ಇಂಗ್ಲೆಂಡ್ :ಶನಿವಾರ ಇಂಗ್ಲೆಂಡಿನ ವೋರ್ಸೆಸ್ಟರ್ನಲ್ಲಿ ನಡೆದ ಭಾರತ VS ಇಂಗ್ಲೆಂಡ್ ಅಂಡರ್ 19 ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ 14 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಮೂಲಕ ಭರ್ಜರಿ ಶತಕ ಸಿಡಿಸಿ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದರು
.ವೈಭವ್ 52 ಎಸೆತಗಳನ್ನು ಎದುರಿಸಿ 7 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ ಆಕರ್ಷಕ ಶತಕ ಬಾರಿಸಿದರು. ಇದು ಅಂಡರ್19 ಏಕದಿನ ಪಂದ್ಯಗಳ ಇತಿಹಾಸದಲ್ಲಿ ದಾಖಲಾದ ಅತ್ಯಂತ ವೇಗದ ಶತಕವಾಗಿದೆ.ವೈಭವ್ ಅಂತಿಮವಾಗಿ 78 ಎಸೆತಗಳಲ್ಲಿ 13 ಬೌಂಡರಿ ಮತ್ತು 10 ಸಿಕ್ಸರ್ಗಳನ್ನು ಬಾರಿಸಿ 143 ರನ್ನುಗಳನ್ನು ಗಳಿಸಿ ತಂಡವನ್ನು 363-9 ರನ್ಗಳ ಬೃಹತ್ ಮೊತ್ತಕ್ಕೆ ಬಲಪಡಿಸಿದರು.

ಈ ಭರ್ಜರಿ ಶತಕದ ನೆರವಿನೊಂದಿಗೆ ಭಾರತ ಅಂಡರ್ 19 ತಂಡ 50 ಓವರ್ಗಳಲ್ಲಿ 363 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ U-19 ತಂಡವು 308 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ-U19 ತಂಡವು 55 ರನ್ಗಳ ಭರ್ಜರಿ ಜಯ ಸಾಧಿಸಿದೆ.
2013 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಕಮ್ರಾನ್ ಗುಲಾಮ್ 53 ಎಸೆತಗಳಲ್ಲಿ ಶತಕ ಬಾರಿಸಿದ್ದು, ಇದುವರೆಗಿನ U-19 ಏಕದಿನ ಪಂದ್ಯಗಳಲ್ಲಿ ಅತಿ ವೇಗದ ಶತಕವಾಗಿತ್ತು

ಅದಲ್ಲದೆ ವೈಭವ್ ಸೂರ್ಯವಂಶಿ ಏಪ್ರಿಲ್ನಲ್ಲಿ ನಡೆದ ಐಪಿಎಲ್ನಲ್ಲಿ T-20ಯಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಿ ಕೇವಲ 35 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು

