ಮಂಗಳೂರು : ದುಬೈ ಬಿಸಿಎಫ್ ವತಿಯಿಂದ
ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದುಬ್ಯಾನ ಬ್ಯಾರೀಸ್ ಕಲ್ಬರಲ್ ಫೋರಂ (ಬಿಸಿಎಫ್) ಕಳೆದ 24 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯ ತನಕದ ಸುಮಾರು 300ಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವು ಆಗಸ್ಟ್ 10 ರಂದು ಮಂಗಳೂರಿನ ಪ್ರೆಸ್ಪಿಜ್ ಇಂಟರ್ನ್ಯಾಶನಲ್ ಸ್ಕೂಲ್, ಜೆಪ್ಪಿನಮೊಗರುವಿನಲ್ಲಿ ನಡೆಯಲಿದೆ.ಎಂದು ಬ್ಯಾರೀಸ್ ಕಲ್ಚರಲ್ ಪೋರಂ,ದುಬೈ ಇದರ ಅಧ್ಯಕ್ಷರಾದ ಡಾ.ಬಿ.ಕೆ ಯೂಸುಫ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ಮಾಜಿ ಶಾಸಕರಾದ ಬಿ.ಎ ಮೊಯ್ದೀನ್ ಬಾವರವರು ಮಾತನಾಡಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು100 ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಗುವುದು ಹಾಗೂ ಎಸ್ ಎಸ್ಎಲ್ ಸಿ,ಪಿಯುಸಿ ಮತ್ತು ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ತತಿಭಾ ಪುರಸ್ಕಾರ ನಡೆಯಲಿದೆ.

ಕಾರ್ಯಕ್ರಮವು ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದ್ದು, ಈ ಕಾರ್ಯಕ್ರಮವನ್ನು ಯುಎಇ ಲಂಡನ್ ಅಮೇರಿಕನ್ ಸಿಟಿ ಕಾಲೇಜಿನ ನಿರ್ದೇಶಕರಾದ ಡಾ. ಪ್ರೊ. ಕಾಪು ಮೊಹಮ್ಮದ್ ಹಾಗೂ ಮನಾಲ್ ಕಾಪುರವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಸಭೆ ಮಾನ್ಯ ಸಭಾಪತಿಗಳಾದ ಜನಾಬ್ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ. ಬಿ.ಕೆ ಯೂಸುಫ್ ವಹಿಸಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಹೆಚ್.ವಿ ದರ್ಶನ್, ಜಿಲ್ಲಾಧಿಕಾರಿ, ದ.ಕ. ಜಿಲ್ಲೆ ಹಾಗೂ ಎನ್.ಆರ್.ಘೋರಂ ಯು.ಎ.ಇ. ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಇವರು ಭಾಗವಹಿಸುವ ನಿರೀಕ್ಷೆಯಿದೆ. ಮಾಜಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಬಿ.ಎಂ ಫಾರೂಕ್ ಜನಾಬ್, ಹಾಜಿ ಎಸ್.ಎಂ. ರಶೀದ್, ಹಾಜಿ ಡಾ. ಯು.ಟಿ ಇಫ್ತಿಕಾರ್, ಕೆ ಮಹಮ್ಮದ್ ಹಾರಿಸ್, ಜನಾಬ್ ಶೇಖ್ ಮೊದೀನ್ ಕರ್ನಿರೆ, ಜನಾಬ್ ಅಬ್ದುಲ್ಲ ಮಾದುಮೂಲೆ,ಜನಾಬ್ ಇಬ್ರಾಹಿಂ ಗಡಿಯಾರ್,ಜನಾಬ್ ಅಬೂಸಾಲಿಹ್,ಶ್ರೀಮತಿ ಕೌಸರ್ ನಿಝಾರ್,ಶ್ರೀಮತಿ ಝಾಹಿದ ಜಲೀಲ್ ಮೊದಲಾದವರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಮ್. ಇ. ಮೂಳೂರು,ಡಾ. ಕಾಪು ಮೊಹಮ್ಮದ್,ಅಬ್ದುಲ್ ಲತೀಫ್ ಮುಲ್ಕಿ, ಇಬ್ರಾಹಿಂ ಗಡಿಯಾರ್ , ಅಬೂಸ್ವಾಲಿಹ್ ಹುಸೈನ್ , ಉಸ್ಮಾನ್ ಮೂಳೂರು,ಅಶ್ರಫ್ ಸತ್ತಿಕಲ್, ಎಂ. ಅಬ್ದುಲ್ ರಝಾಕ್ ಮುಟ್ಟಿಕಲ್, ಹುಸೈನ್ ಸತ್ತಿಕಲ್ ಮೊದಲಾದವರು ಉಪಸ್ಥಿತರಿದ್ದರು.


