ಮಂಗಳೂರು : ಯಕ್ಷಗಾನದ ಮೇರು ಕಲಾವಿದ ಪಾತಾಳ ವೆಂಕಟರಮಣ ಭಟ್ ಶನಿವಾರ ಹೃದಯಾಘಾತದಿಂದ ಉಪ್ಪಿನಂಗಡಿಯ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು
ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ವೇಷಧಾರಿಯಾಗಿ ಮನರಂಜಿಸಿದ್ದ ವೆಂಕಟರಮಣ ಭಟ್ಟರು.ಸುರತ್ಕಲ್ ಮೇಳ,ಮೂಲ್ಕಿ ಮೇಳ,ಸೌಕೂರು ಮೇಳ,ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ವೇಷ ಹಾಗೂ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇವರ ಪ್ರತಿಭೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ,ಕಲ್ಕೂರ ಪ್ರಶಸ್ತಿ, ಅಗರಿ ಪ್ರಶಸ್ತಿ ದೊರೆತಿವೆ.ಅಲ್ಲದೆ ಅನೇಕ ಸಂಘ,ಸಂಸ್ಥೆಗಳು ಅವರನ್ನು ಗೌರವಿಸಿವೆ.

