ಮುಂಬೈನ ಭಾದುಪ್ ವೆಸ್ಟ್ ಪ್ರದೇಶದ ಕ್ರೋಮಾ ಅಂಗಡಿಯಲ್ಲಿ ಒಬ್ಬ ಉದ್ಯೋಗಿಯ ‘ತಿಲಕ’ ಒರೆಸಲು ಹಿರಿಯ ಉದ್ಯೋಗಿ ಕೇಳಿದ್ದಕ್ಕೆ ಗದ್ದಲ ಭುಗಿಲೆದಿದ್ದು. ಈ ಘಟನೆ ಬಕ್ರಿದ್ ಸಂದರ್ಭದಲ್ಲಿ ನಡೆದಿದೆ.

ಜೂನ್ 7 ರಂದು ಬಕ್ರಿದ್ ಹಬ್ಬದ ದಿನದಂದು ಮುಸ್ಲಿಂ ಉದ್ಯೋಗಿಯೊಬ್ಬ ತನ್ನ ಹಿಂದು ಸಹೋದ್ಯೋಗಿಯ ಹಣೆಯಲ್ಲಿದ್ದ ‘ತಿಲಕ’ ಒರೆಸಲು ಹೇಳಿದ ನಂತರ ಮುಂಬೈನ ಭಾದುಪ್ ಪಶ್ಚಿಮ ಪ್ರದೇಶದ ಕ್ರೋಮಾ ಅಂಗಡಿಯಲ್ಲಿ ಅವ್ಯವಸ್ಥೆ ಭುಗಿಲೆದ್ದಿತು. ಘಟನೆಯ ವಿಡಿಯೋ ಮಂಗಳವಾರ ಬೆಳಕಿಗೆ ಬಂದಿದ್ದು. ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ, ಜಿತೇಶ್ ಶರ್ಮಾ ಎಂದು ಗುರುತಿಸಲಾದ ಯುವಕನಿಗೆ ಅವನ ಹಿರಿಯ ಸಹೋದ್ಯೋಗಿ ರಶೀದ್ ಎಂಬಾತ ತನ್ನ ಹಣೆಯಲ್ಲಿದ್ದ ತಿಲಕವನ್ನು ಒರೆಸಲು ಹೇಳಿದ್ದಾನೆ.ಒಂದು ವೇಳೆ ತಿಲಕ ಒರಸದಿದ್ದರೆ ಅಂಗಡಿಯಿಂದ ಹೊರ ಹೋಗುವಂತೆ ಅವಾಜ್ ಹಾಕಿದ್ದಾನೆ ಎನ್ನಲಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ಕಂಡ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಅಂಗಡಿಗೆ ನುಗ್ಗಿ ಅಂಗಡಿ ವ್ಯವಸ್ಥಾಪಕರಿಗೆ ಬೆದರಿಕೆ ಹಾಕಿದರು.ನಂತರ ರಶೀದ್ ಅವರನ್ನು ತರಾಟೆಗೆ ತೆಗೆದು ಕೂಡಲೇ ಕ್ಷಮೆಯಾಚಿಸುವಂತೆ ಕೇಳಿಕೊಂಡರು.ಒಂದು ವೇಳೆ ಕ್ಷಮೆಯಾಚಿಸದಿದ್ದರೆ ಮುಂದಿನ ಅನಾಹುತಕ್ಕೆ ನೀನೇ ಕಾರಣವಾಗುತ್ತಿ ಎಂದು ಎಚ್ಚರಿಕೆ ಕೊಟ್ಟರು.ಕೂಡಲೇ ರಶೀದ್ ನನ್ನಿಂದ ತಪ್ಪಾಗಿದೆ ಎಂದು ಹೇಳಿ ಎಲ್ಲರ ಮುಂದೆ ಜಿತೇಶ್ ಶರ್ಮನ ಹತ್ತಿರ ಕ್ಷಮೆ ಕೇಳಿದ್ದಾನೆ ಅಂಗಡಿಯ ಸಿಬ್ಬಂದಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ನಡುವಿನ ಬಿಸಿ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಹರಿದಾಡುತ್ತಿದ್ದು.ಈ ಬಗ್ಗೆ ಪರ ವಿರೋಧ ಚರ್ಚೆಗಳು ಹರಿದಾಡುತ್ತಿದೆ.

ಈ ಘಟನೆಯ ಬಗ್ಗೆ ಜಿತೇಶ್ ಶರ್ಮಾ ಅವರ ವೀಡಿಯೊ ಕೂಡ ಹೊರಬಂದಿದ್ದು, ಅದರಲ್ಲಿ ಅವರು ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ. “ಹರೇ ಕೃಷ್ಣ, ನನ್ನ ಹೆಸರು ಜಿತೇಶ್ ಶರ್ಮಾ. ನಾನು ಭಾಂಡುಪ್ ಕ್ರೋಮಾದ ಉದ್ಯೋಗಿ. ಮ್ಯಾನೇಜರ್ ಹೆಸರು ರಶೀದ್ ಮುಕಾದಮ್, ನಾನು ತಿಲಕ ಧರಿಸುವುದಕ್ಕೆ ಅವನಿಗೆ ಆಕ್ಷೇಪವಿತ್ತು. ಬಕ್ರೀದ್ ದಿನದಂದು, ನೀವು ತಿಲಕ ಧರಿಸಿ ಬರಬಾರದು ಎಂದು ಅವರು ನನಗೆ ಹೇಳಿದರು. ನೀವು ಈ ಅಂಗಡಿಯಲ್ಲಿ ಉಳಿಯಲು ಬಯಸಿದರೆ, ನಿಮ್ಮ ತಿಲಕವನ್ನು ತೊಳೆಯಿರಿ.ಎಂದು ಹೇಳಿದರು ಇಲ್ಲದಿದ್ದರೆ ಅಂಗಡಿಯಿಂದ ಹೊರನಡೆ ಎಂದು ಅವಾಜ್ ಹಾಕಿದರು. ನಾನು ಈ ಬಗ್ಗೆ ಎಂಎನ್ಎಸ್ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಅವರು ತಕ್ಷಣ ಇದರ ಮೇಲೆ ಕ್ರಮ ಕೈಗೊಂಡರು ಮತ್ತು ನನಗೆ ನ್ಯಾಯ ಸಿಕ್ಕಿತು. ಇದಕ್ಕಾಗಿ ನಾನು ರಾಜ್ ಠಾಕ್ರೆ ಮತ್ತು ಅಮಿತ್ ಠಾಕ್ರೆಗೆ ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.

