ಮಂಗಳೂರು :107ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಸೂರಜ್ ಪಿ.ಯು ಕಾಲೇಜ್ ಮುಡಿಪು ಇವರ ಜಂಟಿ ಆಶ್ರಯದಲ್ಲಿ 107ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಜುಲೈ 2 ರಂದು ಬುಧವಾರ ಸಮಯ 10 ಗಂಟೆಗೆ ಸೂರಜ್ ಪಿ.ಯು ಕಾಲೇಜ್ ಮುಡಿಪು ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರಜ್ ಪಿ.ಯು ಕಾಲೇಜ್ ಮುಡಿಪು ಇದರ ಚೇರ್ಮನ್ ಡಾ. ಮಂಜುನಾಥ್ ಎಸ್ ರೇವಣ್ಕಾರ್ ವಹಿಸುವರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ಚುಟುಕು ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷರಾದ ಇರಾ ನೇಮು ಪೂಜಾರಿ , ಹಾಗೂ ನಿವೃತ್ತ ಶಿಕ್ಷಕಿ ಹಾಗೂ ಲೇಖಕಿ ಡಾ. ಅರುಣಾನಾಗರಾಜ್ ಮುಖ್ಯ ಸಂಪನ್ಮೂಲ ಅತಿಥಿಯಾಗಿ ಭಾಗವಹಿಸುವರು. ಗೌರವ ಮುಖ್ಯ ಅತಿಥಿಗಳಾಗಿ ಆತ್ಮಶಕ್ತಿ ಕೋ ಆಪರೇಟಿವ್ ಬ್ಯಾಂಕ್ ಪಡೀಲ್ ಇದರ ಚೇರ್ಮನ್ ಸಹಕಾರ ರತ್ನ ಚಿತ್ತರಂಜನ್ ಬೋಳೂರು, ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಪ್ರಸಾದ್ ರೈ ಕಲ್ಲಿಮಾರ್ ಮತ್ತು ನಿವೃತ್ತ ಶಿಕ್ಷಕರು ಹಾಗೂ ಲೇಖಕರಾದ ರವೀಂದ್ರ ರೈ ಕಲ್ಲಿಮಾರ್ , ಸೂರಜ್ ಪಿ.ಯು ಕಾಲೇಜ್ ಮುಡಿಪು ಇದರ ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ , ಕವಯತ್ರಿ ,ಲೇಖಕಿ ಶಿಕ್ಷಕಿ ಸುರೇಖಾ ಯಾಳವಾರ, ಉಮೇಶ್ ರಾವ್ ಕುಂಬ್ಳೆ ಉಪಸ್ಥಿತರಿವರು ಎಂದು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

