ಶಾರ್ಜಾ : ಯುಎಇ ಯಲ್ಲಿ ಮಲಯಾಳ ಸಮಾಜದವರು ಕಳೆದ 31 ದಿನಗಳಿಂದ ನಡೆಸಿಕೊಂಡು ಬಂದಂತಹ ರಾಮಾಯಣ ಪಠಣ ಕಾರ್ಯಕ್ರಮವು ಮುಕ್ತಾಯಗೊಂಡಿದೆ. ಕೇರಳದ ಹಿಂದೂ ಮನೆಗಳು ಮತ್ತು ದೇವಾಲಯಗಳಲ್ಲಿ ನಡೆಯುವ ರಾಮಾಯಣ ಪಠಣಗಳ ಹೆಜ್ಜೆಗಳನ್ನು ಅನುಸರಿಸಿ, ಯುಎಇಯಲ್ಲಿರುವ ವಲಸಿಗ ಮಲಯಾಳಿ ಕುಟುಂಬಗಳು ಸಹ ಸಂಪೂರ್ಣ ರಾಮಾಯಣವನ್ನು ಓದುತ್ತಾರೆ. ಕುಟುಂಬಗಳು ಖುದ್ದಾಗಿ ಮತ್ತು ಆನ್ಲೈನ್ನಲ್ಲಿ ರಾಮಾಯಣವನ್ನು ಓದುತ್ತಾರೆ, ಪ್ರತಿದಿನ ಪ್ರತಿ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ.

ಪ್ರಮುಖವಾಗಿ ಅಬುಧಾಬಿ ಆಧ್ಯಾತ್ಮಿಕ ಸಮಿತಿ, ಅಯ್ಯಪ್ಪ ಸೇವಾ ಸಮಿತಿ ಯುಎಇ, ಏಕ್ತಾ ಶಾರ್ಜಾ, ಮನ್ನಂ ಸಂಸಾರಿ ಸಮಿತಿ (ಮಾನಸ್), ಅಜ್ಮಾನ್ ವಿಕಾಸ್ ಸಾಂಸ್ಕೃತಿಕ ವೇದಿಕೆ, ಇತ್ಯಾದಿ ನೇತೃತ್ವದಲ್ಲಿ ಪಾರಾಯಣ ನಡೆಯಿತು. ಅಕ್ಕಿರಾಮನ್ ಕಾಳಿದಾಸ ಭಟ್ಟತಿರಿ, ಪಿ.ಎಸ್. ಮೋಹನನ್ ಕೊಟ್ಟಿಯೂರು, ಕವಿ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಜಯಕುಮಾರ್, ಸಾಹಿತಿ ವಯಲಾರ್ ಶರತ್ಚಂದ್ರ ವರ್ಮ, ಪಳ್ಳಿಕ್ಕಲ್ ಸುನಿಲ್, ಶ್ರೀನಾಥ್ ಕರಿಯಾಟ್ ಸೇರಿದಂತೆ ಹಲವರು ವಿವಿಧ ದಿನಗಳಲ್ಲಿ ರಾಮಾಯಣ ಉಪನ್ಯಾಸ ನೀಡಿದರು.

