ಮಂಗಳೂರು: ಕುಳಾಯಿಯ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ವತಿಯಿಂದ 9 ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆ.9ರಿಂದ 17ರ ವರೆಗೆ ಜರುಗಲಿದೆ.ಆ.9ರಂದು ಬೆಳಗ್ಗೆ 8ಕ್ಕೆ ಬಲರಾಮ ಜಯಂತಿ ಸಂಜೆ 4ಗಂಟೆಗೆ ಸುರತ್ಕಲ್ ಜಂಕ್ಷನ್ನಿಂದ ಇಸ್ಕಾನ್ ದೇವಸ್ಥಾನದ ವರೆಗೆ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ನಾಮನಿಷ್ಠ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ.10ರಿಂದ 15ರ ವರೆಗೆ ಪ್ರತಿದಿನ ಬೆಳಗ್ಗೆ ಶ್ರೀ ಕ್ರಷ್ಣನ ಭವ್ಯ ಮೂರ್ತಿಗೆ ಅಭಿಷೇಕ, ಸಂಜೆ ಡೋಲೋತ್ಸವ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಆ.16ರಂದು ಸಂಜೆ 6ರಿಂದ ಕೃಷ್ಣ ಜನ್ಮಾಷ್ಟಮಿ ಮಧ್ಯರಾತ್ರಿಯ ತನಕ ಸಾಗಲಿದೆ. ಆ.17ರಂದು ಬೆಳಗ್ಗೆ 10ಕ್ಕೆ ಶ್ರೀಲ ಪ್ರಭುಪಾದರ ವ್ಯಾಸ ಪೂಜೆ ನಡೆಯಲಿದೆ ಅಲ್ಲದೆ ದೇವಸ್ಥಾನದಲ್ಲಿ ಭಗವಾನ್ ಶ್ರೀ ಕೃಷ್ಣನ ಭವ್ಯ ಅಭಿಷೇಕ, ರಥೋತ್ಸವ, ಡೋಲೋತ್ಸವ, ಗೋ ಪೂಜೆ, ಪ್ರವಚನಗಳು, ಮಧ್ಯರಾತ್ರಿ ಆರತಿ, ಭಕ್ತಿ ಸಂಕೀರ್ತನೆ ನಾಟಕಗಳು,ಮಕ್ಕಳ ಸ್ಪರ್ಧೆಗಳು – ಉತ್ಸವದ
ಪ್ರಮುಖ ಅರ್ಪಣೆಗಳಾಗಿವೆ ಎಂದು ಹೇಳಿದರು.

ಗೀತಾ ಅಧ್ಯಯನ ಕಾಲೇಜು
ಕುಳಾಯಿಯಲ್ಲಿ ಶ್ರೀರಾಮಾ ಗೋವಿಂದ ದೇವಸ್ಥಾನ ನಿರ್ಮಾಣದ ಜೊತೆಗೆ ಇದೀಗ 9 ಕೋ.ರೂ.
ವೆಚ್ಚದಲ್ಲಿ ಗೀತಾ ಕಾಲೇಜು ನಿರ್ಮಾಣವಾಗುತ್ತಿದ್ದು,
ಈಗಾಗಲೇ 15 ಕೋ.ರೂ.ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇದಕ್ಕೆ ದೇಶವಿದೇಶಗಳ ಭಕ್ತರ ಸಹಕಾರ ಬೇಕಾಗಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಪ್ರಮುಖರಾದ ಶ್ರೀವಾಸ ದಾಸ, ಧರಣೇಶ್ವರಿ ಮಾತಾಜಿ ಹಾಗೂ ಸದಾದ್ರಷ್ಟ ದಾಸ ಉಪಸ್ಥಿತರಿದ್ದರು

