ಕೇರಳ: ನಿಷೇಧಿತ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕೇರಳದಲ್ಲಿ ಮಾಜಿ ಜಿಲ್ಲಾ ನ್ಯಾಯಾಧೀಶರೊಬ್ಬರು ಸೇರಿದಂತೆ ಸುಮಾರು 977 ವ್ಯಕ್ತಿಗಳನ್ನು ಒಳಗೊಂಡ ಹಿಟ್ಲಿಸ್ಟ್ಗಳನ್ನು ಸಿದ್ಧಪಡಿಸಿತ್ತು ಎಂದು ವರದಿಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ವಿಷಯ ಬಹಿರಂಗವಾಗಿದೆ.

2022 ರಲ್ಲಿ ಪಾಲಕ್ಕಾಡ್ ಎಸ್ಕೆ ಶ್ರೀನಿವಾಸನ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಾದ ಮಹಮ್ಮದ್ ಬಿಲಾಲ್ ಮತ್ತು ರಿಯಾಜ್ಜುದ್ದೀನ್ ಜಾಮೀನು ನೀಡಬಾರದು ಎಂದು ಏಜೆನ್ಸಿ ಆಕ್ಷೇಪಿಸಿದ್ದರಿಂದ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಲಾಯಿತು ಕೆಲವು ಹಿಟ್ ಲಿಸ್ಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ವರದಿ ಸಲ್ಲಿಸಿದೆ.
ಪಿಎಫ್ಐ ಮೂರು ವಿಭಾಗಗಳನ್ನು ಹೊಂದಿದ್ದು ವರದಿಗಾರರ ವಿಭಾಗ, ದೈಹಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ವಿಭಾಗ ಮತ್ತು ಸೇವಾ ವಿಭಾಗ ಎಂಬ ಹಿಟ್ ತಂಡಗಳು ಇವೆ.ಪಿಎಫ್ಐ ತಮ್ಮ ರಹಸ್ಯ ವರದಿಗಾರರ ವಿಭಾಗದ ಮೂಲಕ ಇತರ ಸಮುದಾಯಗಳ ಜನರ ಹೆಸರು,ವಿಳಾಸ, ವಯಸ್ಸು, ಫೋಟೋ ಇತ್ಯಾದಿ ಸೇರಿದಂತೆ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ ನಿರ್ವಹಿಸುತ್ತಿತ್ತು.ಆ ಹಿಟ್ಲಿಸ್ಟ್ಗಳನ್ನು ಎನ್ಐಎ ವಶಪಡಿಸಿಕೊಂಡಿದೆ. ಇದು ಪಿತೂರಿಯ ಆಘಾತಕಾರಿ ಪ್ರಮಾಣವನ್ನು ಸೂಚಿಸುತ್ತದೆ ಎಂದಿದೆ.

ಶ್ರೀನಿವಾಸನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ “ರಿಪೋರ್ಟರ್ ವಿಂಗ್” ಎಂದು ಕರೆಯಲ್ಪಡುವ ಭಯೋತ್ಪಾದಕ ಸಿರಾಜುದ್ದೀನ್ 240 ಜನರ ಹಿಟ್ಲಿಸ್ಟ್ ಹೊಂದಿದ್ದ, ತಲೆಮರೆಸಿಕೊಂಡಿರುವ ಆರೋಪಿ ಅಯೂಬ್ ಟಿಎ ಅವರ ಮನೆಯಲ್ಲಿ 500 ಹೆಸರುಗಳಿರುವ ಮತ್ತೊಂದು ಪಟ್ಟಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ಅಬ್ದುಲ್ ವಹಾಬ್ನಿಂದ ವಶಪಡಿಸಿಕೊಂಡ ಪಟ್ಟಿಯಲ್ಲಿ ಐದು ಜನರ ವಿವರಗಳಿದ್ದು, ಅವರನ್ನು ಉದ್ದೇಶಿತ ಕೃತ್ಯಗಳಿಗಾಗಿ ಗುರುತಿಸಲಾಗಿದೆ.
ಈ ಪಟ್ಟಿಗಳಲ್ಲಿ ನ್ಯಾಯಾಧೀಶರು, ರಾಜಕೀಯ ನೇತಾರರು,ಧಾರ್ಮಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಹೆಸರುಗಳು ಲಿಸ್ಟ್ ನಲ್ಲಿದೆ ಎಂದು ಎನ್ಐಎ ಹೇಳಿದೆ.

ಹಿಟ್ ಲಿಸ್ಟ್ಗಳ ಜೊತೆಗೆ, ಅಲುವಾದ ಪೆರಿಯಾರ್ ಕಣಿವೆಯ ಕ್ಯಾಂಪಸ್ನಲ್ಲಿ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳೊಂದಿಗೆ ಪಿಎಫ್ಐ ಅನ್ನು ಸಂಪರ್ಕಿಸುವ ದಾಖಲೆಗಳನ್ನು ಎನ್ಐಎ ಪತ್ತೆಹಚ್ಚಿದೆ.ಈ ಸ್ಥಳವು ಪಿಎಫ್ಐ ಜೊತೆ ಸಂಯೋಜಿತವಾಗಿರುವ ಸಶಸ್ತ್ರ ಉಗ್ರಗಾಮಿಗಳಿಗೆ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಭಯೋತ್ಪಾದನೆಯ ಆದಾಯವಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಇದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಹೇಳಿಕೊಂಡಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಕೆ. ಮೋಹನದಾಸ್ ಅವರು ಮುಹಮ್ಮದ್ ಬಿಲಾಲ್ ಮತ್ತು ರಿಯಾಸುದ್ದೀನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.

