ಸನಾ: ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕೇರಳದ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ಶಿಕ್ಷೆಯನ್ನು ಈ ತಿಂಗಳ 16 ರಂದು ಜಾರಿಗೊಳಿಸಲಾಗಿದೆ. ಈ ಸಂಬಂಧ ಜೈಲು ಅಧಿಕಾರಿಗಳಿಗೆ ಸಾರ್ವಜನಿಕ ಅಭಿಯೋಜಕರಿಂದ ಆದೇಶ ಬಂದಿದೆ.ಈ ಮಧ್ಯೆ ಯೆಮೆನ್ ಮಾನವ ಹಕ್ಕುಗಳ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಮಾತನಾಡಿ,ಕ್ಷಮಾ ಧನ (Blood money)ಪಾವತಿಸುವ ಮೂಲಕ ಮರಣದಂಡನೆಯನ್ನು ತಪ್ಪಿಸಲು ಪ್ರಯತ್ನಗಳು ಮುಂದುವರೆದಿವೆ ಎಂದಿದ್ದಾರೆ.

ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಜುಲೈ16ರಂದು ನಿಮಿಷಾಪ್ರಿಯಾ ಅವರನ್ನು ಗಲ್ಲಿಗೇರಿಸಲು ಆದೇಶಿಸಿದ್ದಾರೆ ನಿಮಿಷಾಪ್ರಿಯಾ ಅವರನ್ನು ಬಂಧಿಸಲಾಗಿರುವ ಸನಾದಲ್ಲಿರುವ ಜೈಲು ಅಧಿಕಾರಿಗಳಿಗೆ ಸರ್ಕಾರಿ ಅಭಿಯೋಜಕರು ಮರಣದಂಡನೆಗೆ ಆದೇಶಿಸುವ ಪತ್ರ ತಲುಪಿದ್ದಾರೆ ಎಂದು ವರದಿಯಾಗಿದೆ.
ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಹತ್ಯೆ ಪ್ರಕರಣದಲ್ಲಿ 2017 ರಿಂದ ಜೈಲಿನಲ್ಲಿರುವ ನಿಮಿಷಪ್ರಿಯಾ ಅವರ ಬಿಡುಗಡೆಗಾಗಿನ ಪ್ರಯತ್ನಗಳಿಗೆ ಇದು ಅಡ್ಡಿಯಾಗಿದೆ, ಯೆಮೆನ್ ಮಾನವ ಹಕ್ಕುಗಳ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಬ್ಲಡ್ ಮನಿ ಪಾವತಿಸುವ ಮೂಲಕ ಮರಣದಂಡನೆಯನ್ನು ತಪ್ಪಿಸಲು ಪ್ರಯತ್ನಗಳು ಮುಂದುವರೆದಿವೆ ಯೆಮೆನ್ ಕಾನೂನಿನ ಪ್ರಕಾರ,ತಲಾಲ್ ಮೆಹ್ದಿ ಕುಟುಂಬವು ಒಪ್ಪಿದರೆ ದಯಾ ಅಥವಾ ರಕ್ತದ ಹಣವನ್ನು ಪಾವತಿಸುವ ಮೂಲಕ ಮರಣದಂಡನೆಯನ್ನು ತಪ್ಪಿಸಬಹುದು ಎಂದು ಹೇಳಿದರು.

ಮ್ರತ ಯೆಮೆನ್ ಪ್ರಜೆಯ ಕುಟುಂಬಕ್ಕೆ $1 ಮಿಲಿಯನ್ ನೀಡಲಾಗುವುದು (ಸುಮಾರು 8.57 ಕೋಟಿ) ಎಂದು ತಿಳಿಸಲಾಗಿದೆ. ಈ ಹಿಂದೆಯೂ ಕುಟುಂಬಕ್ಕೆ ಇದೇ ರೀತಿಯ ಪ್ರಸ್ತಾಪವನ್ನು ನೀಡಲಾಗಿತ್ತು. ಆದರೆ ಕೊಲೆಯಾದ ತಲಾಲ್ ಅಬ್ದೋ ಮೆಹ್ದಿಯ ಕುಟುಂಬದ ಕೆಲವು ಸದಸ್ಯರು ಕ್ಷಮಾದಾನವನ್ನು ಒಪ್ಪುವುದಿಲ್ಲ ಎಂದು ವರದಿಯಾಗಿದೆ.ಕುಟುಂಬದ ಎಲ್ಲಾ ಸದಸ್ಯರು ಕ್ಷಮಿಸಲು ಸಿದ್ಧರಿದ್ದರೆ ಮಾತ್ರ ಬಿಡುಗಡೆ ಸಾಧ್ಯ.
ನಿಮಿಷಾ ಪ್ರಿಯಾ ಯಾರು? ಯಾಕೆ ಕೊಲೆ ಮಾಡಿದಳು

ಭಾರತದಲ್ಲಿ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ನಂತರ ನಿಮಿಷಾಪ್ರಿಯಾ 2011ರಲ್ಲಿ ಯೆಮೆನ್ಗೆ ಆಗಮಿಸಿ ಅವರ ಪತಿ ಖಾಸಗಿ ಕಂಪನಿಯಲ್ಲಿ ವೆಲ್ಡರ್ ಮತ್ತು ನಿಮಿಷಾಪ್ರಿಯಾ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಅವರಿಗೆ ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹ್ದಿ ಅವರ ಪರಿಚಯವಾಯಿತು. ನಂತರ ಪ್ರಿಯಾ ಮತ್ತು ಮಹ್ದಿ ಇಬ್ಬರೂ ಪಾಲುದಾರಿಕೆಯಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು.ಯೆಮೆನ್ ದೇಶದ ಕಾನೂನಿನ ಪ್ರಕಾರ ಯೆಮನ್ ಪ್ರಜೆಯ ಪ್ರಾಯೋಜಕತ್ವ ಯಿಲ್ಲದೆ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಾಧ್ಯವಿಲ್ಲದ ಕಾರಣ ಅವರು ಮಹ್ದಿಯ ಸಹಾಯವನ್ನು ಕೋರಿದರು. ವ್ಯವಹಾರವನ್ನು ಪ್ರಾರಂಭಿಸಲು ನಿಮಿಷಾ ಮತ್ತು ಅವರ ಪತಿ ತಮ್ಮ ಎಲ್ಲಾ ಉಳಿತಾಯವನ್ನು ಮಹ್ದಿಗೆ ವರ್ಗಾಯಿಸಿದ್ದರು. ವ್ಯವಹಾರಕ್ಕೆ ಹೆಚ್ಚಿನ ಹಣದ ಅಗತ್ಯವಿರುವುದರಿಂದ ನಿಮಿಷಾ ಮತ್ತು ಅವರ ಪತಿ ಟಾಮಿ ಥಾಮಸ್ ತಮ್ಮ ಮಗಳು ಮಿಚೆಲ್ ಜೊತೆ ಭಾರತಕ್ಕೆ ವಾಪಸು ಬಂದರು.ನಂತರ ನಿಮಿಷಾ ಮಾತ್ರ ತನ್ನ ತಾಯ್ನಾಡಿನಿಂದ ಯೆಮೆನ್ಗೆ ಮರಳಿದರು.

ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಮತ್ತು ಮಹ್ದಿ ಮೋಸ ಮಾಡುವುದಿಲ್ಲ ಎಂದು ಅವರು ನಂಬಿದ್ದರು. ನಿಮಿಷಾ ತೆರಳಿದ ನಂತರ ಪತಿ ಟಾಮಿ ಥಾಮಸ್ ಯೆಮೆನ್ಗೆ ಮರಳಲು ಉದ್ದೇಶಿಸಿದ್ದರು ಆದರೆ ಯೆಮನ್ ಮತ್ತು ಸೌದಿ ನಡುವೆ ತೀವ್ರಗೊಳ್ಳುತ್ತಿರುವ ಆಂತರಿಕ ಸಂಘರ್ಷದಿಂದಾಗಿ ಯೆಮನ್ಗೆ ಅವರ ಹಿಂದಿರುಗುವ ಪ್ರಯಾಣವು ಅಡ್ಡಿಪಡಿಸಲ್ಪಟ್ಟಿತು.ಆದರೆ ನಿಮಿಷಾ ಪ್ರಿಯಾ ಅಲ್ಲಿಯೇ ಉಳಿದು ಯೆಮೆನ್ ಪ್ರಜೆ ತಲಾಲ್ ಅಬ್ದು ಮೆಹದಿ ಅವರೊಂದಿಗೆ 2014 ರಲ್ಲಿ ಪಾಲುದಾರಿಕೆ ಮಾಡಿಕೊಂಡು ಕ್ಲಿನಿಕ್ ಅನ್ನು ಪ್ರಾರಂಭಿಸಿದರು

ಆರಂಭದಲ್ಲಿ ವ್ಯವಹಾರ ಪಾಲುದಾರಳಾಗಿ ಅವಳನ್ನು ಗೌರವದಿಂದ ನಡೆಸಿಕೊಂಡ ಮಹ್ದಿ, ನಂತರ ಅನಿರೀಕ್ಷಿತ ರೀತಿಯಲ್ಲಿ ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡನು.ಅವಳನ್ನು ತನ್ನ ಹೆಂಡತಿ ಎಂದು ಅನೇಕ ಜನರನ್ನು ನಂಬಿಸಿದನು.ಮತ್ತು ನಕಲಿ ವಿವಾಹ ಪ್ರಮಾಣಪತ್ರವನ್ನು ಮಾಡಿ ಅವಳನ್ನು ಬೆದರಿಸಿ ಧಾರ್ಮಿಕ ಪದ್ಧತಿಗಳ ಪ್ರಕಾರ ಮದುವೆ ಮಾಡಿದನು.ಇಬ್ಬರೂ ಒಟ್ಟಿಗೆ ಪ್ರಾರಂಭಿಸಿದ ಕ್ಲಿನಿಕ್ನಿಂದ ಎಲ್ಲಾ ಆದಾಯವನ್ನು ತೆಗೆದುಕೊಂಡನು.ಅವಳ ಚಿನ್ನವನ್ನು ತೆಗೆದುಕೊಂಡು ಅದನ್ನು ಮಾರಾಟ ಮಾಡಿದನು.

