ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಷಿ (77) ಇಂದು ಲಂಡನ್ನಲ್ಲಿ ಹೃದಯಾಘಾತದಿಂದ ನಿಧನರಾದರು.
ದಿಲೀಪ್ ದೋಷಿ ಎಡಗೈ ಸ್ಪಿನ್ನರ್ ಆಗಿದ್ದರು.ಅವರು 32 ನೇ ವಯಸ್ಸಿನಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು ಭಾರತ ಪರ ಆಡಿದ 33 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 114 ವಿಕೆಟ್ಗಳನ್ನು ಕಬಳಿಸಿದ್ದಾರೆ, ಅದರಲ್ಲಿ 6 ಬಾರಿ ಐದು ವಿಕೆಟ್ಗಳು ಸೇರಿವೆ. ಅಲ್ಲದೆ 15 ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ. ಅದರಲ್ಲಿ ಒಟ್ಟು 22 ವಿಕೆಟ್ಗಳನ್ನು ಪಡೆದಿದ್ದಾರೆ.ಆದರೆ ಅವರು ತಮ್ಮ ಸಣ್ಣ ವೃತ್ತಿಜೀವನದಲ್ಲಿ ಅಳಿಸಲಾಗದ ಗುರುತು ಬಿಟ್ಟರು.

ಕೌಂಟಿ ಕ್ರಿಕೆಟ್ನಲ್ಲಿ ದಿಲೀಪ್ ದೋಷಿ ದೊಡ್ಡ ಹೆಸರಾಗಿದ್ದರು. ದೋಷಿ ನಾಟಿಂಗ್ಹ್ಯಾಮ್ಶೈರ್ ಮತ್ತು ವಾರ್ವಿಕ್ಷೈರ್ ಪರ ಒಂದು ದಶಕಕ್ಕೂ ಹೆಚ್ಚು ಕಾಲ ಕೌಂಟಿ ಕ್ರಿಕೆಟ್ ಆಡಿದ್ದರು. ಭಾರತದಲ್ಲಿ ಅವರು ಬಂಗಾಳ ಮತ್ತು ಸೌರಾಷ್ಟ್ರ ಪರ ದೇಶೀಯ ಕ್ರಿಕೆಟ್ ಆಡಿದ್ದರು. ಅವರು ಪ್ರಥಮ ದರ್ಜೆಯಲ್ಲಿ 898 ವಿಕೆಟ್ಗಳನ್ನು ಪಡೆದಿದ್ದಾರೆ

ದೋಷಿ ಅವರು ಪತ್ನಿ ಕಾಳಿಂದಿ ಸರ್ರೆ ಮತ್ತು ಸೌರಾಷ್ಟ್ರ ಪರ ಆಡಿದ್ದ ಮಗ ನಯನ್, ಮಗಳು ವಿಶಾಖಾ ಹಾಗೂ ಅಪಾರ ಕ್ರಿಕೆಟ್ ಅಭಿಮಾನಿಗಳನ್ನು ಅಗಲಿದ್ದಾರೆ


