ರಿಯಾದ್ : ಇಪ್ಪತ್ತು ವರ್ಷಗಳಿಂದ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸೌದಿ ರಾಜಮನೆತನದ ಯುವ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತ್ವಲಾಲ್ ಅವರು ರಿಯಾದ್ನ ಕಿಂಗ್ ಅಬ್ದುಲಜೀಜ್ ಮೆಡಿಕಲ್ ಸಿಟಿಯಲ್ಲಿ ನಿಧನರಾದರು.ಅವರಿಗೆ 36 ವರ್ಷ ವಯಸ್ಸಾಗಿತ್ತು.

2005 ರಲ್ಲಿ ಕೇವಲ15 ವರ್ಷ ವಯಸ್ಸಿನವನಾಗಿದ್ದಾಗ ಲಂಡನಿನ ಯುನೈಟೆಡ್ ಕಿಂಗ್ಡಮ್ನ ಮಿಲಿಟರಿ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರಿಗೆ ತೀವ್ರವಾದ ಮೆದುಳಿಗೆ ಗಾಯಗಳು ಮತ್ತು ಅಂತರಿಕ ರಕ್ತಸ್ರಾವವಾಯಿತು ಇದರಿಂದಾಗಿ 15 ನೇ ವಯಸ್ಸಿನಲ್ಲಿ ರಿಯಾದ್ನ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ಕೋಮಾದಲ್ಲಿ ಕಳೆದರು.

ಕೋಮಾಕ್ಕೆ ಬಿದ್ದ ನಂತರ ಅವರು ಎಂದಿಗೂ ಜೀವನಕ್ಕೆ ಮರಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರು. ನಂತರ ಅವರನ್ನು ವೆಂಟಿಲೇಟರ್ನಿಂದ ತೆಗೆದುಹಾಕಲು ನಿರ್ಧರಿಸಿದರು, ಆದರೆ ಪ್ರಿನ್ಸ್ ಅಲ್ವಲೀದ್ ಅವರ ತಂದೆ ಅವರನ್ನು ತಡೆದರು.2019 ರಲ್ಲಿ ಅವರ ಬೆರಳುಗಳು ಚಲಿಸುತ್ತಿದ್ದವು.ಅವರ ತಲೆ ಕೂಡ ಸ್ವಲ್ಪ ಚಲಿಸುತ್ತಿತ್ತು ಅದರ ನಂತರ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ವಿಶ್ವ ಮಾಧ್ಯಮಗಳು ಪ್ರಿನ್ಸ್ ಅಲ್ವಲೀದ್ ಅವರನ್ನು ನಿದ್ರಿಸುತ್ತಿರುವ ರಾಜಕುಮಾರ (ಸ್ಲೀಪಿಂಗ್ ಪ್ರೀನ್ಸ್ )ಎಂದು ಬಣ್ಣಿಸಿದ್ದರು.

ಕಳೆದ ಏಪ್ರಿಲ್ನಲ್ಲಿ ಪ್ರಿನ್ಸ್ ಅಲ್ವಲೀದ್ ಅವರ ಹುಟ್ಟುಹಬ್ಬದಂದು ಪ್ರಜ್ಞೆ ಮರಳಿದರು ಎಂಬ ಸುಳ್ಳು ಸುದ್ದಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪ್ರಸಾರವಾಯಿತು. ಅವರು ಬಿಲಿಯನೇರ್ ರಾಜಕುಮಾರ ಖಾಲಿದ್ ಬಿನ್ ತಲಾಲ್ ಅವರ ಮಗ.ಅವರು ರಿಯಾದ್ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ನಗರದಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿದ್ದರು.

ರಾಜಕುಮಾರ ಅಲ್ವಲೀದ್ ಅವರ ಅಂತ್ಯಕ್ರಿಯೆ ರಿಯಾದ್ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ನಡೆಯಲಿದೆ. ಭಾನುವಾರದಿಂದ ಮಂಗಳವಾರದವರೆಗೆ ಮೂರು ದಿನಗಳ ಕಾಲ ಅಂತ್ಯಕ್ರಿಯೆಯ ಪ್ರಾರ್ಥನೆ ನಡೆಯಲಿದೆ.


