ಮಂಗಳೂರು :ಸೇಂಟ್ ಅಲೋಶಿಯಸ್ ಕಾಲೇಜಿನ ಮೂರನೇ ವರ್ಷದ ಬಿಎ ವಿದ್ಯಾರ್ಥಿನಿ ಮಂಗಳೂರಿನ ರೆಮೋನಾ ಎವೆಟ್ ಪೆರೇರಾ 170 ಗಂಟೆಗಳ ಕಾಲ ಭರತನಾಟ್ಯ ನೃತ್ಯ ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದಾರೆ.

ಅವರ ಅಸಾಧಾರಣ ಸಾಧನೆಯು ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್ನಲ್ಲಿ ನಡೆಯಿತು.2023 ರಲ್ಲಿ ಲಾತೂರಿನ16 ವರ್ಷದ ಸ್ರಷ್ಟಿ ಸುಧೀರ್ ಜಗಪತ್ ನಿರ್ಮಿಸಿದ 127 ಗಂಟೆಗಳ ನಿರಂತರ ಭರತನಾಟ್ಯ ಹಿಂದಿನ ದಾಖಲೆಯಾಗಿತ್ತು.170 ಗಂಟೆಗಳ ಪ್ರದರ್ಶನದೊಂದಿಗೆ ಇದನ್ನು ಮೀರಿಸುವ ಮೂಲಕ, ರೆಮೋನಾ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದ್ದಾರೆ.

ಈ ಪ್ರದರ್ಶನದಲ್ಲಿ ಅಲರಿಪ್ಪು,ಶಬ್ದಂ,ವರ್ಣಂ,ಜತಿಸ್ವರಂ,ಪದಂ,ಮತ್ತು ತಿಲ್ಲಾನ ಸೇರಿದಂತೆ ಭರತನಾಟ್ಯದ ತುಣುಕುಗಳನ್ನು ಪ್ರದರ್ಶಿಸಲಾಯಿತು, ನ್ರತ್ಯವು ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಗಳ ಕಾಲ ನಡೆಯಿತು ಅಲ್ಲದೆ ಪ್ರತಿ ಮೂರು ಗಂಟೆಗಳಿಗೊಮ್ಮೆ 15 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳುತ್ತಿದ್ದರು,




