ದೆಹಲಿ ಪೊಲೀಸ್ ವಿಶೇಷದಳ ಮತ್ತು ಭಾರತದ ಭದ್ರತಾದಳ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಭಾರತದ ಅತಿದೊಡ್ಡ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಪಿಸ್ತೂಲ್ನನ್ನು ನೇಪಾಳದಲ್ಲಿ ಬಂಧಿಸಿದ್ದಾರೆ.
ಸಲೀಂ ಪಾಕಿಸ್ತಾನದ ಐಎಸ್ಐ ಮತ್ತು ದಾವೂದ್ನ ‘ಡಿ’ ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದ. ಅವನು ದರೋಡೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದನು.ಮಾತ್ರವಲ್ಲದೆ ಇತನ ಬಂಧನದಿಂದಾಗಿ ಶಸ್ತ್ರಾಸ್ತ್ರ ಪೂರೈಕೆಯ ಅತೀ ದೊಡ್ಡ ಜಾಲವನ್ನು ಬಹಿರಂಗ ಪಡಿಸಬಹುದಾಗಿದೆ.
ಸಲೀಂ ಪಿಸ್ತೂಲ್ ಕಳೆದ ಹಲವಾರು ವರ್ಷಗಳಿಂದ ಪಾಕಿಸ್ತಾನದಿಂದ ಭಾರತಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ.ಅಲ್ಲದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಮತ್ತು ದಾವೂದ್ ಇಬ್ರಾಹಿಂನ ಡಿ ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದ ಎಂಬುದಕ್ಕೆ ಭದ್ರತಾ ಸಂಸ್ಥೆಗಳು ಪುರಾವೆಗಳನ್ನು ಕಂಡುಕೊಂಡಿವೆ.

ಸಲೀಂ ಪಿಸ್ತೂಲ್ ಲಾರೆನ್ಸ್ ಬಿಷ್ಣೋಯ್, ಹಾಶಿಂ ಬಾಬಾ ಅವರಂತಹ ದೊಡ್ಡ ದರೋಡೆಕೋರರಿಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ. ಸಿಧು ಮೂಸೆವಾಲಾ ,
ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲೂ ಸಲೀಂ ಪಿಸ್ತೂಲ್ ಹೆಸರು ಕೇಳಿಬಂದಿತ್ತು. ಸಲೀಂ ದೆಹಲಿಯ ಸೀಲಾಂಪುರ ಪ್ರದೇಶದ ನಿವಾಸಿಯಾಗಿದ್ದು, ಆತನ ಸಂಪೂರ್ಣ ಜಾಲ ಭಾರತ ಮತ್ತು ಪಾಕಿಸ್ತಾನದ ನಡುವೆ ಹರಡಿತ್ತು.
ಆರ್ಥಿಕ ಸಂಕಷ್ಟದಿಂದಾಗಿ ಸಲೀಂ ಪಿಸ್ತೂಲ್ 8ನೇ ತರಗತಿಯ ನಂತರ ತನ್ನ ಅಧ್ಯಯನವನ್ನು ನಿಲ್ಲಿಸಿದನು.ನಂತರ ಕಾರು ಚಾಲಕನಾಗಿದ್ದ ಈತ 1992 ರಲ್ಲಿ ವಿವಾಹವಾದನು.

ಸಲೀಂನನ್ನು 2018 ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು, ಆದರ ನಂತರ ಅವನು ವಿದೇಶಕ್ಕೆ ಪರಾರಿಯಾಗಿದ್ದನು. ಇತ್ತೀಚೆಗೆ ದೆಹಲಿ ಪೊಲೀಸರ ವಿಶೇಷ ಘಟಕಕ್ಕೆ ಸಲೀಂ ನೇಪಾಳದಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಭದ್ರತಾ ಸಂಸ್ಥೆಗಳು ಅವರನ್ನು ನೇಪಾಳದಲ್ಲಿ ಬಂಧಿಸಿದ್ದಾರೆ.

