ಕಡಬ :ಸದಾ ವಿವಾದಗಳಿಂದ ಖ್ಯಾತರಾಗಿರುವ ಬೀರ್ ಬೈಸೆಪ್ಸ್ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಬೇರೆ ಬೇರೆ ಕಾರಣಕ್ಕಾಗಿ ದೇಶಾದ್ಯಂತ ಜನರ ವಿರೋಧಕ್ಕೆ ಕಾರಣರಾಗಿದ್ದ ಬೀರ್ ಬೈಸೆಪ್ಸ್ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಇದೀಗ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ರಣವೀರ್ ಪಂಚೆ ಮತ್ತು ಶಲ್ಯ ಧರಿಸಿ ಕುಕ್ಕೆ ಸುಬ್ರಹ್ಮಣ ದೇಗುಲದ ಮುಂದೆ ನಿಂತು ಫೋಟೊ ತೆಗೆಸಿಕೊಂಡಿರುವ ರಣವೀರ್ ಕಿಂಗ್ ಎನರ್ಜಿ ಎಂದು ಒಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದರೆ, ಮತ್ತೊಂದು ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಇಂತಹ ಅನುಭವಗಳನ್ನು ಪಡೆಯೋದಕ್ಕೆ, ಭಾರತದಲ್ಲಿ ಇರಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲಾ ಕಡೆಯಿಂದ ಆಶೀರ್ವಾದ ಸಿಗುತ್ತಿದೆ ಎಂದು ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲ” ಈಟ್ಸ್ ಟೈಮ್ ಟು ಸೆಟಲ್ ಡೌನ್ ಇನ್ ಕರ್ನಾಟಕ “ ಎಂದು ಸಹ ಬರೆದಿದ್ದಾರೆ.

ವಿವಾದಗಳ ಮೇಲೆ ವಿವಾದಗಳನ್ನು ಮೈಗೆಳೆದುಕೊಂಡ ಬಳಿಕ ಸುಬ್ರಹ್ಮಣ್ಯದಲ್ಲಿ ರಣವೀರ್ ಅವರನ್ನು ನೋಡಿದ ಜನರು ಇವರು ತಾವು ಮಾಡಿದ ಪಾಪ ಕರ್ಮಗಳನ್ನು ಕಳೆಯಲು ಇಲ್ಲಿಗೆ ಬಂದಿದ್ದಾರೆ ಎಂದಿದ್ದಾರೆ. ತಪ್ಪುಗಳು ಮಾಡುವುದು ಮಾನವನ ಸಹಜ ಗುಣ, ಅದನ್ನು ಅರಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡುವವನೆ ನಿಜವಾದ ಮನುಜ,ಎಂದಿದ್ದಾರೆ.
ಒಬ್ಬರು ಮಾಡಿದ ಪಾಪ ಕರ್ಮಗಳನ್ನು ಕೆಲವೊಮ್ಮೆ ಗಂಗೆಯಲ್ಲಿ ಮಿಂದರು ಪರಿಹಾರ ಆಗುವುದಿಲ್ಲ , ಅಂತಹ ಸಮಯದಲ್ಲಿ ದೈವ ದೇವರ ಭೂಮಿ ತುಳುನಾಡಿಗೆ ಬಂದು ಪರಿಹಾರ ಮಾಡಿಕೊಳ್ಳುತ್ತಾರೆ.ಎಂದು ಜನರು ಕಮೇಂಟ್ ಮಾಡಿದ್ದಾರೆ
ಕಳೆದ ವರ್ಷ ಇಂಡಿಯಾಸ್ ಗಾಟ್ ಲಾಟೆಂಟ್ ಶೋನಲ್ಲಿ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವ ರಣವೀರ್, ಅಶ್ಲೀಲ ಪದ ಬಳಸಿ ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದರು. ಅದರ ನಂತರ ರಣವೀರ್ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

