ದುಬೈ : ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ. ಇದರ ದಶಮಾನೋತ್ಸವ ಹಾಗೂ ದುಬಾಯಿ ಯಕ್ಷೋತ್ಸವ ಸಂಭ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಸಹಯೋಗದೊಂದಿಗೆ ಇತ್ತೀಚಿಗೆ ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.

ಜೂನ್ 29ರಂದು ದುಬೈಯ ಇಂಡಿಯನ್ ಹೈಸ್ಕೂಲ್ ಶೇಖ್ ರಾಶೀದ್ ಆಡಿಟೋರಿಯಂನ ಭವ್ಯ ವೇದಿಕೆಯಲ್ಲಿ ಬೆಳಿಗ್ಗೆ 9.00 ಗಂಟೆಗೆ ಪುರೋಹಿತರಾದ ಪುತ್ತಿಗೆ ವಾಸುದೇವ ಭಟ್ ಮತ್ತು ಅರ್ಚಕರ ತಂಡದವರಿಂದ ಚೌಕಿ ಪೂಜೆ ನಡೆಯಿತು.ನಂತರ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ.ಯ ಸದಸ್ಯರು,ಅತಿಥಿಗಳು,ಹಿಮ್ಮೇಳ ಮುಮ್ಮೇಳದ ಕಲಾವಿದರು ಹಾಗೂ ಸರ್ವ ಸದಸ್ಯರು ಸಿರಿಗಂಧ ಪ್ರಸಾದವನ್ನು ಸ್ವೀಕರಿಸಿದರು.

ಯಕ್ಷಗಾನ ಅಭ್ಯಾಸ ಕೇಂದ್ರದ ಕಿರಿಯ ಹಾಗೂ ಹಿರಿಯ ಮಕ್ಕಳಿಂದ ಪೂರ್ವರಂಗ ನಡೆಯಿತು.ಊರಿನಿಂದ ಬಂದಿರುವ ಚೆಂಡೆ ಮದ್ದಳೆ ವಾದಕರಾದ ಶ್ರೀ ಚಂದ್ರ ಶೇಖರ ಸರಪಾಡಿ, ಹಾಗೂ ದುಬಾಯಿಯ ಚೆಂಡೆ ವಾದಕರಾದ ಶ್ರೀ ಸವಿನಯ ನೆಲ್ಲಿತೀರ್ಥ ಇವರ ಹಿಮ್ಮೇಳದಲ್ಲಿ ಭಾಗವತರಾದ ಶ್ರೀ ಸತೀಶ್ ಶೆಟ್ಟಿ ಪಟ್ಲ, ದೇವಿಪ್ರಸಾದ್ ಆಳ್ವ ಮಹಿಳಾ ಭಾಗವತರು ಶ್ರೀಮತಿ ಕಾವ್ಯಶ್ರೀ ಅಜೇರು ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಇವರು ಯಕ್ಷಗಾನ ಗಾಯನ ಸೌರಭವನ್ನು ನಡೆಸಿಕೊಟ್ಟರು.


ದಶಮನೋತ್ಸವ ಸಂಭ್ರಮ ಸಡಗರದಲ್ಲಿ ಶ್ರೀ ದೇವಿ ಭಜಕ ವೃಂದ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಅಭಿಮಾನಿ ವೃಂದದವರ ಕೊಡುಗೆಯಾಗಿ ಶ್ರೀ ದೇವಿಗೆ ಬೆಳ್ಳಿಯ ಕಿರೀಟ, ತುರಾಯಿ ಮತ್ತು ಶಂಖ, ಚಕ್ರ ಗಳ ಸಮರ್ಪಣೆಯನ್ನು ಊರ, ಪರವೂರ ಗಣ್ಯಾತಿ ಗಣ್ಯರು, ಅತಿಥಿ ಅಭ್ಯಾಂಗತರ ಜೊತೆಯಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿ ಸ್ವೀಕರಿಸುವ ಹತ್ತು ಸಾಧಕರ ಜೊತೆಗೂಡಿ ವೈಭವದ ಶೋಭಾಯಾತ್ರೆಯಲ್ಲಿ ಚೆಂಡೆ, ಪಂಚವಾಧ್ಯ, ಮಂಗಳೂರಿನ ಬ್ಯಾಂಡ್ ವಾದನ, ಯಕ್ಷಗಾನ ವೇಷಧಾರಿಗಳೊಂದಿಗೆ ಸುಮಂಗಲೆಯರು ಪೂರ್ಣ ಕುಂಭ ಕಳಸದೊಂದಿಗೆ ಸಭಾಂಗಣದ ವೇದಿಕೆಗೆ ಮೆರವಣಿಗೆಯಲ್ಲಿ ತರಲಾಯಿತು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮನೋತ್ಸವದ ಸಂಭ್ರಮದಲ್ಲಿ ಯು.ಎ.ಇ.ಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘಟಕರು ಸರ್ವೋತ್ತಮ ಶೆಟ್ಟಿ, ಕಲಾಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಸಮಾಜಸೇವೆಯಲ್ಲಿ ಬಾಲಕೃಷ್ಣ ಸಾಲಿಯಾನ್, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಬಿ. ಕೆ. ಗಣೇಶ್ ರೈ, ನಾಟಕ ಕ್ಷೇತ್ರದಲ್ಲಿ ಡೋನಿ ಕೊರೆಯಾ, ಭರತನಾಟ್ಯದಲ್ಲಿ ಶ್ರೀಮತಿ ರೂಪಾ ಕಿರಣ್,ಉದ್ಯಮ ಕ್ಷೇತ್ರದಲ್ಲಿ ಪುತ್ತಿಗೆ ವಾಸುದೇವ ಭಟ್


ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ ಕನ್ನಡ ಪಾಠಶಾಲೆ, ವಿದೇಶದ ನೆಲದಲ್ಲಿ ಭಜನಾ ಸೇವೆಯಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ತಂಡ ಯು.ಎ.ಇ. ಮತ್ತು ಯು.ಎ.ಇ.ಯಲ್ಲಿ ಸಂಸ್ಕೃತಿ ಸೇವೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ಊರಿನಿಂದ ಬಂದಿರುವ ಮಹಿಳಾ ಭಾಗವತರು ಶ್ರೀಮತಿ ಕಾವ್ಯಶ್ರೀ ಅಜೇರು, ಭಾಗವತರಾದ ದೇವಿಪ್ರಸಾದ ಆಳ್ವ ತಲಪಾಡಿ ಶ್ರೀ ದೇವಿ ಪಾತ್ರಧಾರಿ ಅರುಣ್ ಕೋಟ್ಯಾನ್, ಚೆಂಡೆ ಮದ್ದಳೆ ವಾದಕರಾದ ಚಂದ್ರಶೇಖರ್ ಸರಪಾಡಿ,ಕಾರ್ಯಕ್ರಮ ನಿರೂಪಕರಾದ ಚೇತನ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.

ನಿರ್ದೇಶಕರು ಹಾಗೂ ಮುಖ್ಯ ಗುರುಗಳು ಶೇಖರ್ ಶೆಟ್ಟಿಗಾರ್ ಮತ್ತು ನಾಟ್ಯಗುರುಗಳು ಶರತ್ ಕುಡ್ಲ ಇವರುಗಳನ್ನು ಸಹ ಗಣ್ಯಾತಿ ಗಣ್ಯರು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಾರ್ಯಕ್ರಮದ ಮಹಾ ಪೋಷಕರಾದ ಭೀಮಾ ಜ್ಯುವೆಲ್ಲರಿಯ ನಾಗರಾಜ ರಾವ್,ಟ್ಯಾಕ್ ಕನ್ಸ್ಟ್ರಕ್ಷನ್ ನ ಪ್ರವೀಣ್ ಅಮರನಾಥ್,365 ಸಂಸ್ಥೆಯ ರಮಾನಂದ ಶೆಟ್ಟಿ,ಅಲ್ ಫರ್ದಾನ್ ಏಕ್ಸೈಂಜ್ ನ ಆತ್ಮಾನಂದ ರೈ, ತಾರಾನಾಥ ರೈ, ಸಂತೋಷ್ ಶೆಟ್ಟಿ ಕಾಪು, ಕಿಶೋರ್ ಕುಮಾರ್,ವಿ ಟೂ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶಿವ ಶಂಕರ ನೆಕ್ರಾಜೆ, ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ,ಪ್ರೇಮ್ ನಾಥ ಶೆಟ್ಟಿ, ಜಯರಾಮ ರೈ ಮಿತ್ರಂಪಾಡಿ, ಅಶೋಕ್ ರೈ ದುಬೈ, ತುಳು ಚಿತ್ರರಂಗದ ನಾಯಕ ನಟ ವಿನೀತ್, ಖ್ಯಾತ ಯೂಟ್ಯೂಬರ್ ಸಚಿನ್ ಶೆಟ್ಟಿ, ಕಲಾ ಪೋಷಕರಾದ ಜೇಮ್ಸ್ ಮೆಂಡೋನ್ಸ, ರಘುರಾಮ ಶೆಟ್ಟಿಗಾರ್,ಹರೀಶ್ ಬಂಗೇರ,ವರದರಾಜ್ ಶೆಟ್ಟಿಗಾರ್,ಮಲ್ಲಿಕಾರ್ಜುನ ಗೌಡ,ಮನೋಹರ ಹೆಗ್ಡೆ, ನಿಹಾಲ್ ಸುಂದರ ಶೆಟ್ಟಿ ಅಬುಧಾಬಿ ಮುಂತಾದವರು ಉಪಸ್ಥಿತರಿದ್ದರು.
ವರದಿ :ವಿಜಯಕುಮಾರ್ ಗಾಣದ ಮೂಲೆ ದುಬೈ, ಹಾಗೂ ಬಿ.ಕೆ ಗಣೇಶ್ ರೈ.ದುಬೈ

