ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ವತಿಯಿಂದ ನೀಡುವ ಪ್ರತಿಷ್ಠಿತ ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ- 2025 ಯನ್ನು ಯಕ್ಷಗಾನ ರಂಗದ ಹಿರಿಯ ಕಲಾವಿದರು ಶ್ರೀ ಕಟೀಲು ಮೇಳದಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಾಲ್ಕು ದಶಕಗಳ ಕಾಲ ತಿರುಗಾಟ ಮಾಡಿರುವ ಕಾಸರಗೋಡು ಶ್ರೀ ಸುಬ್ರಾಯ ಹೊಳ್ಳರಿಗೆ ಪ್ರದಾನ ಮಾಡಲಾಯಿತು.
ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ. ದಶಕಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ಹಿಮ್ಮೇಳ ಮುಮ್ಮೇಳ ಕಲಾವಿದರಾದ ಶ್ರೀಯುತರುಗಳಾದ ಭವಾನಿ ಶಂಕರ ಶರ್ಮಾ, ಜೀವನ್. ಎಂ ಕ್ರಾಸ್ತ, ಭಾಸ್ಕರ್ ಪೂಜಾರಿ ನೀರ್ ಮಾರ್ಗ, ಆನಂದ ಸಾಲಿಯಾನ್ ಮತ್ತು ಶ್ರೀಮತಿ ಸ್ವಾತಿ ಶರತ್ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ.ಗೆ ಸದಾ ಬೆಂಬಲ ಪ್ರೋತ್ಸಾಹ ನೀಡುತ್ತಾ ಬಂದಿರುವ ಪೋಷಕರು, ಪ್ರಾಯೋಜಕರುಗಳು, ಹಾಗೂ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದಶಮಾನೋತ್ಸವದ ಅಂಗವಾಗಿ ತರಬೇತಿಯಲ್ಲಿರುವ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸ್ಪರ್ಧಿಗಳು ತಾವು ಬಿಡಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಬಹುಮಾನಗಳ ತೀರ್ಪುಗಾರಿಕೆಯನ್ನು ಕ್ರಿಯಾತ್ಮಕ ಕಲಾ ನಿರ್ದೇಶಕರು ಶ್ರೀ ಬಿ. ಕೆ. ಗಣೇಶ್ ರೈ , ಚಿತ್ರ ಕಲಾವಿದರಾದ ಶ್ರೀಮತಿ ಮಮತಾ ರವಿ ಕೊಟ್ಯಾನ್, ಶ್ರೀ ರಜನೀಶ್ ಅಮೀನ್ ರವರು ನಡೆಸಿಕೊಟ್ಟರು.
ದಿನಪೂರ್ತಿ ನಡೆದ ದಶಮಾನೋತ್ಸವದ ಸಂಭ್ರಮದಲ್ಲಿ ಪಾಲ್ಗೊಳಲು ಅಗಮಿಸಿದವರಿಗೆ ಬೆಳಗಿನಿಂದ ರಾತ್ರಿಯವರೆಗೆ ಊಟೋಪಚಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು ಯಕ್ಷಗಾನ ಅಭ್ಯಾಸ ತರಗತಿಯ 150 ಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರ ತಂಡ, ಯಕ್ಷಯೋಧಾಸ್, ಕಟೀಲ್ ಕ್ರಿಕೇಟರ್ಸ್, ಬಿರುವೆರ್ ಕುಡ್ಲ ತಂಡದ ಉತ್ಸಾಹಿ ಕಾರ್ಯ ಪಡೆ ತಮ್ಮ ಅಮೂಲ್ಯ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿದ್ದಾರೆ.

ಮಧ್ಯಾನ್ಹ 2.00 ಗಂಟೆಯಿಂದ ಯಕ್ಷಗಾನ “ಶಿವಾನಿ ಸಿಂಹವಾಹಿನಿ” ಕಥಾ ಪ್ರಸಂಗವನ್ನು ಕಿರಿಯ ಹಾಗೂ ವಿವಿಧ ವಯೋಮಿತಿಯ ಅಭ್ಯಾಸ ಕೇಂದ್ರದಲ್ಲಿ ಅಭ್ಯಾಸ ಮಾಡಿ ಪರಿಪಕ್ವತೆಯನ್ನು ಪಡೆದು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ಮುಮ್ಮೇಳ ಮತ್ತು ಹಿಮ್ಮೇಳದಲ್ಲಿ ಕಿರಿಯರು ಹಿರಿಯರು ಒಟ್ಟು 72 ಕಲಾವಿದರು 108 ಅದ್ಭುತ ವೇಷಗಳು 7 ಹಿಮ್ಮೇಳ
ಕಲಾವಿದರು 3 ಕಾರ್ಯಕರ್ತರು ನೀಡಿರುವ ಪ್ರದರ್ಶನ ನೀಡಿದರು.ಹಲವು ತಿಂಗಳುಗಳ ಕಾಲ ಪೂರ್ವಭಾವಿ ತಯಾರಿಯಲ್ಲಿ ಹೊರಹೊಮ್ಮಿದ ದಶಮನೋತ್ಸವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ದಾಖಲೆಯನ್ನು ನಿರ್ಮಿಸಿದೆ.

ಮಂಗಳೂರಿನಿಂದ ಆಗಮಿಸಿದ ಶ್ರೀಯುತ ಚೇತನ್ ಶೆಟ್ಟಿಯವರು ತಮ್ಮ ವಾಕ್ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದು ದಿನಪೂರ್ತಿ ಕಾರ್ಯಕ್ರಮ ನಿರೂಪಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ. ಸಂಚಾಲಕರು ಕೊಟ್ಟಿಂಜ ದಿನೇಶ್ ಶೆಟ್ಟಿಯವರು ಮತ್ತು ನಿರ್ದೇಶಕರು ಹಾಗೂ ಮುಖ್ಯ ಗುರುಗಳು ಶ್ರೀ ಶೇಖರ ಡಿ ಶೆಟ್ಟಿಗಾರ್ ಕಲಾವಿದರು, ಪೊಷಕರು ಹಾಗೂ ಪ್ರೇಕ್ಷಕವರ್ಗ ಹಾಗೊ ಮಾಧ್ಯಮಗಳಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಸಿದ್ದಾರೆ.

ಬಿ. ಕೆ. ಗಣೇಶ್ ರೈ – ದುಬೈ

