ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಂದಿಗೆ ವಿವಾಹವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿಯನ್ನು ಮೇ 28 ರಂದು ಕಂಕಿನಾಡದ ಶ್ರೀನಿವಾಸನ್ ಗೌಡ್ .ಎಂಬ ವ್ಯಕ್ತಿಯೊಂದಿಗೆ ವಿವಾಹ ಮಾಡಲಾಗಿತ್ತು

ಮದುವೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಇದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ಭಾರಿ ಪ್ರತಿಭಟನೆಗೆ ಕಾರಣವಾಯಿತು ಇದರ ನಂತರ ಪೊಲೀಸರು 40 ವರ್ಷದ ವರ ಶ್ರೀನಿವಾಸ ಗೌಡರ್ ಮದುವೆಯನ್ನು ಏರ್ಪಡಿಸಿದ ಅರ್ಚಕ, ಮಧ್ಯವರ್ತಿ ಮತ್ತು 40 ವರ್ಷದ ವ್ಯಕ್ತಿಯ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಾಲಕಿಯ ಶಾಲಾ ಶಿಕ್ಷಕರು ಪೊಲೀಸರಿಗೆ ಮದುವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ನಿಂದ 55 ಕಿ.ಮೀ ದೂರದಲ್ಲಿರುವ ನಂದಿಗಾಮದಲ್ಲಿ ಈ ಅಕ್ರಮ ಬಾಲ್ಯ ವಿವಾಹ ನಡೆದಿದೆ. ಪೊಲೀಸರಿಗೆ ಸಿಕ್ಕಿರುವ ದೃಶ್ಯಗಳಲ್ಲಿ, ಬಾಲಕಿ ಹಾರ ಹಿಡಿದು 40 ವರ್ಷದ ವ್ಯಕ್ತಿಯ ಮುಂದೆ ನಿಂತಿರುವುದನ್ನು ಕಾಣಬಹುದು, ಆದರೆ ಆತನ ಪತ್ನಿ ಮತ್ತು ಅರ್ಚಕರು ಹತ್ತಿರದಲ್ಲಿ ನಿಂತಿದ್ದಾರೆ. ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

