ಬೆಂಗಳೂರು ನಗರದ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್ ಗಳ ಮೇಲೆ ನಿನ್ನೆ ರಾತ್ರಿ ದಿಢೀರ್ ಪೋಲಿಸರು ದಾಳಿ ನಡೆಸಿದ್ದಾರೆ.ಹಲವು ಬಾರ್ ಗಳಲ್ಲಿ ನಿಯಮ ಉಲ್ಲಂಘನೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಪೋಲಿಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಕೇಂದ್ರ ವಿಭಾಗ ಹಾಗೂ ಪಶ್ಚಿಮ ವಿಭಾಗ ವ್ಯಾಪ್ತಿಯ ಪೊಲೀಸರು ಎಂ.ಜಿ ರೋಡ್ ನ ಕ್ಲಬ್ ಒನ್, ರಂಭಾ, ಬ್ರಿಗೇಡ್ ರೋಡ್ ನ ಬ್ರಿಗೇಡ್ ಬ್ಲೂ ಸೇರಿದಂತೆ ಕಬ್ಬನ್ ಪಾರ್ಕ್, ಉಪ್ಪರ್ ಪೇಟೆ,ಎಸ್.ಜೆ ಪಾರ್ಕ್, ಅಶೋಕ್ ನಗರ ಮುಂತಾದ ಕಡೆಗಳ ಸುಮಾರು 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ ನಡೆಸಿದ್ದಾರೆ.

ಯುವತಿಯರು ಅರೆಬರೆ ಬಟ್ಟೆ ತೊಟ್ಟು ಡ್ಯಾನ್ಸ್ , ಸಮಯ ಮೀರಿ ಬಾರ್ ಗಳ ಓಪನ್ ಹಾಗೂ ಮದ್ಯಪಾನ ಸೇರಿದಂತೆ ಹಲವು ನಿಯಮ ಉಲ್ಲಂಘಣೆ ಅರೋಪಗಳು ಬಂದ ಹಿನ್ನೆಲೆಯಲ್ಲಿ ನಿನ್ನೆ ದಾಳಿ ನಡೆದಿದೆ.

