ಮಂಗಳೂರು : ಕಳೆದ ಹದಿನಾರು ವರ್ಷಗಳಿಂದ ವಿಶ್ವ ಹಿಂದೂ ಪರಿಷದ್, ಬಜರಂಗದಳ -ಕೋಡಿಕಲ್ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿಯ ಕೋಡಿಕಲ್ ವತಿಯಿಂದ ಬಹಳ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಈ ಬಾರಿ ಆಗಸ್ಟ್ 27 ಬುಧವಾರದಿಂದ 29 ರವರೆಗೆ ಮೂರು ದಿನ ನಡೆಸಲು ನಿರ್ಧರಿಸಲಾಗಿದೆ.
ವೇ|ಮೂರ್ತಿ ವಿಶ್ವಕುಮಾರ್ ಜೋಯಿಸರ ಪೌರೋಹಿತ್ಯದಲ್ಲಿ 27ರ ಬೆಳಿಗ್ಗೆ ಗಣೇಶನನ್ನು ಸ್ಥಾಪಿಸಿ 29ರ ಸಾಯಂಕಾಲ ವೈಭವದ ಶೋಭಾಯಾತ್ರೆಯಲ್ಲಿ ಸಾಗಿ ಫಲ್ಗುಣಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು. “ಕೋಡಿಕಲ್ ಶ್ರೀ ಗಣೇಶೋತ್ಸವ” ಎಂದೇ ಖ್ಯಾತಿಯಾದ ಈ ಸಂಭ್ರಮದಲ್ಲಿ ಮೂರು ದಿನಗಳಲ್ಲಿ ವಿಶೇಷ ಸೇವೆಗಳೊಂದಿಗೆ ವಿಶೇಷ ಧಾರ್ಮಿಕ ಪ್ರಕ್ರಿಯೆಗಳೂ ಜರಗಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶ್ರೀ ಗಣೇಶೋತ್ಸವದ ಪ್ರಯುಕ್ತ ತಾ. 17-08-2025ನೇ ರವಿವಾರ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೈಹಿಕ ಹಾಗೂ ಬೌದ್ಧಿಕ ಸ್ಪರ್ಧೆಗಳನ್ನು ಕೋಡಿಕಲ್ನ ಸರಕಾರಿ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ. ಪ್ರಶಸ್ತಿಗಳನ್ನು ಗಣೇಶ ಮಂಟಪದಲ್ಲಿ ನೀಡಲಾಗುವುದು. ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರೂ ಭಾಗವಹಿಸಲಿರುವರು, ಗಣ್ಯರು ಕ್ರೀಡೋತ್ಸವವನ್ನು ಉದ್ಘಾಟಿಸಲಿರುವರು ಎಂದರು.

ನಂತರ ಮಾಜಿ ಮೇಯರ್ ಮನೋಜ್ ಕುಮಾರ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಸಮಿತಿಯ ವತಿಯಿಂದ ಸಮಾಜದಲ್ಲಿ ಅನಿವಾರ್ಯತೆ ಉಳ್ಳವರಿಗೆ ಸಹಾಯ ಹಸ್ತ ಚಾಚುವುದು.ರಕ್ತದಾನ ಶಿಬಿರಗಳು,
ರಾಷ್ಟ್ರಭಕ್ತಿಯ ಬಗ್ಗೆ ಸದಾ ಜಾಗೃತಗೊಳಿಸುತ್ತಾ, “ಬಾಲ ಸಂಸ್ಕಾರ ಶಿಬಿರಗಳ ಮೂಲಕ ದೇಶಪ್ರೇಮ ಧರ್ಮಾಭಿಮಾನವನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಸದಾ ಮಾಡುತ್ತಾ ಬಂದಿದೆ.
ಗೋ ರಕ್ಷಾ ಅಭಿಯಾನ ,ವಂದೇ ಗೋಮಾತರಂ ಗೋಪೂಜೆಗಳನ್ನು ನಡೆಸುತ್ತಾ ಕೃಷಿ-ಋಷಿ ಸಂಸ್ಕೃತಿಯ ಅರಿವು ಮೂಡಿಸುವುದು,ಭಜನೆಯಿದ್ದಲ್ಲಿ ವಿಭಜನೆಯಿಲ್ಲ” ಮನೆ ಮನೆ ಭಜನೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಭಜನೆ ನಡೆಸಿ ಸಂಕೀರ್ತನೆಯ ಮಹತ್ವವನ್ನು ತಿಳಿಸುವುದು. ದೇಶ-ಧರ್ಮಕ್ಕಾಗಿ ಸಾಮಯಿಕ ಹಾಗೂ ಸಾಮಾಜಿಕ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ತಾ. 27-08-2025 ರಂದು ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ರಾತ್ರಿ ರಂಗಪೂಜೆಯ ಬಳಿಕ ಪ್ರಶಸ್ತಿ ವಿಜೇತ ಜೈಮಾತಾ ಕಲಾತಂಡ ಮಂಗಳೂರು ಇವರ ತೆಲಿಕೆದ ಕಲಾವಿದೆರ್ ಅಭಿನಯಿಸುವ ತುಳು ಹಾಸ್ಯಮಯ ನಾಟಕ “ಪೊಣ್ಣು” ಪ್ರದರ್ಶನಗೊಳ್ಳಲಿದೆ. ತಾ, 28 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾಪೂಜೆಯ ಬಳಿಕ ವಿಸ್ಮಯ ವಿನಾಯಕ ಬಳಗದವರಿಂದ “ಕಡೆಕೊಡಿ ಕಾಮಿಡಿ” ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕಿರಣ್ ಜೋಗಿ,ಪಿ.ಮಹಾಬಲ ಚೌಟ,ಸತೀಶ್ ಶೆಟ್ಟಿ, ಮನೋಜ್ ಕಲ್ಪನೆ,ಅಖಿಲೇಶ್ ಶೆಟ್ಟಿ ಉಪಸ್ಥಿತರಿದ್ದರು.

