ಲಕ್ನೋ: ಹಾಲು ವಿತರಣೆ ಮಾಡುವ ಮೊದಲು ಹಾಲಿಗೆ ಉಗುಳಿದ ಆರೋಪದ ಮೇಲೆ ಲಕ್ನೋದಲ್ಲಿ ಭಾನುವಾರ ಹಾಲು ವ್ಯಾಪಾರಿಯನ್ನು ಬಂಧಿಸಲಾಗಿದೆ. ಗ್ರಾಹಕರೊಬ್ಬರು ತಮ್ಮ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಘಟನೆಯನ್ನು ನೋಡಿ ದೂರು ದಾಖಲಿಸಿದ್ದಾರೆ
ಲಕ್ನೋದ ಗೋಮತಿ ನಗರದ ನಿವಾಸಿಯಾದ ಶುಕ್ಲಾ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾಗ ಪಪ್ಪುಆಲಿಯಾಸ್ ಮೊಹಮ್ಮದ್ ಷರೀಫ್ ಹಾಲಿದ್ದ ಪಾತ್ರೆಗೆ ಉಗುಳುವುದನ್ನು ನೋಡಿ ದಿಗ್ಭ್ರಮೆಗೊಂಡರು.ಅವರು ಪಪ್ಪು ಅಲಿಯಾಸ್ ಷರೀಫ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಪೊಲೀಸರಿಗೆ ಸಲ್ಲಿಸಿದ್ದಾರೆ.ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯ ದ್ರಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಆತನನ್ನು ಪ್ರಶ್ನಿಸಲಾಗುತ್ತಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಬ್ರಿಜೇಶ್ ತಿವಾರಿ ತಿಳಿಸಿದ್ದಾರೆ.ಪಪ್ಪು ನಗರದ ಹಲವಾರು ಮನೆಗಳಿಗೆ ಹಾಲು ತಲುಪಿಸುತ್ತಾನೆ ಎಂದು ಶುಕ್ಲಾ ಹೇಳಿದರು. “ಪಪ್ಪು ಪೂರೈಸುವ ಹಾಲನ್ನು ಮಕ್ಕಳು ಮತ್ತು ವೃದ್ಧರು ಸಹ ಸೇವಿಸುತ್ತಾರೆ. ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೂ ಇದನ್ನು ಅರ್ಪಿಸಲಾಗುತ್ತದೆ. ಪಪ್ಪು ಅಸಹ್ಯಕರ ಅಪರಾಧ ಮಾಡಿದ್ದಾನೆ” ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ನಲ್ಲಿ ಸಹರಾನ್ಪುರದಲ್ಲಿ ಹದಿಹರೆಯದ ವ್ಯಕ್ತಿಯೊಬ್ಬ ಉಪಾಹಾರ ಗೃಹದಲ್ಲಿ ರೊಟ್ಟಿಗಳ ಮೇಲೆ ಉಗುಳುತ್ತಿದ್ದ ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಅಂಗಡಿ ಮಾಲೀಕರ ಬಂಧನಕ್ಕೂ ಕಾರಣವಾಯಿತು.
ಗಾಜಿಯಾಬಾದ್ ಮತ್ತು ನೋಯ್ಡಾದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ, ಜ್ಯೂಸ್ ಮಾರಾಟಗಾರರನ್ನು ಪಾನೀಯಗಳಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಬಡಿಸಿದ ಆರೋಪದ ಮೇಲೆ ಬಂಧಿಸಲಾಯಿತು.

