ಮಂಗಳೂರು : ಜಿಲ್ಲಾ ಜನತಾ ದಳ (ಜಾ) ಪಕ್ಷದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಸಭೆಯನ್ನು ತಾಲ್ಲೂಕು ಕಚೇರಿ ಮುಂಭಾಗ ಕೈಗೊಳ್ಳಲಾಯಿತು. ಪಕ್ಷದ ರಾಜ್ಯ ವಕ್ತಾರ M B ಸದಾಶಿವ, ರಾಜ್ಯಪ್ರಧಾನ ಕಾರ್ಯದರ್ಶಿ ವಿಟ್ಲ ಮಹಮ್ಮದ್ ಕುಂಞ,ಹೈದರ್ ಪರ್ತಿಪಾಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ಸ್ವಾಗತಿಸಿ ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಮೂಲ್ಕಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಉಸ್ತುವಾರಿ ಪ್ರವೀಣ ಚಂದ್ರ ಜೈನ್, ಅಮರಶ್ರೀ ಅಮರನಾಥ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಅಜೀಜ್ ಕುದ್ರೋಳಿ, ಕಡಬ ಮೀರಾಸಾಬ್, ಮೋಹನ್ ದಾಸ್ ಉಳ್ಳಾಲ, ಉಸ್ಮಾನ್ ಅಪ್ಸ, ಧನರಾಜ್, ಪುಷ್ಪರಾಜ, ಭಾರತಿ ಪುಷ್ಪರಾಜ, ಮಹಾವೀರ್ ಪುತ್ತೂರು, ವೀಣಾ ಶೆಟ್ಟಿ, ಚೂಡಾಮಣಿ, ವಿನ್ಸೆಂಟ್ ಸುರತ್ಕಲ್, ಕನಕದಾಸ, ರವೀಂದ್ರ ಉಳ್ಳಾಲ, ನಾಗೇಶ್, ಮುನೀರ್ ಮುಕ್ಕಛೇರಿ, ಬೆಂಗ್ರೆ ಹಮೀದ್, ಬೆಂಗ್ರೆ ಮಹಮ್ಮದ್, ಪುತ್ತುಮೋನು, ಸುಕುಮಾರ್ ಕೂಡ್ತಗೊಳಿ, ರಾಕೇಶ್ ಕುಂಟಿಕಾನ್, ಸಂಜೀವ ಮಡಿವಾಳ ಕಟೀಲ್, ನಝೀರ್ ಸಮನಿಗೆ, ಸುಮಿತ್ ಸುವರ್ಣ, ಧರ್ಮರಾಜ ಅಡ್ಕಾಡಿ ಮುಂತಾದ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ನಂತರ ಎಂ.ಬಿ ಸದಾಶಿವರವರು ಮಾತನಾಡಿ ಬಹುಮತದಿಂದ ಅಧಿಕಾರಕ್ಕೆೆ ಬಂದ ಕಾಂಗ್ರೆೆಸ್ ಸರಕಾರ ಎರಡು ವರ್ಷಗಳಿಂದ ಅಧಿಕಾರದ ಮದದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ. ಇಡೀ ರಾಜ್ಯದ ಬೊಕ್ಕಸ ಖಾಲಿ ಮಾಡಿ ಜನಸಾಮಾನ್ಯರಿಗೆ ಅನಗತ್ಯ ಹೊರೆ ಹೊರಿಸಿ ಸಾಮಾನ್ಯ ಜನ ನೆಮ್ಮದಿಯಿಂದ ಬದುಕದಂತೆ ಮಾಡಿದೆ. ಯಾವುದೇ ಪಕ್ಷದ ಹಂಗಿಲ್ಲದೆ ಸರಕಾರ ಸ್ವಯಂ ಬಲದಿಂದ ಅಧಿಕಾರ ಮಾಡಿ ಜನಸಾಮಾನ್ಯರ ಬೇಡಿಕೆ ಈಡೇರಿಸಿ ನೆಮ್ಮದಿ ಬರಬಹುದೆಂಬ ನಿರೀಕ್ಷೆೆ ಇತ್ತು. ಆದರೆ ಸರಕಾರ ಅಧಿಕಾರದ ಅಹಂಕಾರದಿಂದ ಎಲ್ಲ ವರ್ಗದ ಮೇಲೆ ಗದಾಪ್ರಹಾರ ನಡೆಸಲು ಆರಂಭಿಸಿತು.

