ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಇದೇ ಬರುವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ದಶಮ ಸಂಭ್ರಮದ ಪ್ರಯುಕ್ತ ಯುಎಇಯ ಏಳು ಮಂದಿ ಸಾಧಕರಿಗೆ ಮತ್ತು ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಅಲ್ಲದೆ ಯಕ್ಷಗಾನ ಅಭ್ಯಾಸ ಕೇಂದ್ರದ ವತಿಯಿಂದ ಅದ್ದೂರಿಯ ಸನ್ಮಾನಕ್ಕೆ ಪಾತ್ರರಾಗಲಿರುವ ಸಾಧಕರ ವಿವರವನ್ನು ದಿನೇಶ್ ಶೆಟ್ಟಿ ಕೊಟ್ಟಿಂಜ ತಿಳಿಸಿದರು.

ಯುಎಇಯಲ್ಲಿ ತುಳು ಕನ್ನಡ ಸಂಘ ಸಂಸ್ಥೆಗಳ ಮೂಲಕ ತನ್ನನ್ನು ತೊಡಗಿಸಿಕೊಂಡಂತಹ ಯುಎಇ ಬಂಟ್ಸ್ ನ ಗೌರವ ಅಧ್ಯಕ್ಷರು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರ ಹಿರಿತನ.

ಬಲ ಕೈಯಲ್ಲಿ ಕೊಟ್ಟದ್ದು ಎಡ ಕೈಗೆ ಗೊತ್ತಾಗದಂತೆ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳಿಗೆ ಪೋಷಕರಾಗಿ ಹಾಗೂ ತಾಯ್ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಿರುವ ಯುಎಇ ಬಂಟ್ಸ್ ನ ಅಧ್ಯಕ್ಷರು, ಹಾಗೂ ಎನ್.ಆರ್.ಐ.ಯ ಅಧ್ಯಕ್ಷರೂ ಆಗಿದ್ದಾರೆ.

ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಹಲವಾರು ಮಂದಿಗೆ ಉದ್ಯೋಗವನ್ನು ನೀಡಿದ ಹಿರಿಯ ಉದ್ಯಮಿ

ಯುಎಇಯಲ್ಲಿ ರಕ್ತದಾನ ಶಿಬಿರದ ಸಂಘಟನೆಗಳನ್ನು ಮಾಡಿ ಯುಎಇಯ ತುಳು ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಯು ಎ ಇ.ಯ ಕಾರ್ಯಕ್ರಮ, ವೈವಿಧ್ಯ, ವಿಶೇಷ- ಸಾಧಕರ ಪರಿಚಯ,ಮಾಧ್ಯಮ ಪ್ರಚಾರಗಳ ಮೂಲಕ ಜನಾನುರಾಗಿ, ಸ್ವತಃ ಲೇಖಕ, ಶಿಲ್ಪಿ, ಭಾಷಣಗಾರ.ನಾಟಕಕಾರ.

ತುಳು ಕೊಂಕಣಿ ನಾಟಕಗಳ ಮೂಲಕ ಚಿರಪರಿಚಿತ ಸಿನಿ ಕಲಾವಿದ ಹಾಗೂ ಗಮ್ಮತ್ ಕಲಾವಿದೆರ್ ದುಬೈ ತಂಡದ ಪ್ರತಿಭಾವಂತ ಕಲಾವಿದ-ಗಾಯಕ.

ಯುಎಇಯ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಕಿಯಾಗಿ ಭರತನಾಟ್ಯದ ಮೂಲಕ ಚಿರಪರಿಚಿತರಾದ ಖ್ಯಾತ ನೃತ್ಯ ಪಟು, ಗುರು, ನೃತ್ಯ ಶಕ್ತಿ ಭರತನಾಟ್ಯ ಕಲಿಕಾ ಕೇಂದ್ರದ ಸ್ಥಾಪಕಿ.

ಭಜನೆ-ಶ್ರೀ ರಾಜರಾಜೇಶ್ವರಿ ಭಜನಾ ತಂಡ-ಕಳೆದ ಇಪ್ಪತ್ತು ವರ್ಷಗಳಿಂದ ಯುಎಇಯ ಎಲ್ಲಾ ಸಂಘಟನೆಗಳ ಹಾಗೂ ಮನೆಗಳಲ್ಲಿ ಪೂಜೆ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಭಜನೆ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಭಜನಾ ಸೇವಾ ಸಂಸ್ಥೆ.