ನಂತರ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಪಾಲುದಾರಿಕೆ ಕೊನೆಗೊಂಡಿತು,ಮತ್ತೆ ಪ್ರಿಯಾ 2015 ರಲ್ಲಿ ಪುನಃ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಿದಳು, ಆದರೆ ತಲಾಲ್ ಮಹ್ದಿ ಅವಳಿಗೆ ಬೆದರಿಕೆ ಹಾಕಿದನು ಆದಾಯದಲ್ಲಿ ಅರ್ಧದಷ್ಟು ಪಾಲು ತನಗೆ ನೀಡಬೇಕು ಅಲ್ಲದೆ ಮಾದಕದ್ರವ್ಯ ವ್ಯಾಸನಿಯಾಗಿದ್ದ ಆತ ಕ್ರೂರ ಹಿಂಸೆಯನ್ನು ನೀಡಲು ಪ್ರಾರಂಭಿಸಿದನು. ತನ್ನ ಸ್ನೇಹಿತರೊಂದಿಗೆ ರಾತ್ರಿ ಕಳೆಯಲು ಪೀಡಿಸುತ್ತಿದ್ದ
ಯೆಮೆನ್ನಿಂದ ಹೊರ ಹೋಗದಂತೆ ತಡೆಯಲು ತಲಾಲ್ ಮಹ್ದಿ ಆಕೆಯ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡನು ಇದು 2016 ರಲ್ಲಿ ಅವನ ಬಂಧನಕ್ಕೆ ಕಾರಣವಾಯಿತು.ಬಿಡುಗಡೆಯಾದ ನಂತರ ತಲಾಲ್ ಮಹ್ದಿ ಪ್ರಿಯಾಗೆ ತೊಂದರೆ ನೀಡುತ್ತಲೇ ಇದ್ದನು.2017 ರಲ್ಲಿ ಮಹ್ದಿಯಿಂದ ತನ್ನ ಪಾಸ್ಪೋರ್ಟ್ ಪಡೆದು ತಪ್ಪಿಸಿಕೊಳ್ಳಲು ಪ್ರಿಯಾ ಆತನಿಗೆ ನಿದ್ರಾಜನಕ ಮಾದಕ ಚುಚ್ಚುಮದ್ದು ನೀಡಿದ್ದಳು,ಇದು ಮಿತಿಮೀರಿದ ಕಾರಣ ಅವನ ಸಾವಿಗೆ ಕಾರಣವಾಯಿತು.

ಪ್ರಿಯಾ ತನ್ನ ಸಹೋದ್ಯೋಗಿ ಯೆಮೆನ್ ಪ್ರಜೆ ಹನಾನ್ ಜೊತೆಗೂಡಿ ಮಹ್ದಿಯ ದೇಹವನ್ನು ತುಂಡರಿಸಿ ನೀರಿನ ಟ್ಯಾಂಕ್ನಲ್ಲಿ ವಿಲೇವಾರಿ ಮಾಡಿದರು,ಕೆಟ್ಟ ವಾಸನೆ ಬರುತ್ತಿದ್ದಂತೆ ಹತ್ತಿರದ ಜನ ಪೋಲಿಸರಿಗೆ ಮಾಹಿತಿ ನೀಡಿದರು.ಆದರೆ ಆಕೆಯ ಬಳಿ ಭಾರತಕ್ಕೆ ಮರಳಲು ಪಾಸ್ ಪೋರ್ಟ್ ಇಲ್ಲದ ಕಾರಣ ಆಕೆ ಈ ಮಧ್ಯೆ 200 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು.ತಲಾಲ್ ಕಾಣೆಯಾಗಿದ್ದಾನೆ ಎಂಬ ಮನೆಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಮಿಷಪ್ರಿಯಾ ಅವರ ಫೋಟೋವನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಿದರು. ಇದರೊಂದಿಗೆ ಆಸ್ಪತ್ರೆ ಅಧಿಕಾರಿಗಳು ನಿಮಿಷಪ್ರಿಯಾ ಅವರನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಹೀಗಾಗಿ, ಆಗಸ್ಟ್ 2017 ರಲ್ಲಿ ನಿಮಿಷಪ್ರಿಯಾ ಮತ್ತು ಆಕೆಯ ಸ್ನೇಹಿತೆ ಯೆಮನ್ ಪ್ರಜೆ ಹನಾನ್ ಅವರನ್ನು ಬಂಧಿಸಲಾಯಿತು. 2020ರಲ್ಲಿ ವಿಚಾರಣಾ ನ್ಯಾಯಾಲಯವು ನಿಮಿಷಾಪ್ರಿಯಾಗೆ ಮರಣದಂಡನೆ ಮತ್ತು ಹನಾನ್ಗೆ ಜೀವಾವಧಿ ಶಿಕ್ಷೆ ವಿಧಿಸಿತು.