ವಾಲ್ಮೀಕಿ ನಿಗಮದ ದೊಡ್ಡ ಹಗರಣದಲ್ಲಿ ಶಾಸಕ ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಕೈ ಬದಲಾಯಿತು ಎಂದು ರಾಜ್ಯವೇ ಬೆಚ್ಚಿ ಬೀಳಿತು . ಅಧಿಕಾರ ಶಾಹಿಯನ್ನು ಬಳಸಿ ಅಧಿಕಾರದ ವ್ಯಕ್ತಿಗಳನ್ನು ಕೂಡ ಬಲಿಪಶು ಮಾಡಿ ಹಣ ಸಂಗ್ರಹ ದಂಧೆಗೆ ಸರಕಾರ ತೊಡಗಿದ್ದಕ್ಕೆೆ ಈ ಹಗರಣ ನಿದರ್ಶನವಾಯಿತು. ಹಗರಣದ ಸರಮಾಲೆಗಳೇ ಆರಂಭವಾದವು. ಅಹಿಂದ ಚಳವಳಿ ಹುಟ್ಟು ಹಾಕಿದ ಹಮ್ಮಿನಿಂದ ಮೆರೆಯುತ್ತಿರುವ ಸಿಎಂ ಸ್ವತಃ ಭೂ ಹಗರಣದಲ್ಲಿ ಸಿಲುಕಿಕೊಂಡರು. ನಾಚಿಕೆಗೇಡು ಪರಿಸ್ಥಿತಿ ನಿರ್ಮಾಣವಾಯಿತು. ಸೈಟ್ ಹಗರಣದಲ್ಲಿ ಸಿಲುಕಿ ಒದ್ದಾಾಡಿದರು. ಆದರೆ ಅದರಿಂದ ತಪ್ಪಿಸಿಕೊಳ್ಳಲು ತನ್ನ ಚಾಣಾಕ್ಷತನದಿಂದ ಪತ್ನಿ ಹೆಸರು ಬಲಿ ಕೊಟ್ಟರು. ದಾಖಲೆಗಳನ್ನು ಬದಲಾಯಿಸಿ ಹಗರಣದಿಂದ ಪಾರಾಗಲು ಪ್ರಯತ್ನಿಸಿದ್ದಾಾರೆ. ಅನಂತರವೂ ಅನೇಕ ಪ್ರಕರಣಗಳು ನಡೆದಿವೆ.

ಆರ್ಸಿಬಿ ವಿಜಯೋತ್ಸವವನ್ನು ಪ್ರಚಾರದ ತೆವಳಿಗಾಗಿ ಅನಗತ್ಯವಾಗಿ ಕ್ರೀಡಾಭಿಮಾನಿಗಳನ್ನು ಹುಚ್ಚೆೆಬ್ಬಿಸಿ ಯಾವುದೇ ವ್ಯವಸ್ಥೆೆ ಮಾಡದೆ ರಾಜ್ಯದ ರಾಜಧಾನಿಗೆ ಕ್ರೀಡಾಭಿಮಾನಿಗಳನ್ನು ಆಹ್ವಾನಿಸಿ ಪೊಲೀಸರ ಸಲಹೆ ನಿರ್ಲಕ್ಷಿಸಿ ಅವರಿಗೆ ನಿಯಂತ್ರಣಕ್ಕೆೆ ಅವಕಾಶ ನೀಡದೆ ವ್ಯವಸ್ಥೆೆ ಅವ್ಯವಸ್ಥೆೆ ಮಾಡಿ ಕಾಲ್ತುಳಿತಕ್ಕೆೆ ಅಮಾಯಕ ಕ್ರೀಡಾಭಿಮಾನಿಗಳನ್ನು ಬಲಿ ಕೊಟ್ಟದ್ದು ದೇಶದ ಅತ್ಯಂತ ಹೀನ ಕೃತ್ಯ. ಅನಂತರ ದಕ್ಷ ಪೊಲೀಸ್ ಅಧಿಕಾರಿಯನ್ನು ಬಲಿಕೊಟ್ಟು ಅಧಿಕಾರ ಉಳಿಸಿಕೊಂಡರು. ಪೊಲೀಸರ ನೈತಿಕ ಬಲ ಕುಗ್ಗಿಸುವ ಕೆಲಸ. ತಮ್ಮ ತಪ್ಪು ಮರೆಮಾಚಿದರು. ಇದುವರೆಗೆನ ಸರಕಾರದಲ್ಲಿ ಅತ್ಯಂತ ಹೆಚ್ಚು ಭ್ರಷ್ಟ ಸರಕಾರ ಈಗಿನ ಕಾಂಗ್ರೆೆಸ್ ಸರಕಾರ . ಕಂದಾಯ ಸಚಿವರು ತಾಲೂಕು ಕಚೇರಿಗೆ ಭೇಟಿ ನೀಡಿ ಅಲ್ಲಿ ಭ್ರಷ್ಟಾಾಚಾರ ನಡೆಯುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿದ್ದಾಾರೆ. ರಾಜು ಕಾಗೆ ಹಣವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ತುಂಬಿದೆ ಎಂದಿದ್ದಾರೆ.

