ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಒಡೆತನದ ಕೆಫೆ – ಕ್ಯಾಪ್ಸ್ ಕೆಫೆ ಮೇಲೆ ಒಂದು ತಿಂಗಳೊಳಗೆ ಇಂದು ಎರಡನೇ ಬಾರಿಗೆ ಗುಂಡಿನ ದಾಳಿ ನಡೆದಿದ್ದು, ಸ್ಥಳೀಯರು ಮತ್ತು ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಗುರುವಾರ ಮುಂಜಾನೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೆಫೆ ಮೇಲೆ ಗುಂಡು ಹಾರಿಸಿದ್ದು ಕೆಫೆ ತೆರೆದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.ಆ ಸಂದರ್ಭದಲ್ಲಿ ಕೆಲವು ಸಿಬ್ಬಂದಿಗಳು ಕೆಫೆಯ ಒಳಗೆ ಇದ್ದರು ಎನ್ನಲಾಗಿದೆ.ಆದರೆ ಅದೃಷ್ಟವಶಾತ್ ಯಾರಿಗೂ ಗಾಯಗಳು ಆದ ವರದಿಯಾಗಿಲ್ಲ.ಆವರಣದಲ್ಲಿ ಕನಿಷ್ಠ ಆರು ಗುಂಡುಗಳ ರಂಧ್ರಗಳು ಕಂಡುಬಂದಿದ್ದು, ಪರಿಣಾಮ ಕಿಟಕಿಗಳು ಒಡೆದುಹೋಗಿವೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನು ಬಂಧಿಸಿಲ್ಲ.

ದಾಳಿಯ ಹೊಣೆಯನ್ನು ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಹಿಸಿಕೊಂಡಿದ್ದಾರೆ ಎಂದು ಹೇಳಲಾದ ಗ್ಯಾಂಗ್ ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಯ ಸಮಯದಲ್ಲಿ ಗುಂಡೇಟಿನ ಶಬ್ದವನ್ನು ಸೆರೆಹಿಡಿಯುವ ವೀಡಿಯೊ ಆನ್ಲೈನ್ನಲ್ಲಿ ಪ್ರಸಾರವಾಗುತ್ತಿದೆ.

