ಪಾಕಿಸ್ತಾನಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನ್ನುಲ್ಲಾ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾರೆ.ಮೇಜರ್ ಶಾ ವಿಶೇಷ ಗುಂಪಿನಲ್ಲಿ( ಎಸ್ ಎಸ್ ಜಿ) ಕೆಲಸ ಮಾಡುತ್ತಿದ್ದರು.ಅವರು ಚಕ್ವಾಲ್ ಜಿಲ್ಲೆಯ ನಿವಾಸಿಯಾಗಿದ್ದು ಅವರಿಗೆ 37 ವರ್ಷ ವಯಸ್ಸಾಗಿತ್ತು.

ಭಾರತೀಯ ವಾಯುಪಡೆಯ ಕಮಾಂಡರ್ ಅಭಿನಂದನ್ ಅವರನ್ನು ಸೆರೆಹಿಡಿದವರು ಮೋಯಿಜ್.
2019 ರಲ್ಲಿ ಬಾಲಕೋಟ್ ವಾಯುದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿತು. ಫೆಬ್ರವರಿ 27, 2019 ರಂದು, ಪಾಕಿಸ್ತಾನದ ಪ್ರತಿದಾಳಿಯು ನಾಟಕೀಯ ವೈಮಾನಿಕ ಕಾರ್ಯಾಚರಣೆಗೆ ಕಾರಣವಾಯಿತು, ಈ ಸಮಯದಲ್ಲಿ ಪಾಕಿಸ್ತಾನದ F-16 ಅನ್ನು ಹೊಡೆದುರುಳಿಸಿದ ನಂತರ ವರ್ಧಮಾನ್ನ MiG-21 ಬೈಸನ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿತು.ಆ ಸಮಯದಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಗಾಯಗೊಂಡಿದ್ದರು.ಆ ಸಂಧರ್ಭದಲ್ಲಿ ಮೇಜರ್ ಮೊಹಿಜ್ ಅಬ್ಬಾಸ್ ಶಾ ಅಭಿನಂದನ್ ಅವರನ್ನು ಸೆರೆ ಹಿಡಿದಿರುವುದಾಗಿ ಹೇಳಿಕೊಂಡರು.

ನಂತರ ವರ್ಧಮಾನ್ ಅವರನ್ನು ಸೆರೆಹಿಡಿದು ಪಾಕಿಸ್ತಾನದಲ್ಲಿ ಸ್ವಲ್ಪ ಸಮಯದವರೆಗೆ ಇರಿಸಲಾಗಿತ್ತು,ನಂತರ ಅವರನ್ನು ಬಿಡುಗಡೆ ಮಾಡಲು ಭಾರತ ಮತ್ತು ಪ್ರಪಂಚದಾದ್ಯಂತ ಪಾಕಿಸ್ತಾನದ ಮೇಲೆ ಬಹಳ ಒತ್ತಡವಿತ್ತು.ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ಪಾಕಿಸ್ತಾನದ ಮೇಲೆ ದೊಡ್ಡ ದಾಳಿಗೆ ಸಿದ್ದತೆ ನಡೆಸುತ್ತಿತ್ತು. ಸರ್ಕಾರದ ಕಟ್ಟುನಿಟ್ಟಿನ ಕ್ರಮದ ನಂತರ ಪಾಕಿಸ್ತಾನ ಅವರನ್ನು ಬಿಡುಗಡೆ ಮಾಡಬೇಕಾಯಿತು. ಪ್ರಸ್ತುತ, ಅಭಿನಂದನ್ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಯಲ್ಲಿದ್ದಾರೆ.

ಪಾಕಿಸ್ತಾನಿ ಸೇನೆಯ ಪ್ರಕಾರ, ಮೇಜರ್ ಮೊಯಿಜ್ ಅಬ್ಬಾಸ್ ಶಾ ನೇತೃತ್ವದ ಪಾಕಿಸ್ತಾನಿ ಸೇನೆಯು ದಕ್ಷಿಣ ವಜಿರಿಸ್ತಾನ್ನ ಸರ್ಗೋಧಾ ಪ್ರದೇಶದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ವಿರುದ್ಧ ಕಾರ್ಯಾಚರಣೆ ನಡೆಸುತ್ತಿತ್ತು, ಇದನ್ನು ವಿಶೇಷ ಸೇವಾ ಗುಂಪಿನ ಅಧಿಕಾರಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ನೇತೃತ್ವ ವಹಿಸಿದ್ದರು. ಈ ಸಮಯದಲ್ಲಿ ಪಾಕಿಸ್ತಾನಿ ಸೇನೆ ಮತ್ತು ತೆಹ್ರೀಕ್-ಇ-ತಾಲಿಬಾನ್ ನಡುವಿನ ಗುಂಡಿನ ದಾಳಿಯಲ್ಲಿ ಭಯೋತ್ಪಾದಕರ ಗುಂಡೇಟಿಗೆ ಪಾಕಿಸ್ತಾನಿ ಸೇನೆಯ ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನುಲ್ಲಾ ಸಾವನ್ನಪ್ಪಿದ್ದಾರೆ.


