ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 24, 2025 ರಂದು ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಟ ಮತ್ತು ಚಲನಚಿತ್ರ ನಿರ್ಮಾಪಕ ಅಮಿರ್ ಖಾನ್ ಅವರನ್ನು ಭೇಟಿಯಾದರು.

ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದಾಗ ಅಮಿರ್ ಖಾನ್ ಅವರನ್ನು ನೋಡಿ ಅವರತ್ತ ಕೈ ಬೀಸಿದರು. ಅಮಿರ್ ಖಾನ್ ಮುಗುಳ್ನಗುತ್ತಾ ಕೈಮುಗಿದು ಸ್ವಾಗತಿಸಿದರು ಇಬ್ಬರೂ ಸ್ವಲ್ಪ ಹೊತ್ತು ಪರಸ್ಪರ ಮಾತನಾಡುತ್ತಾ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಅಮೀರ್ ಖಾನ್ ನಿರ್ಮಾಣದ ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ಸೀತಾರೆ ಜಮೀನ್ ಪರ್’ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ದೆಹಲಿಯಲ್ಲಿದ್ದಾರೆ, ಇದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾಗಿ ಪ್ರತ್ಯೇಕವಾಗಿ ಪ್ರದರ್ಶಿಸಲಾಯಿತು.

