ಮಂಗಳೂರು : ದ.ಕ. ಜಿಲ್ಲಾ ಅಥ್ಲೆಟಿಕ್ ಎಸೋಸಿಯೇಶನ್ ವತಿಯಿಂದ ಇದೇ ಬರುವ ಆಗಸ್ಟ್ 18 ಮತ್ತು 19 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟವು ಜರಗಲಿರುವುದು ಎಂದು ಸಂಸ್ಥೆಯ ಕೋಶಾಧಿಕಾರಿ ಶ್ರೀಕ್ರಷ್ಣ ಶೆಣೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ದಿನಾಂಕ 18 ರಂದು ಮಧ್ಯಾನ್ಹ 3:30ಕ್ಕೆ ನಡೆಯಲಿದೆ ಕ್ರೀಡಾಕೂಟದಲ್ಲಿ ಸುಮಾರು 500 ಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಲಿದ್ದು.ಬಾಲಕ ಬಾಲಕಿಯರ 12, 14, 16 ಮತ್ತು 18 ವಯೋಮಿತಿಯ ಸ್ಪರ್ಧೆಯು ಜರಗಲಿರುವುದು
ಈ ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಆ 23 ರಿಂದ 26ವರೆಗೆ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುವುದು ಎಂದರು ಅಲ್ಲದೆ ಕ್ರೀಡಾಕೂಟದ ಪ್ರಾಯೋಜಕತ್ವವನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮತ್ತು ಎಂ.ಆರ್.ಪಿ.ಎಲ್. ನೀಡಿರುತ್ತದೆ. ಅಲ್ಲದೆ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಬೇಕಾಗಿ ಕ್ರಷ್ಣ ಶೆಣೈಯವರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸ್ಟೀವನ್.ಎಂ.ಪಿ ಡಯಾಸ್, ಸುಜಿತ್ ಕುಮಾರ್, ಅನಿಲ್ ಆಳ್ವ, ತಾರಾನಾಥ ಶೆಟ್ಟಿ ಉಪಸ್ಥಿತರಿದ್ದರು.

