ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕೆಎಲ್ ರಾಹುಲ್ ತಮ್ಮ 10ನೇ ಟೆಸ್ಟ್ ಶತಕವನ್ನು ದಾಖಲಿಸಿದರು.
ಇದು ರಾಹುಲ್ ಅವರ ಲಾರ್ಡ್ಸ್ನಲ್ಲಿ ಎರಡನೇ ಶತಕವಾಗಿದೆ. ದಿಲೀಪ್ ವೆಂಗ್ಸರ್ಕಾರ್ ನಂತರ ಅತಿ ಹೆಚ್ಚು ಲಾರ್ಡ್ಸ್ನಲ್ಲಿ ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್ಮನ್ ಅವರು.

ರಾಹುಲ್ ಮತ್ತು ವೆಂಗ್ಸರ್ಕಾರ್ ಸೇರಿದಂತೆ ಒಟ್ಟಾರೆಯಾಗಿ 10 ಭಾರತೀಯರು ಲಾರ್ಡ್ಸ್ನಲ್ಲಿ ಗೌರವ ಮಂಡಳಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೆಂಗ್ಸರ್ಕಾರ್ ಲಾರ್ಡ್ಸ್ನಲ್ಲಿ 3 ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಆಗಿದ್ದಾರೆ ಅವರು 1979 ರಲ್ಲಿ 295 ಎಸೆತಗಳಲ್ಲಿ 103 ರನ್, 1982 ರಲ್ಲಿ 264 ಎಸೆತಗಳಲ್ಲಿ 157 ರನ್ ಮತ್ತು 1986 ರಲ್ಲಿ 213 ಎಸೆತಗಳಲ್ಲಿ ಅಜೇಯ 126 ರನ್ ಗಳಿಸಿದರು.

2021 ರಲ್ಲಿ ಲಾರ್ಡ್ಸ್ನಲ್ಲಿ ರಾಹುಲ್ ಅವರ ಮೊದಲ ಶತಕ ದಾಖಲಾಗಿತ್ತು, ಆಗ ಭಾರತದ 151 ರನ್ಗಳ ಗೆಲುವಿನಲ್ಲಿ ಅವರು 129 ರನ್ ಗಳಿಸಿದ್ದರು.
ಊಟದ ವಿರಾಮದ ವೇಳೆಗೆ 98 ರನ್ಗಳೊಂದಿಗೆ ಅಜೇಯರಾಗಿ ಉಳಿದ ರಾಹುಲ್ ವಿರಾಮದ ನಂತರದ ಎರಡನೇ ಓವರ್ನಲ್ಲಿ ಜೋಫ್ರಾ ಆರ್ಚರ್ ಅವರ ಲೆಂಗ್ತ್ ಚೆಂಡನ್ನು ಮಿಡ್-ಆಫ್ ಹೊಡೆದು ಸಿಂಗಲ್ ಗಳಿಸಿ ಲಾರ್ಡ್ಸ್ನಲ್ಲಿ ತಮ್ಮ ಎರಡನೇ ಶತಕವನ್ನು ದಾಖಲಿಸಿದರು. ನಂತರ ಮುಂದಿನ ಓವರ್ ಶೋಯೆಬ್ ಬಶೀರ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಔಟಾದರು.ಇದೀಗ ಭಾರತ 101 ಓವರ್ ಗಳಲ್ಲಿ 6 ವಿಕೇಟ್ ಗಳನ್ನು ಕಳೆದುಕೊಂಡು 340 ಗಳಿಸಿ ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಆಟವಾಡುತ್ತಿದ್ದಾರೆ.

