ಮಂಗಳೂರು : ಮಂಗಳೂರಿನ ಭಗವತಿ ನಗರ ಕೋಡಿಯಾಲ್ ಬೈಲ್ ನಲ್ಲಿರುವ ಮಹಾಲಸಾ ಶಿಕ್ಷಣ ಸಮಿತಿಯ 2024-25 ನೇ ಸಾಲಿನ ವಾರ್ಷಿಕ ಕಲಾಪ್ರದರ್ಶನ ಮತ್ತು ವಾರ್ಷಿಕೋತ್ಸವ ” ರೂಪಾಂತರ “ಎಂಬ ಶೀರ್ಷಿಕೆಯಡಿಯಲ್ಲಿ ಜುಲೈ 10 ರಿಂದ 12 ರವರೆಗೆ 3 ದಿನಗಳ ಕಾಲ ನಡೆಯಲಿದೆ ಎಂದು ಸಂಸ್ಥೆಯ ಚಿತ್ರಕಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಎನ್.ಎಸ್ ಪತ್ತಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ 1978 ರಲ್ಲಿ ಪ್ರಾರಂಭವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಏಕೈಕ ಶಿಕ್ಷಣ ಸಂಸ್ಥೆ ಇದಾಗಿದ್ದು, ಕಳೆದ 47 ವರ್ಷಗಳಿಂದ ಬಿ.ವಿ.ಎ ದೃಶ್ಯಕಲಾ ಪದವಿಗಳನ್ನು ನೀಡುತ್ತಾ ಬಂದಿದೆ. ಹಾಗೂ ಕಲಾಕ್ಷೇತ್ರಕ್ಕೆ ಅವಿರತ ಸೇವೆ ಸಲ್ಲಿಸುತ್ತಿದೆ ಎಂದು ಎನ್.ಎಸ್ ಪತ್ತಾರ್ ಅವರು ತಿಳಿಸಿದರು.

ದಿನಾಂಕ 10 ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ 10:30 ಕ್ಕೆ ನಡೆಯಲಿದ್ದು ಉದ್ಘಾಟನೆಯನ್ನು ಶ್ರೀ ತಾರನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.ನೆರವೇರಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ
ಡಾ.ಕವಿತಾ.ಕೆ.ಆರ್ ಜಂಟಿ ನಿರ್ದೇಶಕರು,ಕಾಲೇಜು ಶಿಕ್ಷಣ ಇಲಾಖೆ,ಮಂಗಳೂರು.ಸಾಧಕ ವಿದ್ಯಾರ್ಥಿಗಳ ಪುಸ್ತಕ ಮತ್ತು ಪೋರ್ಟ್ ಫೋಲಿಯೋ ಬಿಡುಗಡೆ ಮಾಡಲಿದ್ದಾರೆ.ಹಾಗೂ ಶ್ರೀ.ವಿವೇಕ್ ಬೋಳಾರ್ ಸಿ.ಇ.ಒ, ಎಯುಎಮ್ ಆನಿಮೇಶನ್ ಸ್ಟುಡಿಯೋ, ಮಂಗಳೂರು,ಕಾರ್ಯಗಾರ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಬಾಬುರಾವ್,ಶ್ರೀ ಮಹಾಲಸಾ ಶಿಕ್ಷಣ ಸಮಿತಿ(ರಿ.) ಮಂಗಳೂರು ಇವರು ವಹಿಸಲಿದ್ದಾರೆ.

ಅಂದು ಶಾಲಾ ವಿದ್ಯಾರ್ಥಿಗಳು ರಚಿಸಿದ ಸುಮಾರು 400 ಕ್ಕೂ ಹೆಚ್ಚು ವಿವಿಧ ಪ್ರಕಾರದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಅವುಗಳೆಂದರೆ ರೇಖಾಚಿತ್ರ, ಸ್ಥಿರಚಿತ್ರಣ, 2ಡಿ ವಿನ್ಯಾಸ, ನಿಸರ್ಗಚಿತ್ರ, ಸೃಜನಶೀಲ ವರ್ಣಚಿತ್ರಗಳು, ಅಮೂರ್ತ ಕಲೆ, ಭಾವಚಿತ್ರ, ಸಾಂಪ್ರದಾಯಿಕ ಕಲಾಕೃತಿಗಳಾದ ಕಿನ್ನಾಳ ಕಲೆ, ಪಟಚಿತ್ರ, ಕಲಂಕಾರಿ, ತಂಜಾವೂರು ಮತ್ತು ಮಂಡಲ ಚಿತ್ರಗಳು, ಜಾಹೀರಾತು ಕಲೆ, ಸಾಂದರ್ಭಿಕ ಚಿತ್ರಗಳು ಹಾಗೂ ಡಿಜಿಟಲ್ ಕಲಾಕೃತಿಗಳು ಮುಂತಾದವುಗಳು,ಅಲ್ಲದೆ
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಅಪರಾಹ್ನ 2 ಗಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.ಅಲ್ಲದೆ ಕಲಾಪ್ರದರ್ಶನವು ದಿನಾಂಕ 10 ರಿಂದ 12-7-2025 ವರೆಗೆ 3 ದಿನಗಳ ಕಾಲ ನಡೆಯಲಿದ್ದು ಸಾರ್ವಜನಿಕ ವೀಕ್ಷಣೆ ಮುಕ್ತವಾಗಿರುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಆಸಿಫ್ ಅಲಿ, ನಾಗರಾಜು, ಶ್ರೀ ಮೋಹನ್ ಕುಮಾರ್ ಬಿ.ಪಿ ಮೊದಲಾದವರು ಉಪಸ್ಥಿತರಿದ್ದರು.

