ಮುಂಬೈ :ಪ್ರಸಿದ್ಧ ನೃತ್ಯ ಸಂಯೋಜಕಿ ಗೀತಾ ಕಪೂರ್ ಬಾಲಿವುಡ್ಗೆ ವಿದಾಯ ಹೇಳಿದ್ದಾರೆ.ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇದಕ್ಕೆ ಕಾರಣವನ್ನು ನೀಡಿದ್ದಾರೆ.
ಗೀತಾ ಕಪೂರ್ ತಮ್ಮ17 ನೇ ವಯಸ್ಸಿನಲ್ಲಿ ತಮ್ಮ ನೃತ್ಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲಿವುಡ್ನ ಪ್ರಸಿದ್ಧ ಕೊರಿಯೋಗ್ರಾಫರ್ ಫರಾ ಖಾನ್ ಜೊತೆಗೆ ಸಹಾಯಕ ನೃತ್ಯ ಸಂಯೋಜಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗೀತಾ ಕಪೂರ್ ಅವರೊಂದಿಗೆ ‘ಕುಚ್ ಕುಚ್ ಹೋತಾ ಹೈ’ ಮತ್ತು ‘ದಿಲ್ ತೋ ಪಾಗಲ್ ಹೈ’ ಕಭಿ ಖುಷಿ ಕಭಿ ಗಮ್’, ‘ಮೊಹಬ್ಬತೇನ್’, ‘ಕಲ್ ಹೋ ನ ಹೋ’, ‘ಮೈ ಹೂ ನಾ’ ಮತ್ತು ‘ಓಂ ಶಾಂತಿ ಓಂ’ ನಂತಹ ಜನಪ್ರಿಯ ಬಾಲಿವುಡ್ ಚಿತ್ರಗಳ ಹಾಡುಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

ನಂತರ ಹಲವಾರು ಚಿತ್ರಗಳಲ್ಲಿ ಸ್ವತಂತ್ರ ನ್ರತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಗೀತಾ ಕಪೂರ್ ಚಲನಚಿತ್ರದಿಂದ ದೂರವಿದ್ದು ಟಿವಿ ಚಾನೆಲ್ ಗಳ ನೃತ್ಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು.

ಆದರೆ ಈಗ ಅವರು ಬಾಲಿವುಡ್ಗೆ ಮರಳುವ ಯಾವುದೇ ಯೋಜನೆ ಇಲ್ಲವೆಂದು ಖಾಸಗಿ ಟಿವಿ ಚಾನೆಲ್ ಸಂದರ್ಶನದಲ್ಲಿ ನೇರವಾಗಿ ಸ್ಪಷ್ಟಪಡಿಸಿದ್ದಾರೆ.ಸಂದರ್ಶನದಲ್ಲಿ ಗೀತಾ ಕಪೂರ್ ಅವರನ್ನು ಬಾಲಿವುಡ್ಗೆ ಯಾವಾಗ ಮರಳುತ್ತೀರಿ ಎಂದು ಕೇಳಲಾಯಿತು? ಬಹಳ ಸಮಯವಾಯಿತು, ನೀವು ಸಾಕಷ್ಟು ವಿರಾಮ ತೆಗೆದುಕೊಂಡಿದ್ದೀರಿ. ಇದಕ್ಕೆ ಗೀತಾ, “ಇಲ್ಲ. ಎಲ್ಲರೂ ಒಂದು ಹೆಜ್ಜೆ ಹಿಂದಕ್ಕೆ ಇಟ್ಟು ಹೊಸ ಪ್ರತಿಭಾನ್ವಿತರಿಗೆ ಮುಂದೆ ಬರಲು ಅವಕಾಶ ನೀಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

ಪ್ರಸ್ತುತ ಉದ್ಯಮದಲ್ಲಿ ಕೆಲಸದ ಕೊರತೆ ಇದೆ. ಆದ್ದರಿಂದ ಇತರರಿಗೆ ಅವಕಾಶ ನೀಡಬೇಕು.ನಮ್ಮ ಕಾಲದಲ್ಲಿ 8-10 ಹಾಡುಗಳನ್ನು ಒಂದು ಚಿತ್ರದಲ್ಲಿ ಮಾಡಲಾಗುತ್ತಿತ್ತು ಆದರೆ ಈಗ ಮಾಡಲಾಗುವುದಿಲ್ಲ. ದೊಡ್ಡ ಹಾಡುಗಳು ಇರುತ್ತಿದ್ದವು. ನೃತ್ಯ ಆಧಾರಿತ ಹಾಡುಗಳು ಇರುತ್ತಿದ್ದವು. ಆದ್ದರಿಂದ ಈಗಾಗಲೇ ಕಡಿಮೆ ಕೆಲಸವಿರುವಾಗ, ನಾವು ಅದನ್ನೂ ಕಸಿದುಕೊಂಡು ಇತರರಿಗೆ ಅವಕಾಶ ನೀಡದಿರುವುದು ತಪ್ಪು. ಆದ್ದರಿಂದ ಹೊಸಬರು ಕೆಲಸ ಮಾಡಬೇಕು. ನಾನು ಎಲ್ಲಿದ್ದೇನೆಯೋ ಅಲ್ಲಿ ನಾನು ಸಂತೋಷವಾಗಿದ್ದೇನೆ” ಎಂದು ಗೀತಾ ಕಪೂರ್ ಹೇಳಿದರು.

ಈಗ ಇತರರು ಮುಂದುವರಿಯುವ ಸಮಯ ಬಂದಿದೆ. ಈ ಉದ್ಯಮವು ನನಗೆ ಕೆಲಸ, ಹಣ, ಖ್ಯಾತಿ ಎಲ್ಲವನ್ನೂ ನೀಡಿದೆ.ಮತ್ತು ಎಲ್ಲರ ಆಶೀರ್ವಾದಗಳನ್ನು ನಾನು ಪಡೆದಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆದರೆ ಈಗ ನಾನು ತಪ್ಪಿಸಿಕೊಳ್ಳಲು ಬಯಸದ ಅವಕಾಶ ಬಂದಾಗ, ಬಹುಶಃ ನಾನು ಹಿಂತಿರುಗುತ್ತೇನೆ, ಇಲ್ಲದಿದ್ದರೆ ಹಿಂತಿರುಗುವುದಿಲ್ಲ” ಎಂದು ಗೀತಾ ಕಪೂರ್ ಸಂದರ್ಶನದಲ್ಲಿ ಹೇಳಿದ್ದಾರೆ..


