ಮಂಗಳೂರು: ನೀರುಮಾರ್ಗ ಸಮೀಪದ ಶ್ರೀ ವಿಶ್ವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಇದರ ವತಿಯಿಂದ 35ನೇ ವರ್ಷದ ಸಾರ್ವಜನಿಕರ ಗಣೇಶೋತ್ಸವ ಹಾಗೂ ಸಿಂಧೂರ ಸಂಭ್ರಮ ಕಾರ್ಯಕ್ರಮ ಆ.26ರಿಂದ ಆ.29ರವರೆಗೆ ವೈಭವದಿಂದ
ನಡೆಯಲಿದೆ ಎಂದು ಕೀರ್ತಿರಾಜ್ ಪಡು ಕರಂದಾಡಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಕಳೆದ 35ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ಈ ಬಾರಿಯ ಗಣೇಶೋತ್ಸವವನ್ನು ಧಾರ್ಮಿಕ ಆಚರಣೆಯೊಂದಿಗೆ ವಿಭಿನ್ನವಾಗಿ ಆಚರಿಸಲು ಸಮಿತಿ ನಿರ್ಧರಿಸಿದೆ. ನಮ್ಮ ಮುಂದಿನ ಪೀಳಿಗೆಯಲ್ಲಿ ರಾಷ್ಟ್ರ ಪ್ರಜ್ಞೆ, ಜಾಗೃತಿಯೊಂದಿಗೆ ನಮ್ಮ ಭಾರತೀಯ ಸೇನೆಯ ವೀರ ಹೋರಾಟ ಮತ್ತು ವಿಜಯೋತ್ಸವಕ್ಕೆ ಗೌರವ ಅರ್ಪಿಸುವ ನಿಟ್ಟಿನಲ್ಲಿ ಈ ಬಾರಿ ಸಿಂಧೂರ ಸಂಭ್ರಮದೊಂದಿಗೆ ಗಣೇಶೋತ್ಸವ ಆಚರಿಸಲು ಸಮಿತಿ ನಿರ್ಧರಿಸಿದೆ ಎಂದರು.

ದಿನಾಂಕ.26ರಂದು ಸಂಜೆ 6.00ಕ್ಕೆ ಗೌರಿ ಪೂಜೆ, ಅನ್ನಸಂತರ್ಪಣೆ. ಆ.27ರಂದು ಬೆಳಗ್ಗೆ 7.00 ಕೊಂಬೇಲ್ನಿಂದ ವಿಘ್ನೇಶ್ವರ ದೇವರ ಮೂರ್ತಿ ಉತ್ಸವ ಸ್ಥಳಕ್ಕೆ ಆಗಮನ ಬಳಿಕ ಪ್ರತಿಷ್ಠೆ, ಗಣಹೋಮ, ಪ್ರಥಮ ಪೂಜೆ. 9.00ರಿಂದ ಭಜನೆ, ಸಿಂಧೂರ ಸಂಭ್ರಮ ನಾನಾ ಸ್ಪರ್ಧೆಗಳು. 12.30ಕ್ಕೆ ಮಹಾಪೂಜೆ, ಭಜನೆ, ಸಂಜೆ 8.00ಕ್ಕೆ ಮಹಾಪೂಜೆ, ಸಿಂಧೂರ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ,8.30ರಿಂದ ಅಮೃತೇಶ್ವರ ನಾಟ್ಯಾಲಯದಿಂದ ಸಿಂಧೂರ ಸಂಭ್ರಮ ನಾಟ್ಯ ವೈಭವ ಬಳಿಕ ತೆಲಿಕೆ ಕಲಾವಿದರ್ ಕೊಯಿಲ ಅಭಿನಯಿಸುವ ನಾಟಕ ಗೆಂದಗಿಡಿ. ಆ.28ರಂದು ಬೆಳಗ್ಗಿನ ಪೂಜೆ, ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 4.00ರಿಂದ ಭಜನೆ, 8.00ಕ್ಕೆ ಮಹಾಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ 9.00ರಿಂದ ವಿಘ್ನೇಶ್ವರ ಕಲಾರಂಗದ ಸದಸ್ಯರಿಂದ ಸಿಂಧೂರ ಸಾಂಸ್ಕೃತಿಕ ವೈಭವ, 10.00ರಿಂದ ಪಾಂಚಜನ್ಯ ಪ್ರತಿಷ್ಠಾನದಿಂದ ಮಂಗಳಾಪುರದ ಮಂಗಳಾಂಬೆ ನೃತ್ಯರೂಪಕ. ಮಹಾಗಣಹೋಮ, ಶೋಭಾಯಾತ್ರೆ : ಆ.29ರಂದು ಬೆಳಗ್ಗೆ 8.00ಕ್ಕೆ ಪೂಜೆ, 9.00ರಿಂದ ಮಹಾಗಣಹೋಮ ಪ್ರಾರಂಭ, ಭಜನೆ, 12.00ಕ್ಕೆ ಮಹಾಗಣಹೋಮ ಪೂರ್ಣಾಹುತಿ, ಸಿಂಧೂರ ಸಂಭ್ರಮ ಸಮಾರೋಪ ಹಾಗೂ ಸೇನೆಯಲ್ಲಿ ಸೇವೆಗೈದ ಯೋಧರಿಗೆ ಸನ್ಮಾನ, 1.00ಕ್ಕೆ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ. ಬಳಿಕ ಸಾರ್ವಜನಿಕ ಮಹಾಅನ್ನಸಂತರ್ಪಣೆ. ಸಂಜೆ 3.00ರಿಂದ ಶ್ರೀ ವಿಘ್ನೇಶ್ವರ ದೇವರ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ. ಉತ್ಸವ ಸ್ಥಳದಿಂದ ಹೊರಟ ಶೋಭಾಯಾತ್ರೆ ಪಡು ಬಂಟುಕಟ್ಟ ರಾಜಲಕ್ಷ್ಮೀ ಕಂಪೌಂಡ್ ಬಳಿ ಹಿಂತಿರುಗಿ ಚೆಲ್ಲಾಡಿ, ಬಿತ್ತ್ಪಾದೆ, ಶಾಂತಿಗುರಿ, ಮಾಡ್ರಬೈಲ್, ರಂಗಪಾದೆ, ನೀರುಮಾರ್ಗ, ನೆಕ್ಕರೆಪದವು, ಭಟ್ರಕೋಡಿ, ಪಾಲ್ದಾನೆ, ಬೈತುರ್ಲಿ, ಕುಡುಪು ಮಾರ್ಗವಾಗಿ ತೆರಳಿ ಗುರುಪುರದ ಪಲ್ಗುಣಿ ನದಿಯಲ್ಲಿ ವಿಘ್ನೇಶ್ವರನ ಮೂರ್ತಿ ವಿಸರ್ಜನೆಯಾಗಲಿದೆ

ಪತ್ರಿಕಾಗೋಷ್ಠಿಯಲ್ಲಿ ಪದ್ಮನಾಭ ಕೋಟ್ಯಾನ್, ಜಯಂತ್ ಅಮೀನ್ ಕೋರೆಟ್ಟು,ರಾಜೇಶ್ ಪಿಲ್ಚಂಡಿ,ಶಂಕರ್ ಸಾಲ್ಯಾನ್ ಪಡು,ಅರುಣ್ ಬಿತ್ತ್ ಪಾದೆ,ಶಶಿಕುಮಾರ್ ಉಪಸ್ಥಿತರಿದ್ದರು.

