ಗುಜರಾತ್: ಪೊಲೀಸ್ ಅಧಿಕಾರಿಯ ಕತ್ತು ಹಿಸುಕಿ ಹತ್ಯೆ ಮಾಡಿದ ಸಿಆರ್ಪಿಎಫ್ ಜವಾನನೊಬ್ಬ ನಂತರ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಗುಜರಾತ್ನ ಕಚ್ ಜಿಲ್ಲೆಯಲ್ಲಿ ನಡೆದಿದೆ.

ಮಣಿಪುರ ಸಿಆರ್ಪಿಎಫ್ ಕಾನ್ ಸ್ಟೇಬಲ್ ದಿಲೀಪ್ ಡಾಂಚಿಯಾ ಮತ್ತು ಗುಜರಾತ್ನ ಕಚ್ಚಿಲ್ ಅಂಜರ್ ಪೊಲೀಸ್ ಠಾಣೆಯ ಎಎಸ್ಐ ಅರುಣಾಬೆನ್ ಜಾದವ್ (25) ಅವರು ಇನ್ಸ್ಟಾಗ್ರಾಮ್ ಮೂಲಕ ಪರಿಚಯಸ್ಥರಾಗಿದ್ದರು ನಂತರ ಲಿವಿಂಗ್ ಇನ್ ರಿಲೇಶನ್ಸ್ ಮೂಲಕ ಒಟ್ಟಿಗೆ ವಾಸಿಸುತ್ತಿದ್ದರು ದಿಲೀಪ್ ಮತ್ತು ಅರುಣಾ ದೀರ್ಘಾವಧಿಯ ಪರಿಚಯದಲ್ಲಿ ವಿವಾಹಿತರಾಗಲು ನಿರ್ಧರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ತಡ ರಾತ್ರಿ ಅರುಣಾ ಅವರ ಮನೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ದಿಲೀಪ್ನ ತಾಯಿಯ ಬಗ್ಗೆ ಅರುಣಾ ಬೆನ್ ಕೆಟ್ಟದಾಗಿ ಮಾತನಾಡಿದರು.ಇದರಿಂದ ಕೋಪಗೊಂಡ ದಿಲೀಪ್ ನಿಯಂತ್ರಣ ಕಳೆದುಕೊಂಡು ಅರುಣಾಬೆನ್ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.ಅಪರಾಧ ಎಸಗಿದ ನಂತರ ದಿಲೀಪ್ ಆತ್ಮಹತ್ಯೆಗೆ ಯತ್ನಿಸಿದ್ದನೆಂದು ವರದಿಯಾಗಿದೆ ಆದರೆ ಬದುಕುಳಿದು ಶನಿವಾರ ಬೆಳಿಗ್ಗೆ ಪೊಲೀಸರಿಗೆ ಶರಣಾಗಿದ್ದಾನೆ.ವಿವರಗಳನ್ನು ದೃಢಪಡಿಸುತ್ತಾ ಅಂಜಾರ್ ಪೊಲೀಸ್ ಇನ್ಸ್ಪೆಕ್ಟರ್ ಎ.ಆರ್. ಗೋಹಿಲ್ ಅವರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