ಸಂಸ್ಕೃತಿ-ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ-ಸಂಸ್ಕೃತಿ ಪಾಲನೆ-ಪ್ರಚಾರ, ಸೇವಾ ಕಾರ್ಯ ಮುಂತಾದ ಹತ್ತು ಹಲವು ಧ್ಯೇಯ ಧೋರಣೆಗಳನ್ನು ಇರಿಸಿಕೊಂಡು, ಹಲವಾರು ವರ್ಷಗಳಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಮಾಡಿಕೊಂಡು ಬರುತ್ತಿರುವ ಸೇವಾ ಸಂಸ್ಥೆ.

ಕನ್ನಡ ನಾಡು -ನುಡಿ-ಭಾಷೆ-ಕನ್ನಡ ಪಾಠ ಶಾಲೆ, ದುಬಾಯಿ-ದುಬೈಯ ಕನ್ನಡ ವಿದ್ಯಾರ್ಥಿಗಳಿಗೆ ನಮ್ಮ ಮಾತೃ ಬಾಷೆಯ ಕಲಿಕಾ ತರಗತಿ ಮೂಲಕ, ನಮ್ಮ ಮಕ್ಕಳು ತಾಯ್ನಾಡಿನ ಸಂಸ್ಕೃತಿ,ಆಚಾರ-ವಿಚಾರ ಗಳೊಂದಿಗೆ ಬೆಸೆಯುವ ಕಾಯಕ ಮಾಡುತ್ತಿರುವ ಸಂಸ್ಥೆ.
ಇವರನ್ನು ದಶಮಾನೋತ್ಸವ ಕಾರ್ಯಕ್ರಮ ನಿಮಿತ್ತ ಸಮಸ್ತ ಯು ಎ ಇ., ಜನತೆಯ ಪರವಾಗಿ ಅಭಿನಂದಿಸಿ-ಸಂಮಾನಿಸಿ ಗೌರವಿಸಲು ಸಂತೋಷವಾಗುತ್ತಿದೆ ಎಂದು ತಿಳಿಸಿದರು.
ಯಕ್ಷ ಗುರು ಶೇಖರ್ ಡಿ. ಶೆಟ್ಟಿಗಾರ್ ಮಾತನಾಡುತ್ತಾ ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು, ಚೌಕಿ ಪೂಜೆ, ಪುಟ್ಟ ಪುಟಾಣಿಗಳ-ಪೂರ್ವ ರಂಗ ಮತ್ತು ಊರಿನ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ ಮತ್ತು ಶ್ರೀಮತಿ ಕಾವ್ಯಶ್ರೀ ಅಜೇರು ಇವರಿಂದ ಇದೇ ಮೊದಲ ಬಾರಿಗೆ ಯು ಎ ಇ.,ಯಲ್ಲಿ ಗಾನ ವೈಭವ ನಡೆಯಲಿದೆ. ನಂತರ ಗಣ್ಯಾತಿಗಣ್ಯರ ಮೂಲಕ ಭವ್ಯ ಶೋಭಯಾತ್ರೆಯಲ್ಲಿ ಕೇಂದ್ರದ ಅಭಿಮಾನಿಗಳು ಮತ್ತು ಶ್ರೀ ದೇವಿ ಭಕ್ತವೃಂದದವರ ಸೇವಾರ್ಥ- ಸಮರ್ಪಿಸಿದ ಶ್ರೀದೇವಿಯ ಬೆಳ್ಳಿಯ ಕಿರೀಟ, ತುರಾಯಿ, ಶಂಖ-ಚಕ್ರಗಳನ್ನು ವೇದಿಕೆಗೆ ತರಲಾಗುವುದು. ಅದೇ ಸಭಾವೇದಿಕೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಾಸರಗೋಡು ಸುಬ್ರಯ ಹೊಳ್ಳರವರಿಗೆ ಯಕ್ಷ ಶ್ರೀ ರಕ್ಷಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ಊರಿನ ಪ್ರಸಿದ್ದ ಕಲಾವಿದರಾದ ಶ್ರೀ ಅರುಣ್ ಕೋಟ್ಯಾನ್ ಮತ್ತು ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಹಾಗು ಕೇಂದ್ರದ ಕಲಾವಿದರ ಕೂಡುವಿಕೆಯಿಂದ ಶಿವಾನಿ-ಸಿಂಹವಾಹಿನಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಯಕ್ಷಗಾನ ಅಭಿಮಾನಿಗಳಿಗೆ ಸಾದರದ ಸ್ವಾಗತ ಬಯಸುತ್ತಾ ಎಲ್ಲರಿಗೂ ಅನ್ನದಾನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಶೆಟ್ಟಿ ಕೊಟ್ಟಿಂಜ,ವಸಂತ ಶೆಟ್ಟಿ, ವಿಕ್ಕಿ ಶೆಟ್ಟಿ, ಪ್ರಕಾಶ ಪಕ್ಕಳ, ರಾಜೇಶ್ ಕುತ್ತಾರ್,ರಮಾನಂದ , ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