ಬಿ.ಆರ್.ಪಾಟೀಲ್ ವಸತಿ ಇಲಾಖೆಯಲ್ಲಿ ಲಂಚ ಕೊಡಗೆ ಮನೆ ಸಿಗುವುದಿಲ್ಲ ಹೇಳುತ್ತಿದ್ದಾಾರೆ. ಹೀಗೆ ಕಾಂಗ್ರೆೆಸ್ ಮುಖಂಡರೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎನ್ನುತ್ತಿದ್ದಾರೆ. ದ.ಕ ಜಿಲ್ಲೆೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಶಾಲೆ, ಒಂದು ಸೇತುವೆ, ರಸ್ತೆೆ, ಆಸ್ಪತ್ರೆೆ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಪ್ರಗತಿದಾಯಕ ಕೆಲಸ ಕಾರ್ಯಗಳು ನಡೆದಿಲ್ಲ.
ದ.ಕ ಜಿಲ್ಲೆೆಯಲ್ಲಿ ಗಲಭೆ, ಹಿಂಸೆ, ದುರ್ಮರಣವಾಗಿದೆ. ತುಷ್ಟೀಕರಣದ ನೀತಿ ಅನುಸರಿಸಿದೆ. ಜಿಲ್ಲೆೆಯಲ್ಲಿ ಕೋಮು ಗಲಭೆಗಳಿಲ್ಲ. ಗಲಭೆಗಳಿವೆ. ಅದಕ್ಕೆೆ ಪೂರಕವಾಗಿ ತುಷ್ಟೀಕರಣ ನೀತಿಯಿಂದ ದ್ವೇಷ ಭಾವನೆ ಉಂಟಾಗಿದೆ. ಇದುವರೆಗೆ ಅದು ಮನಸ್ಸಿನಲ್ಲಿ ಬೇಧಭಾವ ಹುಟ್ಟಿಸಿದ ಕಾರಣದಿಂದ ಗಲಭೆ ಆಗುತ್ತಿದೆ. ಅವರು ಹುಟ್ಟು ಹಾಕಿದ ವಿಷಬೀಜ. ಒಂದು ಸಮುದಾಯದ ಪರವಾಗಿ ಇದ್ದೇವೆ ಎಂದು ತೋರಿಸಿಕೊಡುತ್ತಿದೆ. ಆದರೆ ಏನನ್ನೂ ನೀಡುತ್ತಿಲ್ಲ. ಅಲ್ಪಸಂಖ್ಯಾಕರಿಗೆ ಮನೆ, ಗುತ್ತಿಗೆ ನೀಡುವ ಭರವಸೆ ಮೊಣಗೈಗೆ ಸವರಿದ ತುಪ್ಪ. ಕುಮಾರಸ್ವಾಮಿ ಸಿಎಂ ಆಗಿರುವಾಗ ಅಲ್ಪಸಂಖ್ಯಾಾಕರಿಗೆ ಮೀಸಲಾತಿ ನೀಡಿದ್ದರು. ಅದನ್ನು ಕಾಂಗ್ರೆೆಸ್ ನೀಡುತ್ತಿಲ್ಲ. ಜನಸಾಮಾನ್ಯರು, ಬಡ ಅಲ್ಪಸಂಖ್ಯಾತರಿಗೆ ಮೀಸಲಾತಿ ಬೇಕು. ಅವರ ಮಕ್ಕಳು, ಶಿಕ್ಷಣಕ್ಕಾಗಿ ಮೀಸಲಾತಿ ಬೇಕು. ಅದನ್ನು ಕೊಡದೆ ಅಲ್ಪಸಂಖ್ಯಾತರ ಬಗ್ಗೆೆ ಮಾತನಾಡುವ ನೈತಿಕತೆ ಇಲ್ಲ. ಅವರಿಗೆ ಸರಕಾರ ದ್ರೋಹ ಬಗೆಯುತ್ತಿದೆ. ಜಾತಿ ಸಮೀಕ್ಷೆೆ ನಂತರ ಮೀಸಲಾತಿ ಬದಲಾಗುತ್ತದೆ ಎಂಬ ಭಾವನೆ ಇತ್ತು. ಆದರೆ ಜಾತಿ ಸಮೀಕ್ಷೆೆ ವರದಿ ಜಾರಿಗೆ ಬರುವಾಗ ರಾಷ್ಟ್ರೀಯ ಸಮಿತಿ ತಡೆಹಿಡಿದು ಮರುಸಮೀಕ್ಷೆೆಗೆ ಸೂಚಿಸಿದೆ. ಇನ್ನು 10 ವರ್ಷ ಪ.