ಮಂಗಳೂರು : ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಕೇರಳ ಸರ್ಕಾರದ ತಿರುವನಂತಪುರದ ಭಾರತ್ ಭವನ್ ಜಂಟಿ ಆಶ್ರಯದಲ್ಲಿ ಆಗಸ್ಟ್ 23 ರಂದು ಶನಿವಾರ ಬೆಳಿಗ್ಗೆ 9 ರಿಂದ ತಿರುವನಂತಪುರಂನ ತೈಕ್ಕಾಡಿನಲ್ಲಿರುವ ಭಾರತ್ ಭವನ ಸಭಾಂಗಣದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಾಂಸ್ಕೃತಿಕ ಉತ್ಸವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕರಾದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂದು ಬೆಳಿಗ್ಗೆ 9.00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬಳಿಕ ಬೆಳಿಗ್ಗೆ 10.00 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಅಧ್ಯಕ್ಷತೆಯಲ್ಲಿ ಕೇರಳ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್.ಅನಿಲ್ ಉದ್ಘಾಟಿಸುವರು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುವರು. ಭಾರತ್ ಭವನ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರ್, ಹಿರಿಯ ವಿದ್ವಾಂಸ ವೀರಣ್ಣ ತುಪ್ಪದ, ಅಹಮ್ಮದಾಬಾದ್ ಕನ್ನಡ ಸಂಘದ ಅಧ್ಯಕ್ಷ ಹಣಮಂತ ಬೆನ್ನೂರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಎಸ್.ಮದಭಾವಿ, ಅಶೋಕ ಚಂದರಗಿ, ಶಿವರೆಡ್ಡಿ ಖ್ಯಾಡೇದ, ತಿರುವನಂತಪುರ ಮಾಧ್ವ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ರುಕ್ಕಿಣಿ ಕೆ, ಕಾರ್ಯದರ್ಶಿ ಡಾ.ಅನಿತಾ ಕುಮಾರಿ ಹೆಗಡೆ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಮಂಜುನಾಥ ಆಳ್ವ ಮಡ್ಡ, ಕೇರಳ ಸರ್ಕಾರದ ನಿವೃತ್ತ ಅರ್ಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು, ಮಾಧ್ವ ತುಳು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ಕುಂಜುರಾಯ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಪತ್ರಕರ್ತ ರವಿ ನಾಯ್ಕಾಪು, ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸಾ ದುಬೈ, ಶಿವರಾಮ ಭಂಡಾರಿ ಮುಂಬೈ, ನಾಟಕ-ಸಿನಿಮಾ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ ಮಂಗಳೂರು, ತುಳು ಸಂಶೋಧಕ ಎಲ್.ಆರ್. ಪೋತ್ರಿ, ರಾಘವ ಚೇರಾಲು, ಶಿವಾನಂದ ಕೋಟ್ಯಾನ್ ಮಸ್ಕತ್ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ಸಾಧಕರಿಗೆ ಗೌರವಾರ್ಪಣೆ ನಿರ್ವಹಿಸುವರು.

ಮಧ್ಯಾಹ್ನ 12.00 ರಿಂದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿ ಸಂಗಮ ನಡೆಯಲಿದೆ. ಎಡ್ವರ್ಡ್ ಲೋಬೋ ತೊಕ್ಕೋಟು, ಗಿರೀಶ್ ಪುಲಿಯೂರ್, ಭಾಸ್ಕರ ರೈ ಕುಕ್ಕುವಳ್ಳಿ, ಡಾ.ಕವಿತಾ ಮಂಗಳೂರು, ಡಾ.ಹೆಚ್.ಪೂರ್ಣಿಮಾ ತಿರುವನಂತಪುರ, ಎನ್.ಡಿ.ರಾಜಾರಾಮ್ ತಿರುವನಂತಪುರ, ಸರಿತಾ ಮೋಹನ್ ಭಾಮ ತಿರುವನಂತಪುರ, ಡಾ.ಶೋಭನ್ ಕುಮಾರ್ ಕೊಂಪಳ್ಳಿ, ವಿಲ್ಸನ್ ಕಟೀಲು, ರಶೀದ್ ನಂದಾವರ, ಮೊಹಮ್ಮದ್ ಅಝೀಂ ಮಣಿಮುಂಡ, ಸಂಧ್ಯಾಗೀತ ಬಾಯಾರು, ಪುರುಷೋತ್ತಮ ಭಟ್.ಕೆ. ವಿವಿಧ ಭಾಷೆಗಳ ಕವನ ವಾಚಿಸುವರು.

ಮಧ್ಯಾಹ್ನ 1.00 ಗಂಟೆಯಿಂದ ಕನ್ನಡ, ಮಲೆಯಾಳಂ ತುಳು ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಪರಾಹ್ನ 2.00 ರಿಂದ ಬಹುಭಾಷಾ ಸಮಾಜದಲ್ಲಿ ಸಹಬಾಳ್ವೆ ಮತ್ತು ಸಂವಹನ ವಿಷಯದ ವಿಚಾರಗೋಷ್ಠಿಯಲ್ಲಿ ಸಾಹಿತಿ, ಸಂಶೋಧಕಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ಪ್ರೊ.ಎ.ಶ್ರೀನಾಥ್, ಅನಿರುದ್ದನ್ ನಿಲಾಮೇಲ್, ಉದಿನೂರು ಮೊಹಮ್ಮದ್ ಕುಂಞ ವಿಷಯ ಮಂಡಿಸುವರು. ಬಳಿಕ 3.00 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸೋಮಣ್ಣ ಬೀವಿನಮರದ ಅಧ್ಯಕ್ಷತೆ ವಹಿಸುವರು. ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡುವರು. ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ಬರೆದ ಗುರುದರ್ಶನ ಕೃತಿಯನ್ನು ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಬಿಡುಗಡೆಗೊಳಿಸುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಭಗತ್ ರಾಜ್ ನಿಜಾಮಕರಿ, ಡಾ.ಸಂಜೀವ್ ಕುಮಾರ್ ಅತಿವಾಲೆ, ತಿರುವನಂತಪುರಂ ಕರ್ನಾಟಕ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕಾಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್. ನಾಸಿ, ಯೋಜನಾ ವಿಜ್ಞಾನಿ ಡಾ. ಇಬ್ರಾಹಿಂ ಬಾತಿಸ್ ಕೆ., ಶಶಿಧರ ಶೆಟ್ಟಿ ಮುಟ್ಟ ಕೆ.ಜಿ.ಕೆ.ಕಿಶೋರ್, ಪ್ರವೀಣ್ ಕುಮಾರ್ ಕೊಡಿಯಾಲಬೈಲು, ಸರಿನ್ ಮೊಹಮ್ಮದ್, ಅನಂತಪುರಿ ಗಡಿನಾಡ ಸಂಸ್ಕೃತಿ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯಕಟ್ಟೆ, ಝಡ್. ಎ. ಕಯ್ಯಾರ್, ರವಿ ನಾಯ್ಕಾಪು ಮುಖ್ಯ ಅತಿಥಿಗಳಾಗಿರುವರು.ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೀರಗಾಸೆ, ಚಿಲಿಪಿಲಿ ಕುಣಿತ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕಥಕ್ ನೃತ್ಯ, ಮೋಹಿನಿಯಾಟ್ಟಂ, ಭರತನಾಟ್ಯ, ಯಕ್ಷಗಾನ ಹಾಗೂ ಕಥಕ್ಕಳಿ ಪ್ರದರ್ಶನ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ದಕ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್,
ಗಡಿನಾಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್ ಚನಿಯಪ್ಪ ನಾಯ್ಕ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಸಾಹಿತಿ ಮೀನಾಕ್ಷಿ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.

