ತಿರುವನಂತಪುರ : ಪ್ರವೀಣ್ ನಾರಾಯಣನ್ ನಿರ್ದೇಶನದ ಮತ್ತು ಸೂಪರ್ಸ್ಟಾರ್ ಸುರೇಶ್ ಗೋಪಿ ಮತ್ತು ಅನುಪಮಾ ಪರಮೇಶ್ವರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕೋರ್ಟ್ರೂಮ್ ಥ್ರಿಲ್ಲರ್ ‘ JSK- ಜಾನಕಿ vs ಸ್ಟೇಟ್ ಆಫ್ ಕೇರಳ ‘ ಬಿಡುಗಡೆಯನ್ನು ಸೆನ್ಸಾರ್ ಮಂಡಳಿ ತಡೆಹಿಡಿದಿದೆ.

ಚಿತ್ರದ ಶೀರ್ಷಿಕೆ ಮತ್ತು ಪಾತ್ರದ ಹೆಸರಿನಿಂದ ಜಾನಕಿ ಎಂಬ ಪಾತ್ರವನ್ನು ಬದಲಾಯಿಸಬೇಕೆಂಬ ಬೇಡಿಕೆಯ ಆಧಾರದ ಮೇಲೆ ಸೆನ್ಸಾರ್ ಮಂಡಳಿ ಈಗ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಬಿಡುಗಡೆಯನ್ನು ತಡೆಹಿಡಿದಿದೆ.
ಜೂನ್ 27 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದ್ದ ಈ ಚಿತ್ರವು ಕೊನೆಯ ಕ್ಷಣದಲ್ಲಿ ಸೆನ್ಸಾರ್ ಮಂಡಳಿ ಚಿತ್ರದ ಬಿಡುಗಡೆಯನ್ನು ತಡೆಹಿಡಿದಿದೆ.

ಕಾರ್ತಿಕ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ಕಾಸ್ಮೋಸ್ ಎಂಟರ್ಟೈನ್ಮೆಂಟ್ ನಿರ್ಮಿಸಿರುವ ಈ ಚಿತ್ರವನ್ನು ಜೆ. ಫಣೀಂದ್ರ ಕುಮಾರ್ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅಭಿನಯದ ‘ಜೆಎಸ್ಕೆ’ ಚಿತ್ರದ ನಿರ್ಮಾಪಕರಿಗೆ ‘ಜಾನಕಿ’ ಎಂಬುದು ಸೀತಾ ದೇವಿಯ ಮತ್ತೊಂದು ಹೆಸರಾಗಿರುವುದರಿಂದ, ಆ ಚಿತ್ರದ ಶೀರ್ಷಿಕೆಯ ಪಾತ್ರವನ್ನು ಬದಲಾಯಿಸುವಂತೆ CBFC ಪರಿಷ್ಕರಣಾ ಸಮಿತಿ ಮೌಖಿಕವಾಗಿ ನಿರ್ದೇಶನ ನೀಡಿತ್ತು.ಆದರೆ ಚಿತ್ರದ ನಿರ್ಮಾಪಕರು ಇದೊಂದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ ಬಹಳ ಸಮಯದ ನಂತರ ಬಿಜೆಪಿ ಎಂಪಿ, ಕೇಂದ್ರ ಸಚಿವರಾದ ನಟ ಸುರೇಶ್ ಗೋಪಿಯವರು ಈ ಚಿತ್ರದಲ್ಲಿ ನಟಿಸಿದ್ದಾರೆ ಹಾಗೂ ಚಿತ್ರದ ಪ್ರಚಾರ ಹಾಗೂ ಸುರೇಶ್ ಗೋಪಿಯವರ ವರ್ಚಸ್ಸನ್ನು ಮೊಟಕುಗೊಳಿಸಲು ಸರಕಾರ ಈ ರೀತಿ ಮಾಡಿದೆ ಎಂದಿದ್ದಾರೆ.

ಜಾನಕಿ vs ಕೇರಳ ರಾಜ್ಯ ‘ (ಜೆಎಸ್ಕೆ) ಚಿತ್ರಕ್ಕೆ ಪ್ರಮಾಣೀಕರಣ ನಿರಾಕರಿಸಿದ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಸೋಮವಾರ ತಿರುವನಂತಪುರಂನಲ್ಲಿರುವ ಸಿಬಿಎಫ್ಸಿ ಕಚೇರಿಯ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಕೇರಳ ಚಲನಚಿತ್ರ ನೌಕರರ ಒಕ್ಕೂಟ (FEFKA), ಕೇರಳ ಚಲನಚಿತ್ರ ನಿರ್ಮಾಪಕರ ಸಂಘ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಪ್ರತಿನಿಧಿಗಳು.ಹಾಗೂ ಚಲನಚಿತ್ರೋದ್ಯಮಕ್ಕೆ ಸೇರಿದ ಜನರು ಭಾಗವಹಿಸಲಿದ್ದಾರೆ ಎಂದು ಕೇರಳ ಚಲನಚಿತ್ರ ನೌಕರರ ಒಕ್ಕೂಟ (ಫೆಫ್ಕಾ) ಪ್ರಧಾನ ಕಾರ್ಯದರ್ಶಿ ಬಿ ಉನ್ನಿಕೃಷ್ಣನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.