ಜಾತಿ, ಪಂಗಡ, ಹಿಂದುಳಿದವರಿಗೆ ಯಾವುದೇ ಸವಲತ್ತು ಸಿಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಪಿಂಚಣಿ, ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ಕಾರ್ಡ್ಗಳನ್ನು ಕಿತ್ತುಕೊಂಡಿದೆ. ಬಡವರು ಪ್ರತಿದಿನ ಕಚೇರಿಗಳಿಗೆ ಅಲೆಯುವಂತೆ ಮಾಡಿದೆ. ಕಾಲು ಅಂಶ ಗ್ಯಾರಂಟಿ ಕೊಟ್ಟು ಮುಕ್ಕಾಲು ಪಾಲು ಕಿತ್ತುಕೊಳ್ಳುತ್ತಿದ್ದಾರೆ. ಹೊಟೇಲ್ನಲ್ಲಿ ಹೊಟ್ಟೆೆ ತುಂಬಾ ತಿಂಡಿ ತಿನ್ನುವ ಪರಿಸ್ಥಿತಿ ಇಲ್ಲ. ಧವಸ ಧಾನ್ಯಗಳ ಬೆಲೆ ಏರಿದೆ. ರೈತರಿಗೆ ಏನೂ ಲಾಭ ಸಿಕ್ಕಿಲ್ಲ. ಕೊಳೆ ರೋಗಕ್ಕೆೆ, ಹಳದಿರೋಗ ಪರಿಹಾರವಿಲ್ಲ. ರಬ್ಬರ್ ಬೆಳೆಗೆ ಏನೂ ಇಲ್ಲ. ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುವ, ಅಧಿಕಾರಕ್ಕಾಗಿ ಗುಂಪುಗಾರಿಕೆ, ಜಾತಿ ಎತ್ತಿಕಟ್ಟಿ ವೈಷಮ್ಯ ಬೀಜ ಬಿತ್ತುತ್ತಿರುವ ಸರಕಾರವನ್ನು ಕಿತ್ತೊಗೆಯಬೇಕಾಗಿದೆ. ಕುಮಾರಸ್ವಾಮಿ ಕೇಂದ್ರ ಸಚಿವನಾಗಿ ರಾಜ್ಯದ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿ ರಾಜ್ಯದ ಸಂಪತ್ತು ಹೆಚ್ಚಿಸಲು ಪ್ರಾಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿಕೊಡಲು ಮುಂದಾಗಿದ್ದಾರೆ. ರಾಜ್ಯಕ್ಕೆೆ 4,500 ಎಲೆಕ್ಟ್ರಿಕ್ ಬಸ್ ನೀಡುವ ವ್ಯವಸ್ಥೆೆ ಮಾಡಿದ್ದಾರೆ. ಅವರು ಇಷ್ಟು ಸಾಧನೆ ಮಾಡುವಾಗ ರಾಜ್ಯ ಸರಕಾರ ಚಲನಶೀಲತೆ ಇಲ್ಲದೆ ನಿಂತಿದೆ. ಜಿಲ್ಲೆೆಯಲ್ಲಿ ಕಾಂಗ್ರೆೆಸ್ ಪಕ್ಷ ನಿರ್ಜೀವವಾಗಿದೆ. ಅಭಿವೃದ್ಧಿ ಕಾರ್ಯ ಮಂಜೂರು ಮಾಡಿಸುವ ಯೋಗ್ಯತೆ, ಇಚ್ಛಾಬಲ ಇಲ್ಲ. ಇವರಿಂದ ಯಾವ ಸೇತುವೆ, ಚರಂಡಿ ಮಾಡಿಸಲು ಆಗದು. ಅವರು ಒಳಜಗಳದಲ್ಲಿ ಮುಳುಗಿದ್ದಾರೆ. ಅವರಲ್ಲಿ ಜನಪರ ಕಾಳಜಿ ಇಲ್ಲ. ಜನಸಾಮಾನ್ಯರು ಧ್ವನಿ ಎತ್ತಬೇಕಾಗಿದೆ.

