ಮಂಗಳೂರು :ರಾಜ್ಯದಲ್ಲಿ ಪ್ರಸ್ತುತ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರಕಾರವು ತೀರ ಭ್ರಷ್ಟಾಚಾರದಲ್ಲಿ ತೊಡಗಿ ಅದಕ್ಷ ಮತ್ತು ಆಡಳಿತ ವೈಫಲ್ಯದಿಂದ ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿದ್ದಾರೆ.
ಎಲ್ಲಾ ಕಚೇರಿಗಳಲ್ಲಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ,ಯಾವುದೇ ಅಭಿವೃದ್ಧಿ ಕೆಲಸಗಳು ಪ್ರಗತಿ ಕಾಣುತ್ತಿಲ್ಲ. ರಸ್ತೆಗಳು,ಸೇತುವೆಗಳು,ಶಾಲೆಗಳು ಯಾವುದೂ ಕೂಡ ನಿರ್ಮಾಣವಾಗದೆ ಸಂಪೂರ್ಣವಾಗಿ ಕುಂಠಿತವಾಗಿರುವ ಅಭಿವೃದ್ಧಿಯಿಂದಾಗಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಆಡಳಿತದ ವೈಫಲ್ಯದಿಂದಾಗಿ ಅರಾಜಕತೆ ತಾಂಡವಾಡುತ್ತಿದೆ,ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಸರಕಾರದ ನಿರ್ಲಜ್ಜ ನಡೆಯ ವಿರುದ್ದ ದಿನಾಂಕ 30-06-2025 ನೇ ಸೋಮವಾರ ಬೆಳಿಗ್ಗೆ 10.30 ಕ್ಕೆ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ಜನತಾ ದಳದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಸಂತ್ ಪೂಜಾರಿ, ಕಾರ್ಯಾಧ್ಯಕ್ಷರು ದ ಕ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

