ಮುಂಬೈ : ಜುಲೈ18 ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ. ನಿರ್ದೇಶಕ ಮೋಹಿತ್ ಸೂರಿ ನಿರ್ದೇಶನದ ಯುವ ನಟ ನಟಿಯರಾದ ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ನಟನೆಯ ‘ಸೈಯಾರಾ’ ಚಿತ್ರ ಇತ್ತೀಚಿನ ದಿನಗಳಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಇದು ಈ ವರೆಗಿನ ಚಿತ್ರಗಳ ದಾಖಲೆಗಳನ್ನು ಮುರಿಯುತ್ತಿದೆ. ದೀರ್ಘಕಾಲದವರೆಗೆ ಯಾವುದೇ ಚಿತ್ರ ಮಾಡಲು ಸಾಧ್ಯವಾಗದ ದಾಖಲೆಯನ್ನು ನಿರ್ದೇಶಕ ಮೋಹಿತ್ ಸೂರಿ ಅವರ ಈ ಚಿತ್ರ ಮಾಡಿದೆ.

ಮೋಹಿತ್ ಸೂರಿ ನಿರ್ದೇಶನದ ಅವರ ಹಿಂದಿನ ಚಿತ್ರ ಆಶಿಕಿ 2 ಅನ್ನು ಮತ್ತೊಮ್ಮೆ ನೆನಪಿಸುತ್ತದೆ. ‘ಸೈಯಾರಾ’ ಚಿತ್ರವು ಕಡಿಮೆ ಬಜೆಟ್ನ ಚಿತ್ರವಾಗಿದ್ದು, ಅದರ ಸಂಗೀತ, ಕಥೆ ಮತ್ತು ನಟನೆಗಾಗಿ ಪ್ರಶಂಸಿಸಲ್ಪಡುತ್ತಿದೆ. ಬಾಲಿವುಡ್ ನಟ ಚಂಕಿಪಾಂಡೆಯ ಸಹೋದರ ಚಿಕ್ಕಿ ಪಾಂಡೆಯ ಮಗನಾದ ಅಹಾನ್ ಪಾಂಡೆ ಈ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ ಮತ್ತು ಈ ಚಿತ್ರವನ್ನು ಅತ್ಯಂತ ಅದ್ಭುತವಾದ ಚೊಚ್ಚಲ ಚಿತ್ರ ಎಂದು ಕರೆಯಲಾಗುತ್ತಿದೆ.

ಕೇವಲ 3 ದಿನಗಳಲ್ಲಿ, ಚಿತ್ರವು ಒಟ್ಟು ಸಂಗ್ರಹದ ವಿಷಯದಲ್ಲಿ 100 ಕೋಟಿಗಳ ಹತ್ತಿರ ತಲುಪಿದೆ.ಈ ಚಿತ್ರವನ್ನು ನೋಡಲು ಜನರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ, ಮತ್ತು ಚಿತ್ರವನ್ನು ನೋಡಿದ ನಂತರ, ಜನರ ಕಣ್ಣುಗಳಲ್ಲಿ ಕಣ್ಣೀರು ಹರಿಯುತ್ತಿರುವುದು ಕಂಡು ಬರುತ್ತದೆ, ಈ ಭಾವನಾತ್ಮಕ ಕ್ಷಣದ ತುಣುಕುಗಳು ಸಹ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ.

ಚಿತ್ರವು ಸಾಕಷ್ಟು ಚರ್ಚೆಯಲ್ಲಿರುವಾಗ ಜನರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಈ ಚಿತ್ರವನ್ನು 2004 ರ ಕೊರಿಯನ್ ಚಿತ್ರ “ಎ ಮೊಮೆಂಟ್ ಟು ರಿಮೆಂಬರ್ ” ಕಥೆಯ ನಕಲು ಎಂದು ಜನರು ಹೇಳುತ್ತಿದ್ದಾರೆ



