ಮಂಗಳೂರು : ನ್ಯೂ ಫ್ರೆಂಡ್ಸ್ ಕಾಪಿಗುಡ್ಡ( ರಿ ) ಆಕಾಶ ಭವನ, ಕಾವೂರು ಇದರ ವತಿಯಿಂದ 79ನೇ ಸ್ವಾತಂತ್ರೋತ್ಸವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಮಾಜಿ ಕಾರ್ಪೊರೇಟರ್ ದೀಪಕ್ ಕೆ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಕಾಪಿಗುಡ್ಡ ಅಂಗನವಾಡಿ ಮಕ್ಕಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲಿಕಾ ಸಾಮಗ್ರಿಗಳನ್ನು ನೀಡಿದಂತಹ ನಾಗರೀಕ ಸೇವಾ ಸಮಿತಿ( ರಿ) ಕಾಪಿಗುಡ್ಡ ಇವರು ಮಾಡಿದ ಸಮಾಜ ಸೇವೆಗಾಗಿ ಸ್ಮರಣಿಕೆಯನ್ನು ನೀಡಲಾಯಿತು.

ಅಂಗನವಾಡಿ ಶಿಕ್ಷಕಿ ದೇವಿಕಾ, ಸಹ ಶಿಕ್ಷಕಿ ಜಯಲಕ್ಷ್ಮಿ ಸಂಘದ ಗೌರವಾಧ್ಯಕ್ಷರಾದ ಟಿ.ಕೇಶವ ಗುರುಸ್ವಾಮಿ, ದಕ್ಷಿಣಕನ್ನಡ ಜಿಲ್ಲಾ ಅರೋಗ್ಯ ಸಮಿತಿ ಸದಸ್ಯೆ ಶ್ರೀಮತಿ ಪ್ರಮೀಳಾ ಈಶ್ವರ್, ಸ್ಥಳೀಯರಾದ ಚೆನ್ನಪ್ಪ ಅಮೀನ್, ಸುಶೀಲ ಗಟ್ಟಿ , ಶ್ರೀಮತಿ ಅರ್ಚನಾ ಆಚಾರ್ಯ,ಶ್ರೀಮತಿ ವಸಂತ ಸರೋಜ ,ಸುವನ್ ,ಕಿರಣ್, ಸಂದೀಪ್ ಸಂಘದ ಪ್ರಮುಖರಾದ ಸುದೇಶ್ ನಾಯಕ್ ,ಸತೀಶ್ ದೇವಾಡಿಗ ಚಂದ್ರಹಾಸ್ ,ಜಗದೀಶ್ ಕುಲಾಲ್ , ಶ್ರೀಮತಿ ದಿವ್ಯ , ಶ್ರೀಮತಿ ಸೀಮಾ, ಶ್ರೀಮತಿ ಧನವಂತಿ , ಶ್ರೀಮತಿ ಪ್ರೇಮ, ಶ್ರೀಮತಿ ಸುಜಾತಾ ಹಾಗೂ ಸ್ಥಳೀಯ ಹತ್ತು ಸಮಸ್ತರು ಭಾಗವಹಿಸಿದ್ದರು

ಅಧ್ಯಕ್ಷರಾದ ದಿನೇಶ್ ಸ್ವಾಗತಿಸಿದರು ಕಾರ್ಯದರ್ಶಿ ಉಷಾ ಚಂದ್ರಹಾಸ ಧನ್ಯವಾದಗೈದರು.ಸಂಘದ ಸ್ಥಾಪಕ ಮತ್ತು ಪೋಷಕರಾದ ರಾಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು


