಕೊಳಗಾದ ಮಹಿಳೆ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಇದೀಗ ಅರ್ಚಕ ಅರುಣ್ ನನ್ನು ಪೋಲಿಸರು ಬಂಧಿಸಿದ್ದು, ಮುಖ್ಯ ಅರ್ಚಕ ಉನ್ನಿ ದಾಮೋದರನ್ ದೇವಸ್ಥಾನ ಬಿಟ್ಟು ಪರಾರಿಯಾಗಿದ್ದಾನೆ.

