ಬೆಂಗಳೂರು : ಕರ್ನಾಟಕ ಸರ್ಕಾರವು ಅಬಕಾರಿ ಪರವಾನಗಿ ಶುಲ್ಕವನ್ನು 50% ರಷ್ಟು ಕಡಿಮೆ ಮಾಡುವ ಮೂಲಕ ಪ್ರತಿಭಟನಾ ನಿರತ ಮದ್ಯ ಮಾರಾಟಗಾರರ ಬೇಡಿಕೆಗಳಿಗೆ ಮಣಿದಿದೆ. ಮತ್ತು ಪರವಾನಗಿ ನವೀಕರಣ ಅವಧಿಯನ್ನು ಈಗ ಚಾಲ್ತಿಯಲ್ಲಿರುವ ಒಂದು ವರ್ಷದಿಂದ ಐದು ವರ್ಷಗಳಿಗೆ ವಿಸ್ತರಿಸಿದೆ, ಇದು ರಾಜ್ಯಾದ್ಯಂತ ಸಾವಿರಾರು ಮಾರಾಟಗಾರರಿಗೆ ಪರಿಹಾರವನ್ನು ನೀಡಿದೆ.

ಇದಕ್ಕೂ ಮೊದಲು, ಸರ್ಕಾರವು ಶುಲ್ಕವನ್ನು ದ್ವಿಗುಣಗೊಳಿಸುವ ಮೂಲಕ ಹೊಸ ಪರವಾನಗಿ ಶುಲ್ಕ ನಿಯಮವನ್ನು ಘೋಷಿಸಿತ್ತು, ಈ ಕ್ರಮಕ್ಕೆ ಮದ್ಯ ಮಾರಾಟಗಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು,ಮತ್ತೆ ಕೆಲವರು ಆಕ್ಷೇಪಣೆಗಳನ್ನು ಸಲ್ಲಿಸಿದರು ಮತ್ತು ಹೆಚ್ಚಳದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಆರಂಭಿಕ ಪ್ರಸ್ತಾವನೆ ಸಲ್ಲಿಸಿದ ಕೇವಲ ಒಂದು ತಿಂಗಳ ನಂತರ ಸರ್ಕಾರ ಸೋಮವಾರ ಶುಲ್ಕವನ್ನು ಅರ್ಧದಷ್ಟು ಕಡಿಮೆ ಮಾಡಿ ಪರಿಷ್ಕೃತ ಆದೇಶವನ್ನು ಹೊರಡಿಸಿತು.

ರಾಜ್ಯದಲ್ಲಿ ಅಬಕಾರಿ ವರ್ಷ ಜುಲೈಯಿಂದ ಪ್ರಾರಂಭವಾಗಲಿದ್ದು ಸರಕಾರವು ಅಬಕಾರಿ ಪರವಾನಗಿ ಶುಲ್ಕ ವಾರ್ಷಿಕವಾಗಿ ಖಜಾನೆಗೆ ಸುಮಾರು ₹820 ಕೋಟಿ ಬರುವ ನಿರೀಕ್ಷೆ ಇಟ್ಟುಕೊಂಡಿತ್ತು ಆದರೆ ಮದ್ಯ ಮಾರಾಟಗಾರರ ವಿರೋಧದಿಂದಾಗಿ ಸರ್ಕಾರ 50% ಹೆಚ್ಚಳಕ್ಕೆ ಒಪ್ಪಿಕೊಂಡಿದ್ದಾರೆ.
ಪರವಾನಗಿ ಶುಲ್ಕ ಕಡಿತ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ.ಹಾಗೇ ಉಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಗಳು ಮುಂದುವರಿಯುತ್ತವೆ ಎಂದು ವೈನ್ ವ್ಯಾಪಾರಿಗಳ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.

