ಮಂಗಳೂರು: ಆಮ್ ಆದ್ಮಿ ಪಕ್ಷದ ಮುಂದಿನ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳೊಂದಿಗೆ ಹಾಗೂ ಪಕ್ಷದ ಪ್ರಮುಖ ನಾಯಕರೊಂದಿಗೆ ಮಹತ್ವದ ಸಭೆ ನಡೆಯಿತು. ಕ್ಷೇತ್ರದ ಪರಿಸ್ಥಿತಿ, ಜನತೆಯ ಅವಶ್ಯಕತೆಗಳು ಹಾಗೂ ಚುನಾವಣಾ ತಂತ್ರದ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಬಲಿಷ್ಠ ಮುಂದಿನ ಹೆಜ್ಜೆಗಳಿಗಾಗಿ ರೂಪುರೇಖೆ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಪಕ್ಷದ ಹಿತೈಷಿ ಶ್ರೀ ಮೈಕಲ್ ಡಿಸೋಜಾ, ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ನವೀನ್ ಚಂದ್ರ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಡಾ. ವಿಶುಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾದ್ಯಮ ಸಂಚಾಲಕ ವೆಂಕಟೇಶ್ ಬಾಳಿಗ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ವಿದ್ಯಾ ರಾಕೇಶ್ ಧನ್ಯವಾದ ಅರ್ಪಿಸಿದರು.

ದಕ್ಷಿಣ ಕನ್ನಡ ಆಮ್ ಆದ್ಮಿ ಪಕ್ಷದ ವತಿಯಿಂದ ಇತ್ತೀಚೆಗೆ ಗುಜರಾತ್ ಮತ್ತು ಪಂಜಾಬ್ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದನ್ನು ಸಂಭ್ರಮಿಸಿ ವಿಜಯೋತ್ಸವವನ್ನು ಮಂಗಳೂರು ಸೋಜಾ ಆರ್ಕೆಡ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಡಾ. ವಿಶು ಕುಮಾರ್ ಸ್ವಾಗತಿಸಿ, “ಇತ್ತೀಚಿನ ಗೆಲುವುಗಳು ಪಕ್ಷದ ಶ್ರಮದ ಫಲ” ಎಂದು ಅಭಿಪ್ರಾಯಪಟ್ಟರು.
ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಪ್ರಾಸ್ತಾವಿಕ ಭಾಷಣದಲ್ಲಿ, “ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಪಕ್ಷದ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಹೋರಾಡುವುದೇ ಪ್ರತಿಯೊಬ್ಬ ಕಾರ್ಯಕರ್ತನ ಧ್ಯೇಯವಾಗಬೇಕು” ಎಂದು ಹೇಳಿದರು.

ಪಕ್ಷದ ಹಿತೈಶಿಗಳಾದ ಮೈಕಲ್ ಡಿಸೋಜಾ ಮಾರ್ಗದರ್ಶನ ನೀಡುತ್ತಾ, “ಒಂದು ಸಸಿಯನ್ನು ಮರವನ್ನಾಗಿ ಮಾಡಲು ನಿರಂತರ ಗೊಬ್ಬರ ಹಾಕಿ ನೀರಾವರಿ ಮಾಡಬೇಕಾದಂತೆಯೇ, ಪಕ್ಷದ ಬೆಳವಣಿಗೆಗೆ ಕಾರ್ಯಕರ್ತರ ನಿಷ್ಠೆ ಮತ್ತು ಸಹಕಾರ ಅಗತ್ಯ” ಎಂದರು.
ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನವೀನ್ ಚಂದ್ರ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಮಹಾನಗರ ಪಾಲಿಕೆ ಘಟಕದ ಸಂಚಾಲಕ ಶನಾನ್ ಪಿಂಟೋ, ಹಾಗೂ ಕಾರ್ಯಕರ್ತರಾದ ವಾಸುದೇವ್ ಮತ್ತು ನವೀನ್ ಡಿಸೋಜಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

