ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಟಿ -20 ವಿಶ್ವಕಪ್ ಮುಂಬರುವ ಫೆಬ್ರವರಿ – ಮಾರ್ಚ್ ತಿಂಗಳವರೆಗೆ ನಡೆಯಲಿದ್ದು 2026ರ ಅರ್ಹತಾ ಸುತ್ತಿಗೆ ಈಗಾಗಲೇ 15 ತಂಡಗಳು ತಲುಪಿದೆ.

ಯುರೋಪ್ ಅರ್ಹತಾ ಸುತ್ತಿನ ಪಂದ್ಯಗಳಿಂದ ಮುನ್ನಡೆಯುವ ಎರಡು ತಂಡಗಳಾಗಿ ನೆದರ್ಲ್ಯಾಂಡ್ಸ್ ಜೊತೆ ಇಟಲಿ ಸೇರಿಕೊಂಡಿದ್ದು, ಇಟಲಿ ತನ್ನ ಮೊದಲ ಐಸಿಸಿ ಪುರುಷರ ಟಿ 20 ವಿಶ್ವಕಪ್ಗೆ ಐತಿಹಾಸಿಕ ಅರ್ಹತೆಯನ್ನು ಪಡೆದುಕೊಂಡಿದೆ.ಇಟಲಿ ಅರ್ಹತೆಯನ್ನು ದೃಢಪಡಿಸಿದ 14 ನೇ ರಾಷ್ಟ್ರ ಮತ್ತು ನೆದರ್ಲ್ಯಾಂಡ್ಸ್ 15 ನೇ ರಾಷ್ಟ್ರವಾಗಿದೆ.

2026 ರಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಆತಿಥೇಯ ಭಾರತ ಮತ್ತು ಶ್ರೀಲಂಕಾ ಸೇರಿದಂತೆ 20 ತಂಡಗಳು ಭಾಗವಹಿಸಲಿವೆ.ಈಗ ಹದಿನೈದು ತಂಡಗಳು 2026 ರ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದು, ಇನ್ನೂ ಐದು ಸ್ಥಾನಗಳು ಉಳಿದಿವೆ – ಏಷ್ಯಾ-ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಸುತ್ತಿನಿಂದ ಮೂರು ಮತ್ತು ಆಫ್ರಿಕಾದಿಂದ ಎರಡು ತಂಡಗಳು.

T20 ವಿಶ್ವಕಪ್ಗೆ ಅರ್ಹತೆ ಪಡೆದ ತಂಡಗಳು.
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಇಟಲಿ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಸ್ಎ, ವೆಸ್ಟ್ ಇಂಡೀಸ್.

