ಮಂಗಳೂರು : ಖೇಲೋ ಇಂಡಿಯಾ ಅಸ್ಮಿತಾ ವುಮೆನ್ ಸ್ಟೇಟ್ ವುಶು ಲೀಗ್ ಕ್ರೀಡಾಕೂಟ ಆಗಸ್ಟ್ 9 ಹಾಗೂ10 ರಂದು ಮಂಗಳೂರಿನ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ವುಶು ಅಸೊಶಿಯೇಶನ್ ನ ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ಮೊಕಾಶಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಂಗಳೂರಿನಲ್ಲಿ ಖೇಲೋ ಇಂಡಿಯಾ ಅಸ್ಮಿತಾ ವುಮೆನ್ಸ್ ವುಶು ಲೀಗ್ ಸಬ್ ಜೂನಿಯರ್ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ನಡೆಯಲಿದ್ದು ಕ್ರೀಡಾಕೂಟವನ್ನು ದಕ್ಷಿಣ ಕನ್ನಡ ಜಿಲ್ಲಾ ವುಶು ಸಂಸ್ಥೆಯು ಕರ್ನಾಟಕ ವುಶು ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 2೦೦ ಮಹಿಳಾ ಕ್ರೀಡಾಪಟುಗಳು ಬಾಗಿಯಾಗಲಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಪದಕ ಪಡೆದ ಕ್ರೀಡಾಪಟುಗಳನ್ನು ಝೋನಲ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ಆಯ್ಕೆಮಾಡಲಾಗುತ್ತದೆ ಎಂದರು.

ದಿನಾಂಕ 9-8-2025 ರಂದು ವಿಶ್ವ ವುಶು ಕುಂಗ್ ಪೂ ದಿನಾಚರಣೆಯ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ವಿಶ್ವ ವುತು ಕುಂಗ್ ದಿನಾಚರಣೆಯನ್ನು ಆಚರಿಸಲಾಗುವುದು.ನಂತರ ಕ್ರೀಡಾಕೂಟ ಪ್ರಾರಂಭವಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ನೆರವೇರಿಸಲಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್,ಭರತ್ ಶೆಟ್ಟಿ, ಐವನ್ ಡಿ’ಸೋಜ ಉಪಸ್ಥಿತರಿರುವರು.ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಗೌರವಾನ್ವಿತ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಗಮೇಶ್ ಲಯದಗುಂಡಿ, ರೋಹನ್. ಎಸ್ ಉಪಸ್ಥಿತರಿದ್ದರು

