ಮಂಗಳೂರು : ಮಂಗಳೂರಿನ ಉರ್ವಾಸ್ಟೋರಿನಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ವಿಶ್ವ ವಿದ್ಯಾಲಯ ಹಾಗೂ ಭಾರತ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಗಸ್ಟ್ 22 ರಂದು ಬ್ರಹ್ಮಕುಮಾರೀಸ್ “ವಿಶ್ವ ಶಾಂತಿ ಮಂದಿರ”, ಉರ್ವಾ ಸ್ಟೋರ್, ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಕುಮಾರಿ ಬಿ.ಕೆ ವಿಶ್ವೇಶ್ವರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಬಿರವು ಆ. 22 ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ
ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ರಕ್ತದಾನದ ಮಹತ್ವವನ್ನು ಒತ್ತಿ ಹೇಳುತ್ತಾ ಆಯೋಜಕರು ಜನರಿಗೆ “ರಕ್ತದಾನ ಮಹಾದಾನ” ಎಂಬ ಸಂದೇಶವನ್ನು ಸಾರಲಿದ್ದಾರೆ. ದಾನ ಮಾಡಿದ ರಕ್ತವು ಅಪಘಾತ ಪೀಡಿತರು, ಗಂಭೀರವಾಗಿ ಅಸ್ವಸ್ಥರಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ತುರ್ತು ಅವಶ್ಯಕತೆಯುಳ್ಳ ರೋಗಿಗಳಿಗೆ ಜೀವದಾನವಾಗುತ್ತದೆ ಎಂದರು

18 ರಿಂದ 65 ವರ್ಷದೊಳಗಿನ, ಆರೋಗ್ಯದ ದೃಷ್ಟಿಯಿಂದ ಯೋಗ್ಯರಾಗಿರುವ ಪ್ರತಿಯೊಬ್ಬರಿಗೂ ಈ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ. ದಾನಿಗಳಿಗೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಶಿಬಿರ ಸ್ಥಳದಲ್ಲಿಯೇ ನಡೆಸಲಾಗುತ್ತದೆ.
ಬ್ರಹ್ಮಕುಮಾರೀಸ್ ಸಂಸ್ಥೆ ಪ್ರತಿವರ್ಷವೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಬಾರಿಯ ರಕ್ತದಾನ ಶಿಬಿರವು ಸಹ ಸಮುದಾಯ ಸೇವೆಯೊಂದಾಗಿ ಮಹತ್ವ ಪಡೆದುಕೊಂಡಿದೆ ಎಂದರು ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕುಮಾರಿ ಅಂಬಿಕಾ,ರೇವತಿ ಸನಿಲ್ ಉಪಸ್ಥಿತರಿದ್ದರು

