ಬೆಂಗಳೂರಿನಲ್ಲಿ ಗಾಂಜಾ ಬೆರೆಸಿದ ಜೆಲ್ಲಿ ಚಾಕೊಲೇಟ್ ಮಾರಾಟ ಜಾಲವನ್ನು ಬ್ಯಾಟರಾಯನಪುರ ಪೋಲಿಸರು ಪತ್ತೆ ಹಚ್ಚಿದ್ದು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ಮತ್ತೊಬ್ಬ ಖಾಸಗಿ ಕಂಪನಿ ಉದ್ಯೋಗಿ ಯಾಗಿದ್ದಾನೆ.ಚಿಕ್ಕಮಗಳೂರು ಮೂಲದ ಇಸೈಲ್ ಅದ್ನಾನ್ (24), ಮೊಹಮದ್ ಜಾಹಿದ್ (25) ಬಂಧಿತರು.ಇವರು ಹೆಬ್ಬಾಳ ಸಮೀಪದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಪ್ರತ್ಯೇಕ ಬಾಡಿಗೆ ಮನೆಗಳಲ್ಲಿ ವಾಸವಿದ್ದರು.

ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 1,440 ಗಾಂಜಾ ಮಿಶ್ರಿತ ಜೆಲ್ಲಿಪ್ಯಾಕೆಟ್ಗಳು, 50 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ ಮಂಗಳೂರಿನ ಸ್ನೇಹಿತನ ಮುಖಾಂತರ ಕೊರಿಯರ್ ಮೂಲಕ ಜೆಲ್ಲಿ ಚಾಕೊಲೇಟ್ ತರಿಸಿಕೊಳ್ಳಲಾಗುತ್ತಿತ್ತು. ಎಂಬ ಖಚಿತ ಮಾಹಿತಿಯನ್ನು ಆಧಾರಿಸಿ ಬ್ಯಾಟರಾಯನಪುರ ಇನ್ಸ್ಪೆಕ್ಟರ್ ಕೆ.ಜೀವನ್ ನೇತ್ರತ್ವದ ತಂಡ ಕಾರ್ಯಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

