ಉ.ಪ್ರದೇಶ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗಾಜಿಯಾಬಾದ್ನ ಉಜ್ವಲಾ ಸಿಂಗ್ ಎನ್ನುವ ಮಹಿಳೆಯೊಬ್ಬರು ತನಗೆ ಮಾನಸಿಕ, ಆರ್ಥಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆಂದು ಉತ್ತರ ಪ್ರದೇಶದಲ್ಲಿ ಯಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನಗೆ ಸಹಾಯ ಮಾಡಲಿಲ್ಲ ಎಂದು ಉಜ್ವಲಾ ಸಿಂಗ್ ಹೇಳಿಕೊಂಡ ನಂತರ ಈ ವಿಷಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಗೆ ತಲುಪಿದೆ.

ಉಜ್ವಲಾ ಸಿಂಗ್ ಅವರು ಯಶ್ ದಯಾಳ್ ಅವರೊಂದಿಗೆ ಕಳೆದ 5 ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅವರು ತಮ್ಮ ವಿಶ್ವಾಸವನ್ನು ಗಳಿಸಿದರು,ದಯಾಳ್ ಆತನ ಕುಟುಂಬಕ್ಕೆ ನನ್ನನ್ನು ‘ಸೊಸೆ’ ಎಂದು ಪರಿಚಯಿಸಿದ್ದರು. ಅದನ್ನು ನಾನು ನಂಬಿದ್ದೆ. ಮದುವೆಯಾಗುವ ಭರವಸೆ ನೀಡಿದ್ದ ಅವರು ಈಗ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಯಾಳ್ ಜೊತೆ ಐದು ವರ್ಷಗಳಿಗೂ ಹೆಚ್ಚು ಕಾಲ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿರುವ ದೂರುದಾರೆ ದಯಾಳ್ ಮದುವೆಯಾಗುವ ಬಗ್ಗೆ ತನಗೆ ಭರವಸೆ ನೀಡಿದ್ದರು ಆದರೆ ಇದೀಗ ಮದುವೆಯಾಗಲು ನಿರಾಕರಿಸಿದ್ದಾರೆ.ನಾನು ಮೋಸ ಹೋದ ಬಗ್ಗೆ ಯಶ್ ದಯಾಳ್ ಅವರನ್ನು ಪ್ರಶ್ನಿಸಿದಾಗ, ಅವರು ನನ್ನ ಮೇಲೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾರಂಭಿಸಿದರು ಎಂದು ಆರೋಪಿಸಿದ್ದಾರೆ.ಅಲ್ಲದೆ ದಯಾಳ್ ಅವರು ಇತರ ಹುಡುಗಿಯರೊಂದಿಗೆ ಇದೇ ರೀತಿಯ ನಕಲಿ ಸಂಬಂಧ ಹೊಂದಿದ್ದಾರೆ ಎಂದು ಉಜ್ವಲಾ ಸಿಂಗ್ ಆರೋಪಿಸಿದ್ದಾರೆ.

ವರದಿಗಳ ಪ್ರಕಾರ ಉಜ್ವಲಾ ಸಿಂಗ್ ತಮ್ಮ ದೂರಿನ ಜೊತೆಗೆ ಚಾಟ್ ಸ್ಕ್ರೀನ್ಶಾಟ್ಗಳು,ವಿಡಿಯೋ ಕರೆ ರೆಕಾರ್ಡಿಂಗ್ಗಳು ಮತ್ತು ಛಾಯಾಚಿತ್ರಗಳು ಸೇರಿದಂತೆ ವ್ಯಾಪಕವಾದ ಪುರಾವೆಗಳನ್ನು ಸಲ್ಲಿಸಿದ್ದಾರೆ.

ಜೂನ್ 14 ರಂದು ಮಹಿಳೆ ದೂರು ದಾಖಲಿಸಿದ್ದರು, ಆದರೆ ಪೊಲೀಸ್ ಠಾಣೆ ಮಟ್ಟದಲ್ಲಿ ಯಾವುದೇ ಮಹತ್ವದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನ್ಯಾಯಕ್ಕಾಗಿ ಮುಖ್ಯಮಂತ್ರಿ ಕಚೇರಿಯ ಮೊರೆ ಹೋಗಿದ್ದರು.ಇದರ ನಂತರ ಎಫ್ಐಆರ್ ದಾಖಲಿಸಲಾಗಿದ್ದು, ಜುಲೈ 21, 2025 ರೊಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಕಚೇರಿ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. “ಆಕೆಯ ಬಳಿ ಚಾಟ್ಗಳು, ಸ್ಕ್ರೀನ್ಶಾಟ್ಗಳು, ವಿಡಿಯೋ ಕರೆಗಳು ಮತ್ತು ಫೋಟೋಗಳು ಇತ್ಯಾದಿಗಳು ಸಾಕ್ಷಿಯಾಗಿವೆ. ಈ ವಿಷಯವನ್ನು ತ್ವರಿತವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.ಇದೀಗ ಪೋಲಿಸರು ಎರಡೂ ಕಡೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ನಡೆಯುತ್ತಿದ್ದಾರೆ.

