ನವದೆಹಲಿ : 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶುಕ್ರವಾರ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಘೋಷಿಸಲಾಯಿತು. ವಿಧು ವಿನೋದ್ ಚೋಪ್ರಾ ಅವರ 12 th ಫೇಲ್ ಚಿತ್ರವು ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದರೆ, ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಜವಾನ್ ಚಿತ್ರಕ್ಕಾಗಿ ಶಾರುಖ್ ಖಾನ್ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ’12ನೇ ಫೇಲ್’ ಚಿತ್ರದ ನಟ ವಿಕ್ರಾಂತ್ ಮ್ಯಾಸ್ಸೆ ಪಡೆದರು. ಶ್ರೀಮತಿ ಚಟರ್ಜಿ vs ನಾರ್ವೆ ಚಿತ್ರದ ಅಭಿನಯಕ್ಕಾಗಿ ರಾಣಿ ಮುಖರ್ಜಿಯವರಿಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.ಈ ಬಾರಿ ಹಿಂದಿ ಮತ್ತು ಮಲಯಾಳಂ ಚಿತ್ರರಂಗ ಹೆಚ್ಚಿನ ಪ್ರಶಸ್ತಿಯನ್ನು ಚಾಚಿಕೊಂಡಿದೆ.

ಇತರ ಗಮನಾರ್ಹ ವಿಜೇತರಲ್ಲಿ ದಿ ಕೇರಳ ಸ್ಟೋರಿಯ ಸುದೀಪ್ತೋ ಸೇನ್ (ಅತ್ಯುತ್ತಮ ನಿರ್ದೇಶನ), ವಿಜಯರಾಘವನ್ ಮತ್ತು ಮುತ್ತುಪೆಟ್ಟೈ ಸೋಮು ಭಾಸ್ಕಾ (ಅತ್ಯುತ್ತಮ ಪೋಷಕ ನಟ), ಜಾನಕಿ ಬೋಡಿವಾಲಾ ಮತ್ತು ಉರ್ವಶಿ (ಅತ್ಯುತ್ತಮ ಪೋಷಕ ನಟಿ), ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಮನೋರಂಜನೆಗಾಗಿ ಅತ್ಯುತ್ತಮ ಜನಪ್ರಿಯ ಚಿತ್ರ), ಕಥಲ್ (ಅತ್ಯುತ್ತಮ ಹಿಂದಿ ಚಿತ್ರ), ಉಲ್ಲಾಳುಕ್ಕು (ಅತ್ಯುತ್ತಮ ಮಲಯಾಳಂ ಚಿತ್ರ), ಪಾರ್ಕಿಂಗ್ (ಅತ್ಯುತ್ತಮ ತಮಿಳು ಚಿತ್ರ) ಮತ್ತು ಭಗವಂತ ಕೇಸರಿ (ಅತ್ಯುತ್ತಮ ತೆಲುಗು ಚಿತ್ರ) ಕೊಡಗು ಜಿಲ್ಲೆ ಮಡಿಕೇರಿಯ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಅವರು ನಿರ್ಮಿಸಿ, ನಿರ್ದೇಶಿಸಿರುವ ‘ಕಂದೀಲು’ ಚಿತ್ರವು ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದಿದೆ. ಇನ್ನು ಬೆಸ್ಟ್ ಸ್ಕ್ರಿಪ್ಟ್ (ನಾನ್ ಫೀಚರ್ ಫಿಲ್ಮ್) ವಿಭಾಗದಲ್ಲಿ ಮೈಸೂರಿನ ಚಿದಾನಂದ ನಾಯಕ್ ಅವರ ನಿರ್ದೇಶನದ ಕಿರುಚಿತ್ರ ‘Sunflowers Were the First Ones to Know’ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ ಪ್ರಶಸ್ತಿಗಳಿಗೆ ಜನವರಿ 1, 2023 ರಿಂದ ಡಿಸೆಂಬರ್ 31, 2023 ರ ನಡುವೆ CBFC (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ನಿಂದ ಪ್ರಮಾಣೀಕರಣವನ್ನು ಪಡೆದ ಚಲನಚಿತ್ರಗಳು ಅರ್ಹವಾಗಿದ್ದವು.

2023 ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತೀರ್ಪುಗಾರರ ಮುಖ್ಯಸ್ಥ ಮತ್ತು ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಅವರು ಪ್ರಶಸ್ತಿಯನ್ನು ಘೋಷಿಸಿದರು.ಪ್ರಶಸ್ತಿ ಪ್ರದಾನ ಸಮಾರಂಭವು ಈ ತಿಂಗಳ ಕೊನೆಯಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ

